ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hto ಕರ್ಣಾಟಕ ಗ್ರಂಥಮಾಲೆ. ಕೃತವಾನA” ಎಂದು ಮಾತಲಿಯಿಂದ ಹೇಳಿಸುತ್ತಾನೆ. ಇದಲ್ಲದೆ ಮಾನುಷ ಸಂಚಾರಾನರ್ಹವಾದ ಮಾರೀಚಾಶ್ರಮಕ್ಕೆ ಹೋಗದಿದ್ದರೆ ದುಷ್ಯಂತನಿಗೆ ಶಕುಂತ ಲಾಸಮಗಮವುಂಟಾಗುವುದು ಹೇಗೆ ಪ ಬಲ ವಾದ ಕಾರಣವಾಗಬೇಕು, ಅದು ಮನುಷ್ಯರು ಹೋಗತಕ್ಕ ಆಶ್ರಮವಲ್ಲ. ದೇವತೆ ಗಳುಮಾತ್ರವೇ ಸಂಚರಿಸುವ ಆಶ್ರಮವು, ಆದುದರಿಂದ ದೇವತಾಕಾರವನ್ನು ಪೂರ್ತಿಮಾಡಿ ಇಂದ್ರ ವಿಮಾನದಲ್ಲಿ ಕುಳಿತು ಸ್ವರ್ಗದಿಂದ ತನ್ನ ರಾಜಧಾನಿಗೆ ಹಿಂದಿ ರಿಗಿ ಬರುವಾಗ ಮಧ್ಯೆ ಸಂಧಿಸಿದ ಮಾರೀಚಾಶ್ರಮವನ್ನು ಪ್ರವೇಶಿಸಿದಂತೆ ವರ್ಣಿ ಸಿದನೆಂದು ತೋರುತ್ತದೆ. ಮರೀಚಾಶ್ರಮದಲ್ಲಿ ಶಕುಂತಲಾಸಮಾಗಮಕ್ಕೆ ಭರತನನ್ನು ಮುಂದೆ ತಂದಿರುವುದು ಕವಿಯ ಶಕ್ತಿಯನ್ನು ವಿಶೇಷವಾಗಿ ತೋರಿಸುತ್ತದೆ. ಅದರಲ್ಲಿಯ ದುಷ್ಯನನಿರುವ ಸಲಕ್ಕೆ ಶಕುಂತಲೆಯೇ ಬಂದಂತೆಮಾಡಿದ ಚಮತ್ಕಾರವು ಕವಿಯು ಕಾಳಿದಾಸನೇ ಎಂಬುದನ್ನು ಸ್ಥಿರಪಡಿಸುವುದು, ಸಾಮಾನ್ಯರಾದ ಕವಿಗಳಿಗೆ ಇಂಥ ಸಂದರ್ಭವನ್ನು ತಿಳಿಸಿ ದೀರ್ಘಕಾಲದಿಂದ ವಿರಹಿತರಾಗಿ ಆ ಸ್ಥಿತಿಯಲ್ಲಿದ್ದ ನಾಯಿ ಕಾನಾಯಕರನ್ನು ಕೊಟ್ಟು ಇವರ ಸಮಾಗಮವನ್ನು ನಿರೂಪಿಸಿರಿ ಎಂಬದಾಗಿ ಕೇಳಿದ್ದರೆ, ಆಗ ಆ ಸಮಾಗಮದ ನಿರಾಹಕಷ್ಟವೂ, ಅ೦ಧ ಕಷ್ಟ ಸಂಗತಿಯನ್ನು ಎಷ್ಟು ಸುಲಭವಾಗಿ ಪ್ರಯಾಸವೆಳ್ಳಷ್ಯ ತೋರದಂತೆ ಕಾಳಿದಾಸನು ಮಾಡಿದ ನಿರ್ವಾದದಲ್ಲಿ ಅಚ್ಚರವೂ ತಿಳಿದು ಬರುವುದು, ಈ ಸಂದರ್ಭದ ಮಹಿಮೆಯಲ್ಲಿ ಮತ್ತೊಂದನ್ನು ಆಲೋಚಿಸಬೇಕಾಗಿದೆ. ದುಷ್ಯಂತನು ಶಕುಂತಳೆಯನ್ನು ಕಠಿ ರವಾಕ್ಯವನ್ನಾಡಿ ದೂಷಿಸಿ ತಿರಸ್ಕರಿಸಿರುವನು. ಶಕುಂತಲೆಯು ವಿನಯದ ಎಲ್ಲೆಯನ್ನು ವಿರದೆ ತನ್ನ ವಿವಾಹವಿಷಯದಲ್ಲಿ ವಿಶ್ವಾಸ ಹುಟ್ಟಿಸಲು ನಾನಾ ಪ್ರಕಾರದಲ್ಲಿ ಯತ್ನಿಸಿ ಅತಿಕಠಿನವಾದ ಕಲ್ಲ೦ತಿರುವ ಆತನ ಹೃದಯವನ್ನು ಕಂಡು ನಿರಾಶಳಾಗಿ ಹೋಗಿರುವಳು, ಈ ವಿಧವಾದ ಇವರ ಮನೋವೃತ್ತಿಯನ್ನು ಆಲೋಚಿಸುವಲ್ಲಿ ಆ ಸಮಾಗಮದಲ್ಲಿ ಇನ್ನೂ ಶ್ರಮಾಧಿಕ್ಯವು ತೋರಿಬರುವುದು, ಸಿಂಹದ ಮರಿಯೊಡನೆ ಆಟವಾಡುತ್ತಿದ್ದ ಭರತನನ್ನು ಅನ್ಯತ್ರದಮನನಾಗಿ ಮಾಡಲು ದಾದಿಯರು ಆಡಿದ “ಶಕುಂತಲಾವಣ್ಣ೦ಪೆಕ್ಕ” ಎಂಬ ಎರಡು ಅರ್ಥಕೊಡುವ ಮಾತಿನಿಂದ ಕಲ್ಪಿಸಿದ ಅನ್ಯ ಕವಿಕಲನಾಸಾಧ್ಯವಾದ ಈ ಸಮಾಗಮಸಂದರ್ಭವು ಕವಿಗಳಲ್ಲಿ ಕಾಳಿದಾಸನೇ ಶ್ರೇಷ್ಠನೆಂದು ನಿಸ್ಸಂದೇಹವಾಗಿ ತೋರಿಸುತ್ತದೆ.