ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸವುದುಂ.

ಆ‌ • - -4° ೫ • • • • • ಹೊಸದಾಗಿಯೇ ಕಂಡುಬರುವುದೇಹೊರತು ಹಿಂದೆ ಅನುಭವಿಸಿದುದೆಂಬ ಅಭಿಪ್ರಾ ಯವೂ ಅದರಲ್ಲಿ ಬೇಸರಿಕೆಯ ಹುಟ್ಟುವುದಿಲ್ಲ. ಇದೇ ಅವುಗಳಿಗಿರುವ ವ್ಯತ್ಯಾ ಸವ, ಸನಿದರ್ಶಕವಾಗಿ ವಿಷಯಗಳನ್ನು ನಿರೂಪಿಸಿದರಲ್ಲದೆ ವಿಷಯವು ಹೃದ್ಯವಾ ಗದು ಎಂದು ಶಾಸ್ತ್ರಕಾರರು ಹೇಳುವುದರಿಂದ ಈ ಕೆಳಗಿನ ಉದಾಹರಣೆಗಳನ್ನು ಕೊಟ್ಟಿರುವೆನು. ಚಂದ್ರಪ್ರಭಪುರಾಣದಲ್ಲಿ ಬಾಲಲೀಲೆಯ ವರ್ಣನೆ: ೧. ( ಅನಿಮಿತ್ತಂ ಪನೆಗಳ ಪಳಚ್ಚನೆಸೆನನ್ನ೦ ಮಂದಹಾಸಕಾ | ಶನಮಂ ಮುದ್ದು ಮೊಗಕ್ಕೆ ತಂದು ಪರಿತಂದಪ್ಪಪ್ಪೆನುತಪ್ಪಿ ಪಿಂ || ದನೆ ಪೊಕ್ಕೊಯ್ಯನಡ೦ಗಿ ದಾಯೆನುತೆ ಮತ್ತೆಝಂದು ಮು೦ಡಾಡಿ ಭೂ | ಹನುಮಂ ದೇವಿಯನುಂ ಪ್ರಮೋದರಸದೊಳ್ಳೇ೦ಕಾಡಿಸಂ ನಂದನಂ ? ಇಲ್ಲಿ ಹೇಳಿರುವ ಸಂದರ್ಭವು ನಮ್ಮಲ್ಲಿ ಅನೇಕರಿಗೆ ಅನುಭವಕ್ಕೆ ಬಂದಿದೆ. ಅನುಭವಿಸಿದ ವೇಳೆಯಲ್ಲಿ ಇಷ್ಟು ಆನಂದವು ಉ೦ಟಾಯಿತೆ ಹೇಳಿ ? ಖಂಡಿತವಾಗಿ ಉಂಟಾಗಲಿಲ್ಲ. ಏಕೆ ? ಆಗ ನಾವು ಸುಖವನ್ನು ಅನುಭವಿಸದೆ ಇಲ್ಲ. ಅನುಭವಿಸು ತೇವೆ, ಆದರೂ ಅನುಭವಿಸುತ್ತೇವೆಂಬ ಜ್ಞಾನವು ಆಗ ನಮಗೆ ಇರುವುದಿಲ್ಲ; ಅತ್ತ ಕಡೆ ನಮ್ಮ ಗಮನವೂ ಇರುವುದಿಲ್ಲ. ಈಗಲಾದರೋ ಕವಿಗಳು ನಿರೂಪಿಸು ವುದರ ಮೂಲಕ ನಮ್ಮ ಆ ಅನುಭವವನ್ನು ಪುನಃ ಮನಸ್ಸಿಗೆ ತರುವರು; ಅದರಿಂದ ಸುಖವು ಸ್ಮರಣೆಗೆ ಬರುವುದು, ಆ ಸ್ಮರಣೆಯಲ್ಲಿ ಅನುಭವಿಸುತ್ತೇವೆ ಎಂಬ ಜ್ಞಾನವೂ ಸೇರಿರುವದು. ಆದುದರಿಂದ ಆ ಸ್ಮರಣೆಯು ಆ ಆನಂದವನ್ನು ಹೆಚ್ಚಿಸುವುದು, ವಸ್ತು ವಿನ ನಾದನುಭವವೇಳೆಗಿಂತ ಸ್ಮರಣಾನುಭವವೇಳೆಯು ಅತಿಶಯಾನಂದದಾಯ ಕವೆಂದು ಎಲ್ಲರೂ ಹೇಳುವರು. ನಾವೇ ಇಂಧ ಮಕ್ಕಳಾಟಿಕೆಯನ್ನು ನೋಡಿ ದರೂ ಇಷ್ಟು ಆನಂದವುಂಟಾಗಲಾರದು, ಕವಿಗಳ ಸಾಮರ್ಥ್ಯವೇ ಇದು. ಕವಿ ಗಳು ಅಂಥ ಸಂದರ್ಭವನ್ನೇ ಜೋಡಿಸಿ ಶಬ್ದ ಮುಕುರದಲ್ಲಿ ನಿಮ್ಮ ಎದುರಿಗೆ ನಿಲ್ಲಿಸು ವರು ಲೋಕ ಪರಿಚಯವೆಳ್ಳಷ್ಟೂ ಇಲ್ಲದವನಿಗೆ ನಿವ್ಯವು ಕಿವುಡನಿಗೆ ಕಿನ್ನರಿ ಯಂತೆ, ಗೂಗೆಗೆ ಸೂರನಂತೆ ವ್ಯರ್ಥವು, ಕುರುಡನು ಚಿತ್ರಪಟವನ್ನು ಹಾಗೆ ಯೇ ನೋಡುವುದಕ್ಕೂ ಕನ್ನಡಿಯ ಚೌಕಟ್ಟಿನಲ್ಲಿ ಇಟ್ಟು ನೋಡುವುದಕ್ಕೂ ಭೇದ ವನ್ನು ಎಂದೂ ಅರಿಯನ್ನು ಹಾಗೆಯೇ ಸುಖತಾರತಮ್ಯ ಜ್ಞಾನವಿಲ್ಲದವನು ಕಾ ವ್ಯದ ಸೊಗಸನ್ನು ಎಂದಿಗೂ ಅರಿಯಲಾರನು. ಅದಿರಲಿ, 7 ರಾಮಾಯಣದಲ್ಲಿನ ಈ ಎಮ್ಮೆಯ ಮಂದೆಯ ವರ್ಣನೆಯನ್ನು ಓದಿ