wv ಕರ್ನಾಟಕ ಗ್ರಂಥಮಾಲೆ. ವುದು, ಶ್ರಮಪಟ್ಟು ಸಂಪಾದಿಸಿದ ವಸ್ತುವಿನಲ್ಲಿ ಅಭಿಮಾನ ಹೆಚ್ಚು, ಅದರಲ್ಲಿ ಸುಖವೂ ಹೆಚ್ಚು, ಆದುದರಿಂದ ಕವಿಗಳು ಕ್ರಿಯಾಗೋಪನ ಕರ್ತೃಗೋಪನ, ವಕ್ರೋಕಿ, ಯಮಕ, ಗತಪ್ರತ್ಯಾಗತ, ಅಂತರ್ಲಾಪಿ, ಬಹಿರ್ಲಾಪಿ ಇತ್ಯಾದಿಗಳ ನುಳ್ಳ ಪದ್ಯಗಳನ್ನು ಬರೆದು ಅಲ್ಲಲ್ಲಿ ಸಂದರ್ಭಾನುಸಾರ ಉಚಿತ ಸ್ಥಳಗಳಲ್ಲಿ ಸೇರಿಸು ವರು, ಅಂಥವುಗಳಲ್ಲಿ ಆನಂದವು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅಂಥವುಗಳು ಉಪ್ಪಿನಕಾಯಿಯಂತೆ ಭುಜಿಸುವಾಗ ರೋಚಕವಾಗದೆ ಇರವು, ಮಕ್ಕಳು ಮೊದ ಲಾಗಿ ಎಲ್ಲರಿಗೂ ಒಗಟುಗಳಲ್ಲಿ ಇದಕ್ಕೋಸ್ಕರಲೇ ಆಶೆ ಹೆಚ್ಚು, ಸಮಸ್ಯೆಗಳೂ ಈ ತರದ ವರ್ಣನೆಗಳೇ ಆಗಿರುವುವು. ಲಯಬದ್ಧ ವಾಗುವ ಹಾಗೆ ಪದಗಳನ್ನು ಸೇರಿಸುತ್ತ ಬಂದರೆ ಹಿತವುಂಟಾಗು ವುದು. ಆಕಡೆ ಸಂಗೀತವು ಸಾಹಿತ್ಯಕ್ಕೆ ಸಹಾಯಮಾಡಿರುವುದು, ಒಂದೊಂದೇ ಹಿತಜನಕವಾಗಿರುವಾಗ ಅವೆರಡೂ ಒಂದುಕಡೆ ಸೇರಿಬಂದರೆ ಆನಂದವು ಹೆಚ್ಚದೆ ಇರುತ್ತದೆಯೇ ? ಪ್ರಾಯಶಃ ಕಾವ್ಯಗಳು ಛಂದೋಬದ್ಧವಾಗಿಯೇ ಇರುವುವು. ಛಂದಸ್ಸು ಲಯವನ್ನಾಶ್ರಯಿಸಿರುವುದು. ಆದುದರಿಂದ ಶ್ರೇಷ್ಟವಾದ ಅಭಿಪ್ರಾಯ ಗಳನ್ನು ಛಂದೋಬದ್ದವಾಗಿಯೂ ಇಲ್ಲವೆ ಪಾಡುಂಗಬ್ಬವಾಗಿಯೂ ಇಲ್ಲವೇ ರಗಳೆ ಗಳಾಗಿಯ ಕವಿಗಳು ಬರೆವರು, ಪ್ರಾಸಬದ್ಧವಾಗಿಯೂ, ಲಯಬದ್ಧವಾಗಿಯೂ, ಹಾಡುವುದಕ್ಕೆ ಹಿತವಾಗುವಂತೆ ಮೃದುಶೈಲಿಯುಳ್ಳು ದಾಗಿಯೂ, ಉತ್ತಮವಾದ ಅಭಿಪ್ರಾಯವುಳ್ಳು ದಾಗಿಯೂ, ಇರುವ ಕಾವ್ಯವು ಸರ್ವೋತ್ತಮವಾದ ಕಾವ್ಯ ವೆಂಬುದು ಘಂಟಾಘೋಷವಾಗಿದೆ. ಪದ್ಯಾಕ್ಷರಗಳು ಪದ್ಮ, ಖಡ್ಗ, ಮುರಜ, ಚಕ್ರಾದ್ಯಾಕಾರಗಳಾಗಿ ವಿನ್ಯಾಸ ಹೊಂದುವುವಾಗಿದ್ದರೆ, ಬಂಧವೆಂದು ಹೆಸರು. ಅವುಗಳು ವಿಸ್ಮಯ ಜನಕಗಳೆಂದು ಹೇಳಬೇಕಾಗಿಯೇ ಇಲ್ಲ. ಆಕಡೆ ರೂಪಸೌಂದರ್ಯವು ಸಾಹಿತ್ಯಕ್ಕೆ ಸಹಾಯ ಮಾಡಿದೆ. ಹೀಗಿರಲು ನಾಮೋದ್ದಾರ, ವಿಷಯೋದ್ಧಾರವಾಗುವ ಬಂಧವು ಚಿತ್ರ ಕವಿತೆಯಲ್ಲಿ ಅತ್ಯುತ್ತಮವಾಗಿ ಪಾಮರಪ್ರಾಜ್ಞ ತಾರತಮ್ಯವಿಲ್ಲದೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿಯೂ ಇರುವುದರಲ್ಲಿ ಏನತಿಶಯವು ? , ಹೀಗಿರುವುದರಿಂದ ಕವಿಗಳು ಸಾಧ್ಯವಾದಮಟ್ಟಿಗೆ ಇವುಗಳನ್ನೆಲ್ಲಾ ತರುವುದ ರಲ್ಲಿ ಯತ್ನಿಸುವರು. ಇವೂ ಒಂದು ವಿಧವಾದ ಸಂಕೇತವು,
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೦೯
ಗೋಚರ