ಕವಿಸಮಯ, ೧೩ • • • • • • • • • • • • • • »••• • • • • • ಇದಕ್ಕೆ ಮೂಲವಾದ ಮಹಾಭಾರತದ ಶಕುಂತಲೋಪಾಖ್ಯಾನಕ್ಕೂ ಈ ನಾಟಕದ ಕಥೆಗೂ ಬಹಳ ಭೇದವಿದೆ. ದುಷ್ಯಂತ ಮಹಾರಾಜನು ಬೇಟೆಗೆಂದು ಹೊರಟು, ಮಧ್ಯದಲ್ಲಿ ಸಂಧಿಸಿದ ಕಣ್ಣಾಶ್ರಮವನ್ನು ಪ್ರವೇಶಿಸಿ, ಕಣ್ಣಋಷಿಯ | ಪರ್ಣಶಾಲೆಯಲ್ಲಿ ಶಕುಂತಲೆಯನ್ನು ಕಂಡು, ಅವಳ ಸೌಂದರಕ್ಕೆ ಬೆರಗಾಗಿ, ಅ೦ ತಃಕರಣಪ್ರವೃತ್ತಿಯನ್ನು ಪರೀಕ್ಷಿಸಿ, ಗಾಂಧರ್ವ ವಿವಾಹದಿಂದ ಅವಳನ್ನು ವರಿಸಿ, ( ಸ್ವಲ್ಪ ದಿವಸದಲ್ಲಿಯೇ ನಿನ್ನನ್ನು ಕರೆಯಿಸಿಕೊಳ್ಳುವೆನು. ಮೃಗಯಾರ್ಥವಾಗಿ ಬಲಿ ದಿರುವೆನು.” ಎಂದು ಮಾತು ಕೊಟ್ಟು, ತನ್ನ ರಾಜಧಾನಿಗೆ ಬಂದಹಾಗೆಯ ; ಅಲ್ಲಿಂದ ಮುಂದೆ ಕೆಲವು ವರ್ಷಗಳಾದಮೇಲೆ ಶಕುಂತಲೆಯು ಕುಮಾರನಾದ ತನ್ನ ಮಗನನ್ನು ಕರೆದುಕೊಂಡು, ಕಣ್ವರ ಅಪ್ಪಣೆಯಪಕಾರ ಋಷಿಪುತ್ರರ ಜತೆಯಲ್ಲಿ ರಾಜಾಸ್ಥಾನಕ್ಕೆ ಬಂದು, ಅಲ್ಲಿ ರಾಜನನ್ನು ನೋಡಿ, “ ಈತನೇ ನಿನ್ನ ಪುತ್ರನು, ಕಣ್ಣಾ ಶ್ರಮದಲ್ಲಿ ನನ್ನಲ್ಲಿ ಜನಿಸಿದವನು, ಈತನನ್ನು ಅಂಗೀಕರಿಸು ಎಂದು ಹೇಳಿದಹಾಗೆ ಯ ; ಅದಕ್ಕೆ ರಾಜನು “ ಇದು ನೀಚಳಾದ ಸ್ತ್ರೀಯು ರಾಜನನ್ನು ಸೇರುವ ಉ ಪಾಯವ ಎಂಬದಾಗಿ ಧಿಕ್ಕರಿಸಲು ; ಆ ಮಾತಿಗೆ ಶಕುಂತಳೆಯು ಕಿಡಿಕಿಡಿಯಾಗಿ ಅವನಿಗೆ ಪತಿಪತ್ನಿ ಯರ ಸ್ವರೂಪ, ಸಂಬಂಧ, ಪ್ರೇಮಾನುರಾಗ, ಧರಾಧರ, ಸತ್ಯಾ ನೃತ ಇವುಗಳ ಸ್ವರೂಪವನ್ನು ವಿಶದಪಡಿಸಿ, “ ನೀನೇ ಸತ್ಯವಂತನು, ನೀನೇ ಧಮ್ಮಾ ಧರಪ್ರವರ್ತಕನು, ನೀನೇ ಅಂತಾರಶೀಲನು, ಎಂದು ನಟಿಸುತ್ತಿರುವೆ ? ನೀನು ಹೇಳಿದುದು ಸುಳ್ಳೇ ಆದರೆ ನಿನ್ನ ತಲೆಯು ಸಹಸಹೋಳಾಗಿ ಬಿರಿಯಲಿ ! 2) ಎಂದು ಶಾಪಕೊಡುವಷ್ಟರೊಳಗೆ, ( ಈತನೇ ನಿನ್ನ ಪುತ್ರನು, ಈತನನ್ನು ಅಂಗೀ। ಕರಿಸು?'ಎಂದು ಹೊರಟ ಆಕಾಶವಾಣಿಯನ್ನು ಕೇಳಿ, ದುಷ್ಯಂತನು ಶಕುಂತಳೆಯ ನ್ನು ಕುರಿತು, 1 ಜನಪವಾದಕ್ಕೆ ಹೆದರಿ ಹೀಗೆ ಹೇಳಿದೆನೇ ಹೊರತು, ನಿನ್ನಲ್ಲಿ ಯಾವವಿಧವಾದ ಅಪನಂಬಿಕೆಯ ಇಲ್ಲವೆಂದು ಹೇಳಿ ಸಮಾಧಾನಗೊಳಿಸಿ ಪರಿಗ್ರ ಹಿಸಿದಹಾಗೆಯ ಮಹಾಭಾರತದಲ್ಲಿ ಕಥೆಯು ಇದೆ. ದುರ್ವಾಸಶಾಪವು ಅಂಗುಳೀಯಕಪ್ರದಾನವ ಶಕ್ರತೀರ್ಥದಲ್ಲಿ ಅದರ ಭ್ರಂಶವೊ, ಮೇನಕೆಯು ಶಕುಂತಲೆಯನ್ನು ಕರೆದುಕೊಂಡು ಹೋಗುವುದೂ, ಅಂಗುಳೀಯಕ ದರ್ಶನದಿಂದ ದುಷ್ಯಂತನಿಗೆ ಶಕುಂತಲಾಸ್ಕರಣವೂ, ಇಂದ್ರಲೋ ಕ ಗಮನವೂ, ಬರುವ ಮಾರ್ಗದಲ್ಲಿ ಪ್ರದರ್ಶನಪೂರ್ವಕ ಶಕುಂತಲಾಸಂಗಮ ವೂ ಕವಿಯಿಂದ ಕಲ್ಪಿತವಾದ ಮುಖ್ಯಭೇದಗಳು, ಇವು ಕವಿಯ ಸಾಮರ್ಥ ವನ್ನು ಚೆನ್ನಾಗಿ ತೋರಿಸುವುವು, ಹೇಗೆಂದರೆ :-
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೪೪
ಗೋಚರ