ಕವಿಸವುದುಂ, ೧st ಅನಂತ್ ೦೬:೫೦, ೧೪ ಫೆಬ್ರುವರಿ ೨೦೧೮ (UTC) ಉದ್ದೇಶಾನುಗುಣವಾಗಿ ಅರ್ಥಕಲ್ಪನೆ ಮಾಡಬೇಕು, ಅದು ಹಾಗಿರಲಿ, ಒಂದು ವೇಳೆ ಪ್ರಯತ್ನ ಪಟ್ಟಾದರೂ ವರ್ಣ್ಯ ವಸ್ತುಗಳ ಸಹಜವಾದ ಸ್ಥಿತಿಯನ್ನು ತಿಳಿಸುವುದ ಕಾಗುವುದೆ ಎಂದರೆ, ಆಗಲಾರದೆಂದು ತೋರುತ್ತದೆ, ಬಹುಕಾಲಕ್ಕೆ ಹಿಂದೆ ಬಾ ಲ್ಯದಲ್ಲಿ ನೋಡಿದ ತೋಟವನ್ನು ಈಗ ನೋಡಿದರೆ ಅದು ಬಲುಚಿಕ್ಕದಾಗಿ ಹೇಗೆ ಹೇಗೋ ಕಂಡುಬರುತ್ತದೆ, ನಾವು ಹಿಂದೆ ಅಜ್ಜಿಯ ಮಡಿಲಲ್ಲಿ ಕುಳಿತುಕೊಂಡು ಅತ್ಯಾದರದೊಡನೆ ಕೇಳಿದ ಕಥೆಯನ್ನು ಈಗ ಓದಿದರೆ ಅಷ್ಟು ರುಚಿಸುವುದಿಲ್ಲ. ಹಿಂದೆ ಅನುಭವಿಸಿದ ವಸ್ತುವನ್ನು ಜ್ಞಾಪಿಸಿಕೊಂಡರೆ ಅದು ವಿಸ್ತ್ರತವಾಗಿ ಮಹಿಮೆಯೋ ಡನೆ ಕೂಡಿದುದಾಗಿಯೋ ಇಲ್ಲವೆ ಸಂಕುಚಿತವಾಗಿ ಸಾಮಾನ್ಯವಾದುದಾಗಿಯೋ ತೋರಿಬರುವುದಲ್ಲದೆ ಇದ್ದಂತೆ ಎಂದಿಗೂ ಕಾಣಬರುವುದಿಲ್ಲ. ಹಿಂದೆ ಕಳ್ಳರ ಕೈಗೆ ಸಿಕ್ಕಿ ಪಟ್ಟ ಕಷ್ಟವನ್ನು ಸಂಭವಿಸಿದಹಾಗೆಯೇ ಹೇಳುವುದಕ್ಕಾದೀತೇ ? ಇಲ್ಲ, ಸ್ವಲ್ಪ ಹೆಚ್ಚು ಮಾಡಿಯೋ, ಇಲ್ಲ ಕಡಮೆಮಾಡಿಯೋ ಹೇಳಬೇಕು, ಏಕೆಂದರೆ ನಾವು ಪಟ್ಟ ಕಷ್ಟವನ್ನು ಕೇಳುವವನಿಗೆ ತಿಳಿವಂತೆ ಮಾಡಬೇಕಷ್ಟೆ, ಒಬ್ಬನು ಬದುಕಿ ರುವಾಗ ಅವನಿಂದ ಹೊಂದಿದ ಅಲ್ಪ ಸಹಾಯವು ಅವನ ಮರಣವಾರ್ತೆಯನ್ನು ಕೇಳಿದಾಗ ವಿಶೇಷವಾಗಿ ತೋರಿಬರುವುದು, ಈ ಅರ್ಥವನ್ನು ಅರವಿನಲ್ಲಿರುವ ಶೆತ್ತರ್ವ ಕೆಂದಾವರೆ ಕರ್ಣ್ಣ ” ( ಎಂದರೆ ಸತ್ಯವನು ಕೆಂದಾವರೆಯ ಕಣ್ಣು ಆವನು ) ಎ೦ಬ ಗಾದೆಯು ತಿಳಿಸುವುದು, ಅಲ್ಲದೆ ಅತ್ಯಭಿಮತವಾದ ವಸ್ತುವಿ ನಲ್ಲಿ ವಿಶೇಷವಾಗಿ ಪ್ರೇಮವಿರುವುದರಿಂದ, ಆ ಪ್ರೇಮವನ್ನು ವ್ಯಕ್ತಗೊಳಿಸುವ ವಾ ಕ್ಯವು ಸಹಜವಾಗಿ ಹೆಚ್ಚುವುದು, ಹೀಗೆ ಅತ್ಯಹಿತವಾದ ವಸ್ತುವಿನಲ್ಲಿ ವಿಶೇಷ ವಾಗಿ ದ್ವೇಷವಿರುವುದರಿಂದ, ಆ ದ್ವೇಷವನ್ನು ತೋರಿಸುವ ವಾಕ್ಯವು ಮಿತಿಮೀ ರುವದು. ಹೀಗಿರಲು ನಾವು ಅನುಭವಿಸಿದ ರೋಗ ರುಜನ ಹರ್ಷ ಸಂತೋಷಗ ಇನ್ನು ನೆನಸಿಕೊಂಡಾಗಲೂ ವರ್ಣಿಸಿದಾಗಲೂ ಅವುಗಳ ಸಹಜ ಸ್ಥಿತಿಯು ಹೋಗಿ ವಿಪರೀತವಾಗಿ ಆಗುವಾಗ, ಮತ್ತೊಬ್ಬನ ವಿಷಯದಲ್ಲಿ ಅವುಗಳನ್ನು ವರ್ಣಿಸಲು ಹೊರಟ ಯತ್ನ ವು ಸಹಜಸ್ಥಿತಿಯನ್ನು ಮತ್ತಷ್ಟು ವಿಾರಿಯೇ ಹೋಗಬೇಕು, ಹೀಗಿ ರುವಾಗ ಕವಿಗಳ ವರ್ಣನೆಯು ಯಥಾವಸ್ಥಿತಿನಿರೂಪಣವಾಗಿ ಹೇಗಾಗುವುದು ? ಈ ಹೆಚ್ಚು ಕಡಮೆಯು ಅಭಿನಿವೇಶಾನುಗುಣವಾಗಿ ಉಂಟಾಗುವುದು. ಆದುದರಿಂವ ಪ್ರತಿಪಾದ್ಯ ಪುರುಷರ ವರ್ಣನೆಯಲ್ಲಿ ಅಭಿನಿವೇಶಾನುಗುಣವಾಗಿ ಪರಿಗಾಹ್ಯಾಂಶ ಗಳು ವ್ಯತ್ಯಸ್ತವಾಗಿ ವರ್ಣಿಸಲ್ಪಡಲೇ ಬೇಕು,
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೪೦
ಗೋಚರ