fo ಕರ್ಣಾಟಕ ಗ್ರಂಥಮಾಲೆ. - - * - * * * * * * * * • • • • • ••••••• • • • • • * * * * * ಮುಂತಾದುವು, ಚೆನ್ನಾಗಿ ಕಾಣಬರುವುವು, ಅಂಥ ದೋಷಗಳು ಕನ್ನಡಿಯ ಮೂಲ ಕವಾಗಿ ನೋಡಿದ ಚಿತ್ರಪಟದಲ್ಲಿ ಪ್ರಾಯಶಃ ಕಂಡುಬರುವುದಿಲ್ಲ, ಕನ್ನಡಿಗೆ ಆ ಚಿತ್ರದಲ್ಲಿ ಇದ್ದ ದೋಷಗಳನ್ನು ತನ್ನ ತೇಜಸ್ಸಿನಿಂದ ಮರಸಿ ತನ್ನ ಥಾಳಥಳವನ್ನು ಕೊಟ್ಟು ಅದರ ಶೋಭೆಯನ್ನು ಹೆಚ್ಚಿಸುವುದು ಗುಣವಾಗಿದೆ. ಇದನ್ನು ಕಂಡಲ್ಲವೆ ಜನಗಳು ಗೊಂಬೆ, ಚಿತ್ರಪಟ, ಕಾಗದದ ಹೂ, ಇಂಥ * ಅತಿಶಯಪದಾರ್ಥಗಳನ್ನು ಕನ್ನಡಿಯ ಪೆಟ್ಟಿಗೆಯಲ್ಲಿಟ್ಟು ನೋಡುವರು ; ಇಲ್ಲವೇ ಅವುಗಳ ಪ್ರತಿಫಲನವು ಬೀ ಳುವಹಾಗೆ ಕನ್ನಡಿಗಳನ್ನು ಎದುರುಬದರು ಕಟ್ಟುವರು. ಕನ್ನಡಿಯ ಮೂಲಕ ನೋ ಡುವುದರಲ್ಲಿ ಸಂತೋಷ ಹೆಚ್ಚುತ್ತದೆ, ಎಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ. ಇದಕ್ಕಾಗಿಯೇ ದೇವಸ್ಪ್ಯಾನಗಳಲ್ಲಿಯೂ ರಾಜಾಸ್ಥಾನಗಳಲ್ಲಿಯೂ ದೊಡ್ಡ ದೊಡ್ಡ ನಿಲುಗನ್ನ ಡಿಗಳನ್ನು ಕಟ್ಟು ವರು. « # ಒ೦ದು ವಸ್ತುವನ್ನು ಕನ್ನಡಿಯ ಮೂಲಕ ನೋಡುವುದರಲ್ಲಿಯೂ, ಬೆಟ್ಟ ವನ್ನು ದೂರದಲ್ಲಿ ನೋಡುವುದರಲ್ಲಿಯೂ ಹೇಗೋಹಾಗೆಯೇ ಲೋಕದ ವಸ್ತು ಗಳ ಸ್ಥಿತಿಯನ್ನು ಕಾವ್ಯವೆಂಬ ( ಶಬ್ದ ಮುಕುರ ?” ದಲ್ಲಿ ನೋಡುವುದರಲ್ಲಿ ನೌಮ್ಯ ತೆಯೂ ಆನಂದವೂ ಹೆಚ್ಚು ವವು. ಲೋಕದಲ್ಲಿ ವಸ್ತುಗಳ ಸಹಜವಾದ ಸ್ಥಿತಿಗಳು ಮನಸ್ಸನ್ನು ಕಾವ್ಯಮುಕುರದಲ್ಲಿ ಪ್ರತಿಫಲಿತವಾದಾಗ ಸೆಳೆಯುವಷ್ಟು ಸಹಜವಾಗಿ ಸೆಳೆಯಲಾರವು. ಹಾಗೆಂದರೆ, ವಸ್ತುವನ್ನು ಪ್ರತ್ಯಕ್ಷವಾಗಿ ನೋಡುವುದಕ್ಕಿಂತ ಕಾವ್ಯದ ಮೂಲಕ ಪರಿಚಯಮಾಡಿದರೆ ಅದರ ಸೌಮ್ಯತೆಯ ಆಹ್ಲಾದವೂ ಹೆಚ್ಚುವವೆಂದು ಹೇಳಿದಹಾಗಾಯಿತು. ಗಿರಿ, ನದಿ, ತೋಟ, ಕಣಿವೆ, ನಾರಂಗಮೊದಲಾದ ಮನೋಹರವಾದ ಪದಾರ್ಥಗಳನ್ನು ಪದೇಪದೇ ಸಾಕ್ಷಾತ್ತಾಗಿ ನೋ ಡುವ ಅನುಕೂಲ್ಯವಿದ್ದವರೂ ಕೂಡ ಅವನ್ನು ಬಿಟ್ಟು ಕಾವ್ಯ ಮೂಲಕವಾಗಿಯೇ ಸಾಕ್ಷಾತ್ಕಾರ ಮಾಡಿಕೊಳ್ಳಲು ಯತ್ನಿಸುತ್ತಿರುವುದೇ ಇದಕ್ಕೆ ನಾಕಾದ ನಿದರ್ಶಕ ವಾಗಿದೆ. ಜಲಪಾತವನ್ನೂ ಕೂಡ ಎರಡಾವೃತ್ತಿ ನೋಡಿದರೆ ವರನೆಯಾವೃತ್ತಿ ನೋಡಬೇಕೆಂಬ ಆಶೆ ಬಹುಶಃ ಹುಟ್ಟುವುದಿಲ್ಲ. ಕಾವ್ಯರಸಜ್ಜನಿಗೆ ಆ ಜಲಪಾತದ ವರ್ಣನೆಯನ್ನು ಓದುವುದರಲ್ಲಿ ತೃಪ್ತಿಯೇ ಉಂಟಾಗುವುದಿಲ್ಲ ; ಪದೇ ಪದೇ ಓದು ತಲೇ ಇರುವನು, ವಾಲ್ಮೀಕಿ ಕೃತವಾದ ಶ್ರೀ ರಾಮಾಯಣದಲ್ಲಿರುವ ವಂಚವ ಟೀವರ್ಣನೆಯು ಯಾವ ರಸಜ್ಞನಿಗೆತಾನೆ ಬೇಸರಿಕೆಯನ್ನು ೦ಟುಮಾಡೀತು ? ಇಪ್ಪ ತನೆಯ ಸಲ ಓದುವಾಗಲೂ “ ನವಂ ನವವಿವಾಭಾತಿ ” ಎನ್ನು ವಹಾಗೆ ಹೊಸ
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೧೧
ಗೋಚರ