೧bb vvvvvv ಕರ್ನಾಟಕ ಗ್ರಂಥಮಾಲೆ. , ಮೇಲೆ ಹೇಳಿದ ಈ ಕಾವೊದ್ದೇಶಗಳು ಒಂದೇ ಕಥೆಯಲ್ಲಿ ಸಿದ್ಧಿಸುವುದೂ ಉಂಟು ; ಸಿದ್ಧಿಸದೇ ಇರುವುದೂ ಉಂಟು. ಕವಿಯು ಆರಿಸಿ ಕೊಳ್ಳುವ ಕಥೆಯು ಆತನ ಉದ್ದೇಶವನ್ನು ತೋರಿಸತಕ್ಕುದಾಗಿರಬೇಕು. ಕಥೆಯೆಂಬ ಭಿತ್ತಿಯನ್ನು ಆಶ್ರ ಯಸಿಯಲ್ಲವೆ ಹೃದ್ಯವಾದ ಚಿತ್ರವನ್ನು ರಚಿಸಬೇಕು, ಕವಿಗಳು ತಮ್ಮ ಉದ್ದೇಶ ವನ್ನು ಚೆನ್ನಾಗಿ ತಿಳಿಯಪಡಿಸುವುದಕ್ಕೆ ಅನುಕೂಲವಾದ ಕಥೆಯು +ಇತಿಹಾಸಗ ಇಲ್ಲಿ ಸಿದ್ಧವಾಗಿದ್ದರೆ ಅವುಗಳನ್ನೇ ಆರಿಸಿಕೊಳ್ಳುವರು. ಅ೦ಥ ಕಥೆಗಳಲ್ಲಿ ಜನರಂ ಜನೆಯ ಜನವಿಶ್ವಾಸವೂ ಉಂಟೆಂದು ಬಲ್ಲರು, ರಾಮಕೃಷ್ಣಾದಿ ಮಹಾಪುರುಷರ ಚರಿತ್ರೆಗಳಲ್ಲಿ ಸಹಜವಾಗಿಯೇ ಪ್ರೇಮವೂ ವಿಶ್ವಾಸವೂ ಜನಗಳಿಗೆ ಇರುತ್ತವೆ ಯಾ ದುದರಿಂದ ಅಂಥ ಕಥೆಗಳು ಸಪ್ಪ ವೃತ್ತಿಯನ್ನು ಉಂಟುಮಾಡುವದರಲ್ಲಿ ವಿಶೇಷ ಸಹಾಯಮಾಡುವವು. ಅಲ್ಲದೆ ಚರಿತ್ರಪುರುಷರ ಪ್ರೇಮಾನುರಾಗ ದುಃಖ ದ್ವೇಪಾ ದಿಗಳನ್ನು ವರ್ಣಿಸುವುದರಿಂದ ಪಾಠಕರಲ್ಲಿ ಸುಖದುಃಖಾದಿಗಳನ್ನು ಸುಲಭವಾಗಿ ಹುಟ್ಟಿಸಬಹುದು. ಈ ಸೌಕಯ್ಯವು ಇತರ ಕಥೆಗಳಲ್ಲಿ ಇರುವುದಿಲ್ಲ. ಆದುದರಿಂ ದಲೇ ನಮ್ಮ ಭರತಖಂಡದಲ್ಲಿ ಹುಟ್ಟಿದ ಉತ್ತಮ ಕಾವ್ಯಗಳೆಂದು ಗಣಿಸಲ್ಪಡುವು ಗಳೆಲ್ಲಾ ಐತಿಹಾಸಿಕ ಪುರಷರ ಚರಿತ್ರೆಗಳನ್ನೇ ಅವಲಂಬಿಸಿ ಹುಟ್ಟಿರುವವು. ಹೀ ಗೆಯೇ ಗ್ರೀಕ್, ಲ್ಯಾರ್ಟಿ, ಜರ್ಮ್ರ, ಇಂಗ್ಲೀಷ್ ಇವೇ ಮೊದಲಾದ ಪ್ರಸಿದ ವಾದ ಅನ್ಯ ಭಾಷೆಗಳಲ್ಲಿಯೂ ಉದ್ಭಥಗಳು ಆಯಾ ದೇಶಗಳ ಐತಿಹಾಸಿಕ ರಷರ ಚರಿತ್ರೆಗಳನ್ನು ಆಶ್ರಯಿಸಿರುವುವು. ಯಾವ ಐತಿಹಾಸಿಕ ಕಥೆಯಲ್ಲಿ ತಮ್ಮ ಉದಾರವಾದ ಉದ್ದೇಶವನ್ನು ಸಂಪೂ ರ್ಣವಾಗಿ ನೆರವೇರಿಸಿಕೊಳ್ಳಲಾಗುವುದಿಲ್ಲವೋ, ಅಲ್ಲಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾ ಟುವುದರ ಮೂಲಕ ತಮ್ಮ ಉದ್ದೇಶವನ್ನು ನೆರವೇರಿಸಿಕೊಳ್ಳಲಾಗುವುದೋ ಅಂಥ ಕಡೆ ಅಂಥಂಥ ಭೇದವನ್ನು ಕಲ್ಪಿಸಿ ಆ ಕಥೆಯನ್ನೇ ಆಶ್ರಯಿಸುವುದು ಮೇಲಲ್ಲವೆ. ಅಂಥ ವ್ಯತ್ಯಾಸ ಮಾಡುವುದರಲ್ಲಿ ಐತಿಹಾಸಿಕ ಕಥಾವಿಷಯಕವಾದ ನಂಬಿಕೆಯಲ್ಲಿ ಯಾವ ಕೊರತೆಯೂ ಉಂಟಾಗಲಾರದು, ಕಲ್ಪಿತ ಕಥೆಗಳಿಗಿಂತ ಕಾಮ್ಮೋದ್ದೇಶ ಗಳನ್ನು ಇದರಲ್ಲಿ ಸುಕರವಾಗಿ ಪಡೆಯಒಹುದು. ಹೇಗೆಂದರೆ- ಉದಾಹರಣೆ ಗಾಗಿ ಪ್ರಸಿದ್ಧವಾದ ಶಾಕುಂತಲ ನಾಟಕ ಕಥೆಯನ್ನು ವಿಮರ್ಶೆಮಾಡಿ ನೋಡೋಣ. ಇತಿಹಾಸಗಳೆಂದು ಪ್ರಸಿದ್ಧವಾದ ರಾಮಾಯಣ, ಮಹಾಭಾರತಗಳನ, ಅಪ್ಪ ದಶಪುರಾಣ, ಉಸಪುರಾಣಗಳನ್ನೂ ಈ ಪದವು ತೋರಿಸುತ್ತದೆ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೪೩
ಗೋಚರ