ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನಿಸವುದುಂ. ೧ ವನ್ನೂ ವ್ಯಂಗ್ಯವನ್ನೂ ರಸವನ್ನೂ ಅಲಂಕಾರಗಳಲ್ಲಿಯೇ ಅಂತರ್ಭಾವ ಮಾ ಡುವಂತೆ ಇವುಗಳನ್ನೂ ಸೇರಿಸುವರು, ಇದಕ್ಕೆ ಅಲಂಕಾರವೇ ಕಾವ್ಯದಲ್ಲಿ ಸತ್ವ ಸ್ವ ವೆಂಬ ತಮ್ಮ ಉದ್ದೇಶವನ್ನು ಸ್ಥಿರಪಡಿಸುವುದೇ ಕಾರಣವೆಂದು ತೋರುತ್ತದೆ. ಅಲ್ಲದೆ ( ಕೃತಿಸತಿಗೆ ಶಬ್ದಾರ್ಥ ಜಾತವಂತೆರಡು ತೆರದಲ೦ಕೃತಿಯಕ್ಕುಂ ” ಎಂಬ ಅವರ ಅಭಿಪ್ರಾಯದ ಪ್ರಕಾರವೇ ಅಲಂಕಾರಗಳೆಂಬವ ಹೊರಗಣ ಶೋಭಾ ವಹವಾಗಿರಬೇಕು, ಈ ಕಾರಣದಿಂದಲಾಗಲಿ, ಅಥವಾ ಅನ್ಯಗಳನ್ನು ಅಲಂಕಾರ ವಿಶೇಷವೆಂದು ಒಪ್ಪಿಕೊಂಡರೂ ಅವುಗಳ ಪ್ರಾತುರವನ್ನೂ ಪ್ರಾಧಾನ್ಯವನ್ನೂ ಸ್ಥಿರಪಡಿಸುವ ಕಾರಣದಿಂದಲಾಗಲಿ ಬೇರೆಯಾಗಿ ನಿರೂಪಿಸುವುದರಲ್ಲಿ ಪ್ರಯೋಜನ ವಿಲ್ಲದೆ ಇಲ್ಲ. ಇವೂ ಅಲ್ಲದೆ ಉಕ್ತಿಭಂಗಿಯನ್ನು ಆಶ್ರಯಿಸುವುದರಲ್ಲಿ ಪ್ರಯೋಜನವ್ರಂಟೋ ಇಲ್ಲವೋ ವಿಚಾರಿಸೋಣ ? ಅಭಿಪ್ರಾಯವನ್ನು ನೆಟ್ಟ ನೆಟ್ಟಗೆ ಕವಲಿಲ್ಲದೆ ತಿಳಿಸುವು ದಕ್ಕಿಂತ ರಂಜಕವಾಗುವ ರೀತಿಯಲ್ಲಿ ತಿರುಗಿಸಿ ತಿರುಗಿಸಿ ಹೇಳುವುದರಲ್ಲಿ ಹೆಚ್ಚು ಪ್ರಯೋಜನವು ಕಂಡುಬರುತ್ತದೆ. ಮನಸ್ಸು ಸ್ವಲ್ಪ ಹೊತ್ತು ಸಂತೋಷದೊಡನೆ ವಿಷಯದಲ್ಲಿ ನಿಲ್ಲುವುದರಿಂದ ವಿಷಯವು ಚಿರಸ್ಥಾಯಿಯಾಗುವುದು. ಉಕ್ತಿಭಂಗಿ ಯನ್ನಾಶ್ರಯಿಸದಿದ್ದರೆ ಅಭಿಪ್ರಾಯವು ಉತ್ತೇಜಕವಾಗದು. ಆದುದರಿಂದಲೇ ಕವಿಗಳು ಉಕ್ತಿಭಂಗಿಯನ್ನಾಶ್ರಯಿಸಿಯೇ ವಿಷಯಗಳನ್ನು ತಿಳಿಸುವುದರಲ್ಲಿ ಯತ್ನಿ ಸುವರು. ಉದಾಹರಣೆಗಾಗಿ, (1) ತಿಳಿದವನಿಗೆ ಹೇಳಬೇಕೆ, ಎಂಬ ಅರ್ಥವನ್ನು ಲೀಲಾವತಿಯಲ್ಲಿ ವರವಿದ್ಯಾರಾಜವಿದ್ಯಾ | ವಿರಂಚನೆನಿಸಿರ್ಸ ನಿನಗೆ ನೀತಿಯ ಮಾತಂ || ವಿರಚಿಸಿ ಪೇಳ್ವುದು ತುಂಬಿಗೆ| ಪರಿಮಳಮಂ ಕೊಂಡು ಕೊನೆದು ಪೇಳ್ವವೊಲಕ್ಕುಂ||೧| ಎಂದು ತಿಳಿಸುವನು. ಇಲ್ಲಿ ಪರಿಮಳದ ಸ್ವರೂಪವನ್ನು ಸಹಜವಾಗಿ ತಿಳಿಯುವ ಶಕ್ತಿಯುಳ್ಳ ಆ ವಿಷಯದಲ್ಲಿ ಉಪಾಧ್ಯಾಯನಂತಿರುವ ದುಂಬಿಗೆ ಪರಿಮಳಸ್ವ ರೂಪ ವನ್ನು ಅಷ್ಟು ಚೆನ್ನಾಗಿ ತಿಳಿಯದ ಆ ವಿಷಯದಲ್ಲಿ ವಿದ್ಯಾರ್ಥಿ ದಶೆಯಲ್ಲಿರುವ ನಾವೂ ಉಪದೇಶಮಾಡುವುದಕ್ಕೆ ಹೊರಟಂತಾಯಿತೆನ್ನು ವುದೇ ಚಮತ್ಕಾರವು. 11