Fಳಿ ಕರ್ಕಾಟಕ ಗ್ರಂಥಮಾಲೆ. •a+++++++ ಹೇಳಿ ? ಹೀಗೆ ಸಾಕ್ಷಾದನುಭವವರ್ಣನೆಗಿಂತ ಆನಂದವು ಅತಿಶಯವಾಗಲು ಕಾರಣವೇನು, ಆಲೋಚಿಸಬೇಕಲ್ಲವೆ ? ಇಂಥ ವರ್ಣ್ಯಗಳನ್ನು ನಾವು ನೋಡ ದೇ ಇಲ್ಲ. ಆದರೂ ಕವಿಗಳು ನಿರೂಪಿಸುವ ಕ್ರಮದಲ್ಲಿ ಬೇರೆ ನಾವು ನೋಡುವು ದಿಲ್ಲ, ಏಕಾಕಾರವಾಗಿ ಒಟ್ಟಿಗೆ ನೋಡುತ್ತೇವೆಯೇ ಹೊರತು ನಮ್ಮ ಮನಸ್ಸನ್ನು ಅಪಹರಿಸತಕ್ಕ ಅವುಗಳಲ್ಲಿರುವ ಪ್ರಭೇದಗಳನ್ನು ಮಾತ್ರ ನೋಡುವುದಿಲ್ಲ. ನೋ. ಡಿದರೂ ನಮ್ಮ ಕಣ್ಣಿಗೆ ಅವು ಬೀಳುವುದಿಲ್ಲ, ಏಕೆ ? ಕವಿಯ ಕಣ್ಣನ್ನು ನಾವು ಪಡೆದಿಲ್ಲ. ಕವಿಯು ಶಬ್ದ ಮುಕುರದಲ್ಲಿ ಅದರ ಪ್ರತಿಫಲನವನ್ನು ತೋರಿಸುವಾಗ, ತನ್ನ ಕಣ್ಣನ್ನು ನಮಗೆ ಕೊಟ್ಟೆ ತೋರಿಸುವನು. ಆಗ ಹಿಂದೆ ಕಾಣದ ಪ್ರಭೇದ ಗಳನ್ನು ಸಾಕ್ಷಾತ್ತಾಗಿ ಕಂಡು, ( ಆಹಾ ! ಎಂಥ ಅತಿಶಯವಾದುದು ! ೨” ಎಂದು ಆನಂದಪಡುವೆವು, ಈ ವಿಷಯವನ್ನು ಸ್ಥಿರಪಡಿಸುವುದಕ್ಕೆ ಮತ್ತೊಂದು ಉದಾ ಹರಣೆಯನ್ನು ಕೊಡುತ್ತೇನೆ. ಅದು ಒಂದು ವನದ ಚಿತ್ರಪಟದ ವರ್ಣನೆಯಾಗಿ ರುವುದು, ಅಲ್ಲಿ ರಾಜನು ಆನಂದಪಟ್ಟ ಪ್ರಕಾರವನ್ನೂ ಕವಿಯು ಚೆನ್ನಾಗಿ ನಿರೂಪಿಸಿರುವನು, ಆರೀತಿಯ ನಿರೂಪಣದಲ್ಲಿ ನಾವೂ ಆ ರಾಜನಂತೆ ಮನಶ ಕ್ಷು ವಿನಿಂದ ನೋಡಿ ಅನುಭವಿಸಬೇಕೆಂಬುದೇ ಕವಿಯ ಉದ್ದೇಶ. - ಮಲ್ಲಿನಾಥಪುರಾಣ' ಆಶ್ವಾಸ, ೫, ೩೨-೪೦. ೪. ವಚನ (ಅದರ) ಸಮುದಾಯಶೋಭೆ ಲೋಚನಾ ಕೃಷಿ ಯಂ ಪುಟ್ಟಸಿ, ಬಳ್ಳಿ ಮಾವಿನ ಪಂಚವಲ್ಲವದ ಪಲವುಂ ಬಣ್ಣದ ಬೆರಕೆಯುಮಂ ಅಸುಕೆಯ ಪೋಸದ ೪ರಿಂಗುಲಿಕದಣೈಯುಮಂ ಕೊನಗಿನೆಸಳ ಪೊಂಬಣ್ಣಮುಮಂ ವಸಂತದೂತಿಯ ಕಪೋಲಕಾಂತಿಯುಮಂ ಸುರಹೊನ್ನೆ ಯ ತಿಲಕದರಲ ಬೆಳ್ಳುಮಂ ದವನದ ತಮಾ ಲವನದ ಕರ್ಪುಮಂ ಮರುಗದ ಮಯಿ೦ದವಾಳೆಯ ಪಸುರ್ಪುಮಂ ವಿವಿಧತರುಲ ತಾಗುಲ್ಮಜಾತಿಯ ಜಾತಿವ್ಯಕ್ತಿಯುಮಂ ಬೇರೆಬೇರೆ ಭಾವಿಸಿ ನೋಡಿ, - ತಿರಿದು ಕೊಳಕ್ಕೆ ಬಂದ ಪುವು ಕೆಂದಳಿರಂ ಗಿಳಿ ತಾವು ತುಂಡದಿಂ ! ದಿರಿದಪುದಾವುದೊಳ್ಳಿಡಿಗಳಂ ಬಸಕಾಂಡಮನಂಚೆ ಚ೦ಚುವಿಂ | ಕಿರಿಕಿರಿದಾಗಿ ಕರ್ಚಿ ಕುಡುಕಂ ಮರಿಗಿತ್ತವವೆಂಬ ಬ ಕ | ರೆದವೊಲಿರ್ದ ಚಿತ್ರಿಕನ ಚಿತ್ರದ ಚಿತ್ರವಿಧಕ್ಕೆ ಮೆಚ್ಚಿದಂ |೧ ಟೀಕು-ಗದ್ಯ, - ೧ • ಅಗ್ಗೆ -ಕೆಂಪುಬಣ್ಣ, ಜಾತಿವ್ಯಕ್ತಿ – ಅದರ ಜಾತಿಯನ್ನು ತೋರಿಸಿ
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೧೫
ಗೋಚರ