೧೦ ಕರ್ಣಾಟಕ ಗ್ರಂಥವಳಿ. ಒ - ಕೆಳೆಯಂಗಾಯ್ತ ಸುಮೋಕ್ಷಮಾಗದೆನಗಂ ಬಾಪ್ಪಾಂಬುಮೋಕ್ಷಂ, ಧರಾ | ತಳಮಂ ಕೊಟ್ಟ ನಿವಂ, ಜಳಾಂಜಳಿಯುಮಂ ನಾಂ ಕೊಟ್ಟಿ ನಿಲ್ಲನ್ಯ ಮಂ || ಡಳಮಂ ಸುಟ್ಟ ನಿವಂ ಪ್ರಕೋಪಶಿಖಿಯಿಂದಾನೀತನಂ ಸತ್ನಿ ಯಾ । ನಳನಿಂ ಸುಟ್ಟಿನುಮಿಲ್ಲ, ಮತ್ಸೆ ಯತಮಂ ಕರ್ಣoಗಿದೇಂ ಕೂರ್ತೆನೋ | ಈ ವರ್ಣನೆಯನ್ನು ಓದುವವರ ಕಣ್ಣಿನಲ್ಲಿ ನೀರು ಬಾರದೆ ಇರುವದಿಲ್ಲ. ಅನೇಕರು ಅತ್ತಿರುವರು. ಈ ವರ್ಣನೆಯನ್ನು ಓದುವ ಕಾಲದಲ್ಲಿ, ಮಹಾಧೀ ರನಾದ ದುದ್ಯೋಧನನಿಗೂ ಇಂಥಸ್ಥಿತಿಯು ಬರಬಹುದೇ ಎಂದು ತೋರುತ್ತದೆ. ಎಂಥ ಧೀರರಾದರೂ ದುಃಖಕ್ಕೆ ಒಳಗಾಗದೆ ಇರರು ಎಂದೂ ತಿಳಿದು ಬರು ತದೆ. ಕವಿಯು ಇಲ್ಲಿ ನಮ್ಮನ್ನು ದುರೊಧನನ ಸ್ಪಿತಿಯಲ್ಲಿ ತಂದಿಟ್ಟು ನಮ್ಮ ಕಣ್ಣಿ ನಲ್ಲಿಯೂ ನೀರು ಬರುವಂತೆ ಮಾಡಿರುವುದು ಅತಿಶ ಖವೇ ಸರಿ. ಆ ನಿರೂಪಣ ಪ್ರ ಕಾರವು ನಮ್ಮ ಅನುಭವಕ್ಕನುಸರಿಸಿ ಬರುವುದು, ಅದರಿಂದ ದುಃಖವು ಇಮ್ಮಡಿಯಾ ಗುವುದು. ದುರೊಧನನನ್ನು ನಾವು ನೋಡಲಿಲ್ಲ. ಅವನು ಅತ್ತದ್ದನ್ನೂ ನೋಡ ಲಿಲ್ಲ, ಆದರೂ ಹೀಗೆಯೇ ದುಧನನು ಅತ್ತನೆಂಬ ನಂಬಿಕೆಯು ಹುಟ್ಟು ವುದು ಅದರ ಮೇಲೆ ನಮ್ಮ ನಮ್ಮ ಅನುಭವಕ್ಕೆ ಸದೃಶವಾಗಿಯೇ ದುರೊಧನನ ಸ್ಥಿತಿಯ ನ್ನು ನಿರೂಪಿಸಿ ಹೇಳಿರುವುದರಿಂದ, ಆಹ ! ನಮ್ಮ ಅನುಭವವೇ ಬಿಚ್ಚಿ ತೋರಿಸ ಲ್ಪಟ್ಟಿತು, ನಮ್ಮ ಅನುಭವವು, ಎಷ್ಟೆಷ್ಟು ನೆನಸಿಕೊಂಡರೂ ಮಿಂಚಿನಂತೆ ತೋರಿ ಅಡಗಿಹೋಗುತ್ತಿದ್ದಿತು. ಅಂಥದುದನ್ನೂ ಕವಿಯು ಹೇಗೆ ನಿರೂಪಿಸಿರುವನು, ನೋ ಡಿದೆಯಾ ??” ಎಂಬದಾಗಿ, ಕವಿಯಲ್ಲಿ ಗೌರವವು ಉಂಟಾಗುವುದು. ಅದಿರಲಿ. ಕರ್ಣನ ಸಾವಿನಲ್ಲಿ ಅಳುತ್ತಿದ್ದ ದುಧನನ್ನು ನೋಡಿದ್ದಲ್ಲಿ ದುಃಖವೇ ಉಂಟಾಗುತ್ತಿದ್ದಿತು ; ಅದರ ಸ್ಮರಣದಲ್ಲಿಯ ದುಃಖವೇ ಉಂಟಾಗುತ್ತಿದ್ದಿತು. ಈ ವರ್ಣನೆಯಲ್ಲಾದರೂ ಓದುವಾಗಲೂ ಸ್ಮರಣೆಗೆ ತಂದುಕೊಂಡಾಗಲೂ ಮೊದ ಲು ದುಃಖಹುಟ್ಟಿದರೂ ಕೂಡಲೇ ಸಂತೋಷ ಹಟ್ಟುತ್ತದೆ. ಪುತ್ರ ಮಿತ್ರ ಕಳತ್ರಾ ದಿಗಳ ಮರಣದಲ್ಲಿ ದುಃಖಪಡುತ್ತಿರುವವರನ್ನು ಸಂತೋಷದೊಡನೆ ಯಾರೂ ನೋ ಡಲಪೇಕ್ಷಿಸುವುದಿಲ್ಲ. ಈ ವರ್ಣನೆಯ ವಿಷಯವು ಮಾತ್ರ ಹಾಗಲ್ಲ. ಓದುವಾಗ ದುಃಖ ಹುಟ್ಟುತ್ತಿದ್ದರೂ ಪದೇಪದೇ ಓದಬೇಕೆನ್ನಿಸುತ್ತದೆ. ಆ ದುರೊಧನನ ದುಃಖವು ಶೋಕರಸವಾಗಿ ಪರಿಣಮಿಸುವುದೇ ಇದಕ್ಕೆ ಕಾರಣವು, ಅದು ದುಃಖದ ಪ್ರಕಾ ರವೇ ಆಗಿದ್ದ ಪಕ್ಷದಲ್ಲಿ ಪದೇಪದೇ ಓದಲು ನನ್ನ ಮನಸ್ಸು ಎಳೆಯಲ್ಪಡುತ್ತಿರಲಿಲ್ಲ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೨೩
ಗೋಚರ