ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ny ಕರ್ನಾಟಕ ಗ್ರಂಥಮಾಲೆ. ದಾನಂ ಪ್ರಿಯವಾಕ್ಸಹಿತಂ | ಜ್ಞಾನಮಗರ್ವ೦ ಕ್ಷಮಾನ್ವಿತಂ ಶೌರಮೆನಿ || ಪೀನುಡಿಯನೆ ನುಡಿಯಿಸಿದುದು | ದಾನಂ ಜ್ಞಾನಂ ಕ್ಷಮಾಗುಣ೦ ಧಮ್ಮಜನಾ | ಈ ಪದ್ಯದಲ್ಲಿ ಸರ್ವಕಾಲದಲ್ಲಿಯೂ ಸರ್ವಾವಸ್ಥೆಯಲ್ಲಿ ಒಂದೇ ಸ್ಥಿತಿಯ ಲ್ಲಿರುವುದೆಂಬುದು ಲೋಕಾನುಭವವಿರೋಧವಾಗಿರುವುದರಿಂದ ಧರ್ಮರಾಯನು ಪ್ರಾಯಶಃ ಹೀಗಿದ್ದನೆಂಬುದು ಕವಿಯ ತಾತ್ಸರವೇ ಹೊರತು ಮತ್ತೆ ಬೇರೆ ಅಲ್ಲ. « ಅಶ್ವತ್ಥಾಮೋ ಹತಃ ಕುಂಜರಃ ?” ಎಂಬ ವಾಕ್ಯವೂ, ರಾಜ್ಯ ಕಾಂಕ್ಷೆಯಿಂದಲೂ ಶತ್ರುನಿರಸನ ಬುದ್ಧಿಯಿಂದಲೂ ಯುದ್ಧ ಮಾಡಿದನೆಂಬುದೂ, ಇತ್ಯಾದ್ಯನೇಕವಾದ ಇಂಥ ವಿಷಯಗಳು ಕವಿಯ ತಾತ್ಸಲ್ಯವನ್ನು ದೃಢೀಕರಿಸುವುವಾಗಿವೆ. ವೈಶ್ರವಣ ಮಹಾರಾಜನ ವಿಷಯವಾಗಿ ಮಲ್ಲಿನಾಥ ಪುರಾಣದಲ್ಲಿ ಆವಿರುದ್ದವಿದೆಂಜಿನಮನು ! ಭವಿಸುವನಿಂದ್ರಿಯಸುಖ೦ಗಳ೦ ವ.ದುಂ ಊಾ | ರವು ತನ್ನ ನವೆಂಬನ್ನೆ ಗ | ಮವನೀಶ್ವರನಪ್ಪಕೆಯ ನಿಂದ್ರಿಯಜಯಮಂ ! ಎಂಬದಾಗಿ ಪ್ರವೃತ್ತವಾದ ಕವಿವಾಕ್ಯಕ್ಕೆ ಸಂಕುಚಿತಾರ್ಥವನ್ನಲ್ಲದೆ ಸಂಪೂ ರ್ಣಾರ್ಥವನ್ನು ಕಲ್ಪಿಸಲಾದೀದೀತೆ ? ಒಂದು ಪತ್ನಿ ವಿಯೋಗವೂ, ಒಂದು ಆಲ ದಮರವು ಗಾಳಿಯಿಂದ ಉರುಳಿ ನೆಲದಲ್ಲಿ ಬೀಳುವುದೂ ನಿರ್ವೇದಕಾರಣವಾಗಿ ಅನೇಕ ಗ್ರಂಥಗಳಲ್ಲಿ ಉಪಪಾದಿಸಲ್ಪಟ್ಟಿವೆ ; ಇ೦ಥವನ್ನು ನಂಬುವುದಕ್ಕೆ ಆಗುತ್ತ ದೆಯೇ? ಲೋಕಾನುಭವಕ್ಕೆ ವಿರೋಧವಷ್ಟೆ, ಭೋಜಮಹಾರಾಜನು ಕವಿಗಳಿಗೆ ಸನ್ಮಾನ ಕೊಡುವಾಗ ಈ ಅಕ್ಷರಲಕ್ಷಂ ದದೌ ” ಎಂದು ಹೇಳಿದ ವಾಕ್ಯಕ್ಕೆ ಯಥಾ ವತ್ತಾಗಿ ಅರ್ಥವನ್ನು ಯಾವ ವಿವೇಕಿಯೂ ಹೇಳುವುದಿಲ್ಲ. ಕೋಟೆಯ ಕೊನೆದೆನೆ ನೆಗೆದಿರಿ ! ವಾಟಿಗೆ ಕುದುರೆಗಳನವರ ಕಾ೮ ನಡುಮುಗಿಲೋಳೆ: 1. ನಾಟುತಿರೆ ದಿನಕರಂ ಬರ | ಲಾಟಿಸುವಂ ದಕ್ಷಿಣೋತ್ತರಾಯಣಯುಗದೊಳ• | ೨೨ ಎಂಬ ಕವಿವಾಕ್ಯವನ್ನು ಸತ್ಯವೆಂದು ನಂಬುವುದಕ್ಕಾದೀತೆ ? ಇಂಧವುಗಳಿಗೆ