ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ರ್ಕಳಳ ಗ್ರಂಥದಳ, ••••• -+ ••••• ನಾಯಕನ ಮನಸ್ಥಿತಿಯು ತಿಳಿವುತ್ತಿರಲಿಲ್ಲ. ಆದುದರಿತಿದ ಕವಿಯು ಮಾನುಷಸಜಾ ತೀಯವಾದ ರತಿವ್ಯಾಪಾರವನ್ನು ಅವುಗಳಲ್ಲಿ ಆರೋಪಿಸಿರುವನು. ಇದೂ ಅಲ್ಲದೆ ಆ ವ್ಯಾಪಾರವನ್ನು ಕಥಾನಾಯಕನೊಡನೆ ಪಾಠಕರೂ ನೋಡಿ ವಿಸ್ಮಿತರಾಗಬೇಕೆಂಬ ಮತ್ತೊಂದು ಉದ್ದೇಶವೂ ಕವಿಗಿದ್ದಿರಬಹುದು, ಪಕ್ಷಿಗಳು ಹೆಣ್ಣು ಗಂಡು ಜತೆ ಜತೆಯಾಗಿ ಕುಳಿತುಕೊಳ್ಳುವುದು, ಕಚ್ಚಾಡುವುದು, ಗುಡುಕು ಕೊಡುವುದುಇವು ಮೊದಲಾದುವು ಸಹಜವಾಗಿಯೇ ಸಂತೋಷಕರವಲ್ಲವೆ. ಹೀಗಿರಲು ಈ ರೀತಿ ಯಾಗಿ ಅವುಗಳ ಅನುರಾಗವನ್ನು ವರ್ಣಿಸಿದರೆ ಅನಂದವು ಮಿತಿಮೀರುವುದರಲ್ಲಿ ಸಂದೇಹವೇನು? ಈ ಅನುರಾಗಪ್ರಕಾರವನ್ನು ನಂಬುವಷ್ಟು ಯಾರೂ ಹುಚ್ಚರಲ್ಲ. ಆದಮಾತ್ರಕ್ಕೆ ಪಕ್ಷಿಗಳಲ್ಲಿ ಅನುರಾಗವಿಲ್ಲವೋ ಎಂದರೆ, ಇಲ್ಲದೆ ಇಲ್ಲ. ಈ ರೀತಿ ಯಾಗಿ ಮಾತ್ರವಿಲ್ಲ. ಆದರೂ ಇಲ್ಲಿ ಆನಂದ ಹೆಚ್ಚಾಗುವುದಕ್ಕೆ ಕಾರಣವೇನೆಂದರೆ, ಲೋಕದಲ್ಲಿ ಸಹಜವಾಗಿ ಯಾವುದು ಸಂಭವಿಸದೇ ಅದು ಸಂಭವಿಸುವಂತೆ ಎಲ್ಲಿ ಸ ಲ್ಪಟ್ಟರೂ ಒಂದರ ಧರವು ಮತ್ತೊಂದರಲ್ಲಿ ಆರೋಪಿಸಲ್ಪಟ್ಟರೂ ವಿಸ್ಮಯವುಂಟಾಗು ವುದು ಸಹಜ, ಪಕ್ಷಿಗಳ ವ್ಯಾಪಾರವರ್ಣನೆ ಸಹಜವಾಗಿಯೇ ಆನಂದದಾಯಕವು ; ಆ ಆನಂದವು ರತಿವ್ಯಾಪಾರವರ್ಣನೆಯಾದುದರಿಂದ ಇಲ್ಲಿ ವೃದಿ ಹೊಂದಿತು. ಆ ಆನಂ ದವು ಅಸಂಭಾವ್ಯವಾದುದು ಸಂಭಾವ್ಯವಾದಂತೆ ವರ್ಣಿಸಲ್ಪಟ್ಟಿತಾದುದರಿ೦ದ ಮಿತಿ ಮೀರಿತು. ಅದಂತಿರಲಿ, ಈ ರೀತಿಯ ವರ್ಣನೆಯನ್ನು ರಸಾಭಾಸವೆಂದು ರಸಜ್ಞರು ಏಕೆ ಕರೆವರು ? ರಸದಂತೆ ಕಾಣಿಸಿಕೊಳ್ಳುವುದೇ ಹೊರತು, ನಿಜವಾಗಿಯೂ ರಸ ಹುಟ್ಟದಾದುದರಿಂದ ಇದನ್ನು ರಸಾಭಾಸವೆಂದು ಹೇಳಿದರು. ರಸಾಭಾಸವೆಂದು ಹೇಳಿದ ಮಾತ್ರದಿಂದಲೇ ಅನಂದವಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ಆನಂದ ವೇನೋ ಉಂಟಾಗುತ್ತದೆ. ರಸದಿಂದ ಉಂಟಾಗುವಷ್ಟ (ಎಂದರೆ ಏವಂ ವಿಧ ಪಾದ ರಸವ್ಯಾಪಾರವನ್ನು ದುಷ್ಯಂತ ಶಕುಂತಳೆಯರಲ್ಲಿ ಆರೋಪಣೆ ಮಾಡಿ ಹೇಳಿ ದ್ದರೆ ಎಷ್ಟೋ ಅಷ್ಟು) ಆನಂದವು ಇಲ್ಲಿ ಉಂಟಾಗುವುದಿಲ್ಲ. ಆದುದರಿಂದಲೇ ಇಂಥ ವಗಳು ವಿಸ್ಮಯಜನಕವಾದುವುಗಳೆಂದು ಹಿಂದೆ ನಿರೂಪಿಸಲ್ಪಟ್ಟುವು. ಈ ರೀತಿಯಾದ ವಿಸ್ಮಯಜನಕವಾದ ವರ್ಣನೆಗಳನ್ನು ಆಲಂಕಾರಿಕರು ಅಲಂ ಪ್ರಭೇದಗಳೆಂದೇ ಗಣಿಸುವರು. ಆದರೂ ಅವುಗಳನ್ನು ನಾನು ಇಲ್ಲಿ ಬೇರೆಯಾ ಗಿಯೇ ನಿರೂಪಿಸಿದೆನು. ಏಕೆಂದರೆ- ಇಂಥವುಗಳು ಅಲಂಕಾರದಲ್ಲಿ ಅಡಗಿದುವು ಗಳಂದು ಹೇಳುವುದು ನನಗೆ ಸಮ್ಮತವಿಲ್ಲ, ಅಲಂಕಾರಿಕರಾದರೋ, ಭಾವ