ಕಪಿಸವರು. •••••• +++A #+4+ ಲೋಕದ ವಸ್ತುಗಳ ಸಹಜವಾದ ಸ್ಥಿತಿಗೂ, ಕಾವ್ಯಗಳಲ್ಲಿ ಕವಿಗಳಿಂದ ನಿರೂ ಪಿತವಾಗುವ ಅದೇ ವಸ್ತುಗಳ ಸ್ಥಿತಿಗೂ, ಬಹಳ ವ್ಯತ್ಯಾಸವು ಕಂಡು ಬರುತ್ತದೆ. ಆ ವ್ಯತ್ಯಾಸವು ಸಹಜವು ; ಆರೋಪಿತವಾದುದಲ್ಲ. ಅಂಥ ವ್ಯತ್ಯಾಸವು ಸ್ವಭಾವವಾ ಗಿಯೇ ಆಗಬೇಕು ಇದ್ದುದನ್ನು ಇದ್ದ ಹಾಗೆಯೇ ತಿಳಿಸಬೇಕೆಂದು ಯತ್ನಿಸಿ ದರೂ ಆ ವ್ಯತ್ಯಾಸವನ್ನು ಬಿಟ್ಟು ಹೇಳಲಾಗುವುದಿಲ್ಲ. ಹೀಗಿರಲು ಆ ವ್ಯತ್ಯಾಸ ವೆಂಥದೆಂಬುದನ್ನು ತಿಳಿಯಲೇ ಬೇಕು. ಆ ವ್ಯತ್ಯಾಸವು ತಿಳಿಯದಿದ್ದರೆ, ಕಾವ್ಯ ದ ಮಹಿಮೆಯೇ ತಿಳಿಯದೆ ಹೋದಂತಾಗುವುದು. ಆ ವ್ಯತ್ಯಾಸವನ್ನು ನಾಲಗೆಯು ತಿಳಿಸಲಾರದು ; ಅನುಭವವೇ ತಿಳಿಸಬೇಕು, ಬೆಟ್ಟವನ್ನು ದೂರದಿಂದ ನೋಡುವ ದಕ್ಕೂ ಹತ್ತಿರದಿಂದ ನೋಡುವುದಕ್ಕೂ ವ್ಯತ್ಯಾಸವಿದೆ. ಒಂದು ಪದಾರ್ಥವನ್ನು ಹಾಗೆಯೇ ನೋಡುವುದಕ್ಕೂ ಅದರ ಪ್ರತಿಫಲನವನ್ನು ಕನ್ನಡಿಯಲ್ಲಿ ನೋಡುವು ದಕ್ಕೂ ವ್ಯತ್ಯಾಸವಿದೆ. ಅದೇ ವಿಧವಾದ ವ್ಯತ್ಯಾಸವು ವಸ್ತುಸ್ಥಿತಿಗೂ ಕಾವ್ಯದೆ. ವರ್ಣನೆಗೂ ಉ೦ಟು. < ದೂರದ ಬೆಟ್ಟ ನುಣ್ಣಗೆ ?” ಎಂಬ ಗಾದೆಯಲ್ಲಿರುವ CC ನುಣ್ಣಗೆ ” ಎಂಬ ಪದವು ದೂರದಲ್ಲಿ ನೋಡುವುದರ ಅತಿಶಯವನ್ನು ಸೂಚಿಸು ವದು, ಬೆಟ್ಟವನ್ನು ಹತ್ತಿರದಲ್ಲಿ ನೋಡಿದಾಗ ಅದರಲ್ಲಿರುವ ಬಂಡೆಗಳೂ, ಮುಳ್ಳು ಗಿಡಗಳೂ, ಹಳ್ಳತಿಟ್ಟುಗಳೂ, ಹಂಚಿ ಕಡ್ಡಿಯ ಪೊದರುಗಳೂ ಇನ್ನೂ ಇಂಥ ಮನ ಸ್ಸಿಗೆ ಮೋಹಕವಾಗದ ಪದಾರ್ಥಗಳೇ ಕಂಡುಬರುವುವು. ಆದುದರಿಂದಾಗ ಬೆಟ್ಟವು ಅಷ್ಟು ಆಹ್ಲಾದಕರವಾಗಿರುವದಿಲ್ಲ. ದೂರದಿಂದ ನೋಡಿದಾಗಲೋ ಆ ನೀರಸವಾದ ಪದಾರ್ಥಗಳೇ ಒಂದಕ್ಕೊಂದು ಶೋಭಾದಾಯಕಗಳಾಗಿ ಬೆಟ್ಟದ ಸಮುದಾಯ ಶೋಭೆಗೆ ಕಾರಣವಾಗುವುವು. ಆದುದರಿಂದಲೇ ಬೆಟ್ಟವು ಆಹ್ಲಾದಕವಾಗಿ ಆಗು ವುದು. ಅಥವಾ, ದೂರದೃಷ್ಟಿಯೆಂಬ ಪದಾರ್ಥದಿಂದ ಸ್ವಭಾವತಃ ಒರಟೊರ ಟಾಗಿ, ಗಾತ್ರದಲ್ಲಿ ಹೆಚ್ಚು ಕಡಮೆಯುಳ್ಳವುಗಳಾಗಿ, ಮೋಹವನ್ನು ೦ಟುಮಾಡುವ ಗುಣಲೇಶವನ್ನೂ ಹೊಂದದ, ಬಂಡೆ ಮೊದಲಾದ ಪದಾರ್ಥಗಳೂ ಕೂಡ ನುಣು ಪಾಗಿಯೂ, ಪರಸ್ಪರ ಶೋಭಾದಾಯಕವಾಗಿ ಒಟ್ಟಿಗೆ ರಮಣೀಯವಾಗಿಯೂ, ಫಾಳಧಭ್ಯವುಳ್ಳವುಗಳಾಗಿಯೂ ಮಾಡಲ್ಪಡುವುದೇ ಬೆಟ್ಟದ ಆಹ್ಲಾದಕತ್ವಕ್ಕೆ ಕಾರಣ ವಾಗಿರಬಹುದು. ಹೀಗೆಯೇ ಕನ್ನಡಿಯ ಚೌಕಟ್ಟಿನಲ್ಲಿಟ್ಟ ೧೬ ವಟವೂ ಕನ್ನಡಿಯ ತೇಜಸ್ಸಿನಿಂದ ಸೌ೦ದರ್ಯದ ಹೆಚ್ಚಿಗೆಯನ್ನು ಹೊಂದುವುದು, ಬರಿಯಚಿತ್ರಪಟದಲ್ಲಿ ಯಾದರೋ ಬಣ್ಣದಲ್ಲಿ ಹೆಚ್ಚು ಕಡಮೆ, ಹುಳುಕು, ಕೊಳೆ, ಚಿತ್ತು, ಭಾವದಲ್ಲಿ ಓರೆ 1
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೧೦
ಗೋಚರ