ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಸರುಯ:ce kl • »» ಇಷ್ಟರವರೆಗೆ ಏನು ಹೇಳಿದಂತಾಯಿತು ? ಎಂದರೆ, ಲೋಕದಲ್ಲಿ ಸ್ವತ-ಏವ ಯಾವುದು ಸರಸವಾಗಿದೆಯೋ ಅದು ಶಬ್ದ ಮುಕುರದಲ್ಲಿ ಪ್ರತಿಫಲಿತವಾದಾಗ ಓಹಣೀಯತಮವಾಗಿ ಆಗುವುದು, ಎಂದು. ಈ ರೀತಿಯಲ್ಲಿಯೇ ಘೋರವಾದ ವಸ್ತುವೂ ಕೂಡ ಕಾವ್ಯಮೂಲಕ ಪ್ರತ್ಯ ಕ್ಷವಾದರೆ ನೌಮ್ಯತೆಯನ್ನು ಹೊಂದಿ ಸೃಹಣೀಯವಾಗುವುದರಲ್ಲಿ ಸಂಶಯವಿಲ್ಲ. ಹೇಗೆ ಭೂದೇವತೆಯು ತನ್ನ ಶರೀರದಲ್ಲಿರುವ ಸೌಮ್ಯವಾದ ಪದಾರ್ಥಗಳನ್ನು ತೋ ರಿಸಿ ಜನರ ಕಣ್ಮನಗಳನ್ನು ಎಳೆವಳೋ, ಹಾಗೆಯೇ ಭಯಜನಕವಾದ ಪದಾರ್ಥ ಗಳನ್ನು ತೋರಿಸಿ ಹೆದರಿಸುವಳು. ಹುಲಿಯು ಹೊದರನ್ನೂ ಹಾವಿನ ಹುತ್ತನ್ನೂ ಮತ್ತು, ಪ್ರಾಣಿಗಳು ಪರಸ್ಪರ ವಧೆಮಾಡಿ ತಿಂದು ಜೀವಿಸುವುದನ್ನೂ ನೋಡಿದಾಗ ಯಾರು ತಾನೇ ಭೀತಿಪಡುವುದಿಲ್ಲ ? ಅಂಥವುಗಳನ್ನು ನೋಡಿ, ಭೀತಿಪಟ್ಟು ಅತ್ತ ಕಡೆಯಿಂದ ಓಡಿ ಹೋಗುವುದಿಲ್ಲ ? ಹೀಗಿರಲು ಅಂಥವುಗಳನ್ನು ನೋಡಲಾ 'ಶೆ ಯಾರಿಗೆ ತಾನೆ ಹುಟ್ಟುವುದು ? ಹಾಗೆ ಆಶೆ ಹುಟ್ಟಿದರೂ ಅಪಾಯ ಸಂಭವಿಸ ದಂತೆ ದೂರದಲ್ಲಿ ನಿಂತೇ ನೋಡಲು ಅಪೇಕ್ಷಿಸುವು, ಸಾಕ್ಷಾತ್ತಾಗಿ ಯುದ್ಧವನ್ನೂ ವಧೆಯನ್ನೂ, ಅತ್ಯಂತ ಕಾಮಪೀಡಿತರ ಅವಸ್ಥೆಯನ್ನೂ, ಹಡಗು ಕಲ್ಲೋಲಮಾ ಲಾಭಿಹತವಾದ ಮುಳುಗಿ ಹೋಗುವಲ್ಲಿ ನಾವಿಕರ ಮತ್ತು ಪ್ರಯಾಣಿಕರ ಗಾಬರಿ ಯನ್ನೂ ಸಂಕಟವನ್ನೂ ನೋಡಲು ಯಾರಿಗೆ ಮನಸ್ಸು ಬರುವುದು ? ನೋಡಿದವ ರಿಗೂ ಕೂಡ ಅದು ನೆನಪಿಗೆ ಬಂದ ಕಾಲದಲ್ಲಿ ಸಂಕಟವನ್ನುಂಟುಮಾಡದೆ ಇರದು. ಇಂಥ ಅಹಿತವಾದ, ದುಃಖದಾಯಕವಾದ ಅವಸ್ಥಾ ವಿಶೇಷಗಳನ್ನು ಕವಿಯು ಕಾ ವ್ಯಮಾರ್ಗದಲ್ಲಿ ಪಾಠಕರ ಮನೋಭಿತ್ತಿಯಲ್ಲಿ ಚಿತ್ರಿಸಿದಾಗಲೋ ಎಂದರೆ ಆ ಭೀ ತಿಯೂ ಆ ದುಃಖವೂ ತೋರುವುದಿಲ್ಲ. ಆ ವರ್ಣನೆಯನ್ನು ನೆನೆಸಿಕೊಂಡಾಗಲೂ ದುಃಖ ಬರುವುದಿಲ್ಲ; ಓದುವಾಗಲೂ ಮನನ ಮಾಡುವಾಗಲೂ, ಆನಂದವೇ ಉಂ ಟಾಗುವುದು. ಅಲ್ಲದೆ ಪುನಃ ಪುನಃ ಓದಬೇಕೆಂಬ ಆಶಯ ಹುಟ್ಟುತ್ತಿರುವುದು. ಕಾಡಿನಲ್ಲಿ ಹುಲಿ ನೋಡಿ ಹೆದರುವವರೂ ಕೂಡ ಗೂಡಿನಲ್ಲಿ ಹುಲಿಯನ್ನು ನೋಡಿ ಸಂತೋಷ ಪಡುವಂತೆ ಸಹಜವಾಗಿ ಕ್ರೂರವಾದ ವಸ್ತುಗಳನ್ನು ನೋಡಲಫ ಕ್ಷಿಸದವರೂ ಕೂಡ ಶಬ್ದ ಮುಕುರದಲ್ಲಿ ಅವುಗಳನ್ನು ನೋಡಲಪೇಕ್ಷಿಸುವರು. ಆದು! ದರಿಂದ ಘೋರವಸ್ತುಗಳೂ ಕೂಡ ಕಾವ್ಯದಲ್ಲಿ ವರ್ಣಿತವಾದಾಗ ತಮ್ಮ ಕೌರ ವನ್ನು ಕಳೆದುಕೊಳ್ಳುವುದಲ್ಲದೆ ಸೌಮ್ಯ ತೇಜಸ್ಸಿನಿಂದ ಕೂಡಿ ರಮ್ಮುತಿಕುನ್ನು