ಕವಿಸಮಯ. ೧೧ ಅನುಸರಿಸಿ ಹೋಗುವಂತೆ ಕವಿಕೃತಿಯ ಒಂದು ಉದ್ದೇಶವನ್ನು ಅನುಸರಿಸಿಯೇ ಇರುವುದು, ಕಾವ್ಯದಲ್ಲಿ ಸಂತೋಷಜನನ, ವಸ್ತುಸ್ಥಿತಿನಿರೂಪಣ, ಕೃತ್ಯಾ ಕೃತ್ಯ ವಿವೇಚನ, ಧಬೋಧೆ, ಉತ್ತರೋತ್ತರ ಶ್ರೇಯೋಭಿವೃದ್ದು ಪಾಯನಿರೂಪಣ... ಇವೇ ಮೊದಲಾದ ಅನೇಕ ಉದ್ದೇಶಗಳು ಇದ್ದೇ ಇರುವುವು. ಚಿತ್ರವನ್ನು ಬರೆವುದಕ್ಕೆ ಭಿತ್ತಿಯನ್ನಾಶ್ರಯಿಸುವಂತೆ ಜನಗಳಿಗೆ ಸುಖದುಃಖನಿಮಿತ್ತ ಕವಾದ ಪ್ರವೃತ್ತಿನಿವೃತ್ತಿಗಳನ್ನೂ ಅವನ್ನು ತಿಳಿಸುವ ವಾಗ್ರೂಪ ಕ್ರಿಯಾದಿಗಳನ್ನೂ ಸುಲ ಭವಾಗಿ ನಿರೂಪಿಸುವುದಕ್ಕೋಸ್ಕರವೂ, • ಸುಖ೦ ಮೇ ಭೂಯಾತ್ ” ಎಂಬು ದಾಗಿ ಸಕಲ ಜಂತುಗಳ ಪ್ರವೃತ್ತಿಯು ಇರುವಾಗ, ಅಂಧ ಪ್ರವೃತ್ತಿಯು ಸೈತರ ದುಃಖ ನಿಮಿತ್ತವಾಗದಂತೆ ಸ್ವತಃ ಉ೦ಟಾಗುವ ಉಪಾಯವನ್ನು ತಿಳಿಸುವದಕ್ಕೂ ಸ್ಕರವೂ * ; ಆಸಕ್ಷ್ಯವೃತ್ತಿಯಲ್ಲಿ ಜುಗುಪ್ಪೆ ಯನ್ನೂ ಸತ್ತ್ವ ವೃತ್ತಿಯಲ್ಲಿ ಅಭಿರುಚಿಯ ನ್ಯೂ ಹುಟ್ಟಿಸುವುದಕ್ಕೋಸ್ಕರವೂ ; ಲೋಕದಲ್ಲಿ ನಡೆವ ಕಾಠ್ಯಗಳಿಗೆ ಕಾರಣಗ ಳನ್ನು ಅನುಮಾನಿಸುವ ಕ್ರಮವನ್ನು ಕಲಿಸಿಕೊಡುವುದಕ್ಕೋಸ್ಕರವೂ ; ಮನಸ್ಸಿಗೆ ಮಾತ್ರ ಪ್ರತ್ಯಕ್ಷವಾಗುವ ಅಗಾಧವಾದ ವಿಷಯಗಳನ್ನು ಕಂಡು ನೋಡಿದಂತೆ ಸ್ಪಷ್ಟವಾಗಿ ತಿಳಿಸುವುದಕ್ಕೋಸ್ಕರವೂ; ಅತೀಂದ್ರಿಯವಾದ ವಿಷಯಗಳನ್ನು ಇಂದ್ರಿ ಗೋಚರವಾಗುವಂತೆ ಮಾಡುವುದಕ್ಕೋಸ್ಕರವೂ.- ಒಂದು ಕಥೆಯನ್ನು ಆಶ್ರಯಿಸಿ ಕವಿಗಳು ಪ್ರವರ್ತಿಸುವರು. ಈ ಅಭಿಪ್ರಾಯಗಳಲ್ಲಿ ಕೆಲವನ್ನು ಮಾತ್ರ ಮಮ್ಮಟನು « ಕಾವ್ಯಂ ಯಶಸೇರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ! ಸದ್ಯಃ ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ 13 ಎಂಬ ಶ್ಲೋಕದಲ್ಲಿ ಬೇರೆ ಪ್ರಕರಣದಲ್ಲಿ ಬೇರೆ ಉದ್ದೇಶದಿಂದ ಹೇಳಿರುತ್ತಾನೆ, ಇಲ್ಲಿ C« ಕಾವ್ಯ” ಶಬ್ದ ದಿಂದ ವರ್ಣನಾದಿಗಳಲ್ಲ, ವರ್ಣನಾದಿಗಳೇ ಅ೦ಗವಾಗಿ ಉಳ್ಳ ಅಂಗಿಯಾದ ರಮಣೀಯವಾದ ಶಬ್ದಾರ್ಥ ಸಂದರ್ಭವೇ ಹೇಳಲ್ಪಡುವುದೆಂದು ತೋ ರುತ್ತದೆ, CC ಯಶಸೇ 12 ( ಅರ್ಥಕೃತೇ ?” ಎಂಬುವು ಗೌಣಪ್ರಯೋಜನಗಳೆಂದು ಭಾವಿಸಬೇಕಾಗಿದೆ. ಯಾವ ಸುಖವನ್ನು ಅನುಭವಿಸಬೇಕಾದರೂ ಮತ್ತೊಬ್ಬನಿಗೆ ಕಕೊಟ್ಟೆ ಅನುಭವಿಸಬೇಕು. ಕಾವ್ಯಸುಖವು ಮಾತ್ರ ಹಾಗಲ್ಲ. ಇತರರಿಗೆ ಕಪ್ಪಕೊಡದೆ ತಾನೇ ಅನುಭವಿಸತಕ್ಕದು, ಸಂಗೀತ ಚಿತ್ರಕಲೆಗಳ ಇಂಥವೆ. 16
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೪೨
ಗೋಚರ