ಕವಿಸವುದುಂ V2 - ಈ ಪದ್ಯವು ವಾರನಾರಿಯರ ಸೌಂದರಾತಿಶಯವನ್ನು ವರ್ಣಿಸುವುದು. ಇಲ್ಲಿ ಉಕ್ಕಿ ಚಮತ್ಕಾರವೇ ಮುಖ್ಯ ಸಂಗತಿ, ಇಲ್ಲಿ ಕವಿಯು ತನ್ನ ಆಶಯವನ್ನು ನೆಟ್ಟಗೆ ಸ್ಪಷ್ಟವಾಗಿ ಹೇಳಿಲ್ಲ, ಮರೆಸಿಯೇ ಹೇಳಿರುವನು, ಹೇಳಿರುವ ರೀತಿಯು ಆಹ್ಲಾದಜನಕವಾಗಿದೆ. ಇಲ್ಲಿ ವ್ಯಂಗ್ಯವೂ ಇದೆ. ಆ ವ್ಯಂಗ್ಯಕ್ಕೆ ಉಕ್ತಿಭಂಗಿಯು ಆಶ್ರಯ ಕೊಟ್ಟಿದೆ. ಇವು ಒಂದೊಂದೇ ಆಹ್ಲಾದಜನಕವು. ಅವೆರಡೂ ಸೇರಿರು ವಾಗ ಸುಖಾತಿಶಯಕ್ಕೇನು ಕಡಮೆ ? ಒಬ್ಬಳು ಗಂಡನನ್ನು ಊರ್ವಶಿಗೂ, ಒಬ್ಬಳು ಗಂಗೆಗೂ, ಒಬ್ಬಳು ಗೋಪಿಗೂ ಕೊಟ್ಟರು ಎಂದರೆ, ಅವರ ಸೌಂದರ್ಯ ಸೌಭಾ ಗ್ಯಾಭಿಜಾತ್ಯಗಳನ್ನು ಏನೆನುತ ಹೊಗಳುವುದು ? ರತಿಯೇ ಶರೀರವಿಲ್ಲದ ಅನಂಗನ ನ್ನು ಒಪ್ಪಿ ಪತಿಯನ್ನಾಗಿ ವರಿಸಿದಳೆಂದರೆ, ಅವಳ ಚಾತುರವೆಷ್ಟರದು ? ಎಂದು ಆ ಪುರದ ವೇಶ್ಯಾಸ್ತ್ರೀಯರು, ತಮ್ಮ ವಿಲಾಸಗರ್ವದಿಂದ ನಗುತ್ತಿದ್ದರು ಎಂದು ಪದ್ಯಾರ್ಥಿ: ಮಹಾರೂಪವತಿಯಾದ ಶಚೀದೇವಿಯೇ ಪತ್ನಿ ಯಾಗಿರುವಾಗ ಇಂ ದ್ರನು ಊರ್ವಶಿಯಲ್ಲಿ ಅನುರಕ್ತನಾದರೆ ಅವಳ ರೂಪದಲ್ಲಿ ಅತಿಶಯವೇನು ? ಪರ್ವ ತರಾಜನ ಮಗಳಾದ ಗೌರಿಯು ಇರುವಾಗಲೇ ಅರ್ಧನಾರೀಶ್ವರನಾದ ಈಶ್ವರನೂ ಕೂಡ ಗಂಗೆಯನ್ನು ತಲೆಯಲ್ಲಿ ಮರೆಸಿಟ್ಟು ಕೊಂಡು ಲಾಲಿಸುತ್ತಿದ್ದನಾದರೆ, ಪಾರ್ವ ತಿಯ ಸೌಭಾಗ್ಯದಲ್ಲಿ ಅತಿಶಯವೇನು ? ಕ್ಷೀರಸಾಗರೋದ ವಳಾದ ಲಕ್ಷ್ಮಿಯನ್ನೂ ಲಕ್ಷಮಾಡದೆ, ಶ್ರೀ ಕೃಷ್ಣನು ಒಬ್ಬ ಗೊಲ್ಲಗಿತಿಯಲ್ಲಿ ಅನುರಕ್ತನಾದರೆ, ಅವಳ ಹು ಟ್ಟಿನಲ್ಲಿ ಮಹಿಮೆಯೇನು? ಐಹಿಕ ಸುಖವನ್ನು ಅನುಭವಿಸಲು ಅನಂಗನನ್ನು ಪತಿಯಾ ಗಿ ವರಿಸಿದ ರತಿಯ ಚಾತುರವು ಒಂದು ಚಾತುರವೇ ? ತಮ್ಮಲ್ಲಿ ಅನುರಕ್ತರಾಗಿ ಬಂದವರಾದರೋ ಹಾಗಲ್ಲ; ತಮ್ಮನ್ನು ಎಂದೆಂದಿಗೂ ಬಿಟ್ಟು ಹೋಗರು, ತಮ್ಮ ವಿಲಾಸವಂಥದು~ಎಂದು ಮೆರೆಯುತ್ತಿದ್ದರೆಂದು ಪದ್ಯಾಭಿಪ್ರಾಯ. ಈ ವಾರವಿಲಾಸಿ ನಿಯರು ಶಚೀ ಗೌರೀ ಲಕ್ಷ್ಮೀ ರತಿಗಳಿಗಿಂತಲೂ ಮೇಲಾಗಿದ್ದರೆಂದು ವಾಚ್ಯಾರ್ಥ. ಹೀಗಿರಲು ಉಕ್ತಿಭಂಗಿಯನ್ನ೦ಗೀಕರಿಸದೆ ಅಭಿಪ್ರಾಯವನ್ನು ಸಾಮಾನ್ಯ ವಾದ ರೀತಿಯಲ್ಲಿ ತಿಳಿಸಿದರೆ ಅಭಿಪ್ರಾಯವು ಮನಸ್ಸಿನಲ್ಲಿ ಅಷ್ಟು ಚೆನ್ನಾಗಿ ಹಿಡಿಯು ವುದಿಲ್ಲ, ಮರೆಸಿ ಮರೆಸಿ ಅಭಿಪ್ರಾಯವನ್ನು ತಿಳಿಸುವುದರಲ್ಲಿ ಹೆಚ್ಚಾದ ಫಲವು ಕಂಡುಬರುವುದು ಅಭಿಪ್ರಾಯವು ತಿಳಿದಂತಾಗಬೇಕು, ಆದರೆ ತಿಳಿಯಬಾರದು. ಬಹುಕಾಲ ಬುದ್ದಿಗೆ ಕೆಲಸ ಕೊಟ್ಟರೇನ ಅಭಿಪ್ರಾಯವು ತಿಳಿಯಬೇಕು. ಹೀಗೆ ಹೇಳುವುದರಲ್ಲಿ ಅಭಿಪ್ರಾಯವು ಮನಸ್ಸಿನಲ್ಲಿ ಖಚಿತವಾಗಿ ಸುಖಾಧಿಕ್ಯವನ್ನು ಕೊಡು!
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೦೮
ಗೋಚರ