ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸಮ. ಗಿಗೆ ••••• ಈ ಸಮಾಗಮ ಸಂದರ್ಭವು ಹಿಂದೆ ಹೇಳುತ್ತ ಬರುತ್ತಿದ್ದ ಶೃಂಗಾರರಸವೆಂಬ ಸಸ್ಯದಲ್ಲಿ ಹುಟ್ಟಿದ ಫಲಕ್ಕೆ ಆಸ್ವಾದನ ಸಮಯವು, ಈಗ ಪ್ರೇಕ್ಷಕರಲ್ಲಿ ಆ ರಸಕ್ಕೆ ಪರಿಪೂರ್ತಿಯುಂಟಾಯಿತೆಂದು ಹೇಳಬಹುದು. ಹಿಂದೆ ಎರಡನೆಯ ಅವೃತ್ತಿ ಪ್ರವೃತ್ತವಾದ ಸಂಶ್ಲೇಷವನ್ನು ವಿಶ್ಲೇಷಾಂತವಾಗಿ ಮಾಡಿದ ಹಾಗೆಯೇ ಈಗಲೂ ಪ್ರವೃತ್ತವಾದ ಸಂಶ್ಲೇಷವನ್ನು ವಿಶ್ಲೇಷಾಂತವಾಗಿ ಮಾಡಕೂಡದು, ಹಾಗೆ ಮಾಡಿದ್ದಲ್ಲಿ ಕಳಿತ ಹಣ್ಣು ಭುಜಿಸದೆ ಮಡಗಿದ್ದಲ್ಲಿ ಹೇಗೆ ಕೊಳೆತು ಇಲ್ಲವೆ ಒಣಗಿ ಹೋಗುತ್ತದೆಯೋ, ಹಾಗೆಯೇ ವ್ಯರ್ಥವಾಗಿ ಹೋಗುವುದು. ಆದುದ ರಿಂದ ಕವಿಯು ಕಥೆಯನ್ನು ಇಲ್ಲಿಗೆ ಪೂರ್ತಿಮಾಡಿದನೆಂದು ತೋರುತ್ತದೆ. ಶಾಕುಂತಲನಾಟಕದಲ್ಲಿ ಈ ರೀತಿಯಾಗಿ ಕಥೆಯಲ್ಲಿ ವ್ಯತ್ಯಾಸಮಾಡಿರುವುದು ನಾಯಿಕಾನಾಯಕರ ಗುಣೋತ್ಕರ್ಷಕ್ಕಾಗಿಯ ಎಂಬದಾಗಿ ಹೇಳಬಹುದು. ಹೇಗೆಂದರೆ:- ಮೃಗಯಾವಿನೋದದಲ್ಲಿ ಹೊರಟು, ಕಣ್ಯಾಶ್ರಮದಲ್ಲಿ ಆಕಸ್ಮಿಕವಾಗಿ ಶಕುಂ ತಲೆಯನ್ನು ಕಂಡು, ಅವಳ ನೌ೦ದರಕ್ಕೆ ಬೆರಗಾಗಿ, ಕಾಮ ಪಾರವಶ್ಯತೆಯಿಂದ ಅವಳೊಡನೆ ಗಾಂಧರ್ವವಿವಾಹವಾಗಿ, ಶೀಘ್ರದಲ್ಲಿಯೇ ರಾಜಧಾನಿಗೆ ಕರೆಸಿಕೊ ಳ್ಳುವೆನೆಂದು ಮಾತು ಕೊಟ್ಟು ರಾಜಧಾನಿಗೆ ಬಂದ ಮೇಲೆ ಪ್ರತಿಜ್ಞಾ ಹಾನಿಯನ್ನು ಪರಾಲೋಚಿಸದೆ, ಅಂತಃಪುರ ಸ್ತ್ರೀಯರ ಭಯದಿಂದಲೋ ಇಲ್ಲವೆ ಕಣ್ಣೆದುರಿಗೆ ಇಲ್ಲದಿದ್ದುದರಿಂದಲೋ ಅವಳನ್ನು ಕರೆಯಿ:ಸಿಕೊಳ್ಳದೆ, ಬಳಿಕ ಅವಳೇ ಬಂದು ಎದುರಲ್ಲಿ ನಿಂತು ಸದ್ಯ ಪ್ಲಾಂತವಾಗಿ ಪತ್ನಿಯೆಂದು ನಿರೂಪಿಸಿದರೂ ತಿಳಿಯದವನಂತೆ ನಟಿಸಿದ ಮಹಾಭಾರತದ ದುಷ್ಯಂತನಿಗೂ ನಮ್ಮ ಈ ನಾಟಕದ ದುಷ್ಯಂತನಿಗೂ ತಾರತಮ್ಯವಿಲ್ಲವೆ, ಆಲೋಚಿಸಿ ನೋಡಿ ? ಕಣ್ಣಾಶ್ರಮದಲ್ಲಿ ಪುತ್ರರತ್ನ ವನ್ನು ಹಡೆದು, ಯುವರಾಜನಾಗುವುದಕ್ಕೆ ಯೋಗ್ಯನಾದಮೇಲೆ ಆತನ ಜತೆಯಲ್ಲಿ ಹೊರ ಟು, ಪತಿಯ ಸನ್ನಿ ಧಾನವನ್ನು ಸೇರಿ, ನಿರ್ಚ್ಛಣನಾದ ಪತಿಯಿಂದ ತೇಜೋವಧೆ ಯನು ಹೊಂದಿ, ಕುಪಿತಳಾಗಿ ಶಾಪಕೊಡಲು ಸಿದ್ದಳಾದ ಆ ಶಕುಂತಳೆಗೂ ಕಾಳಿ ದಾಸನ ಶಕುಂತಳೆಗೂ ಎಷ್ಟೋ ಅಂತರವುಂಟು. ಪ್ರಸಿದ್ಧ ವಾದ ಉತ್ತರರಾಮಚರಿತ್ರೆಯಿಂದಲೂ ಸಿದ್ಧವಾದ ಕಥೆಯಲ್ಲಿ ಉಪ ಚಯಾಪಚಯಮಾಡುವುದರ ಮೂಲಕ ಕವಿಗಳು ತಮ್ಮ ಆತ್ಮವನ್ನು ನೆರವೇರಿಸಿ ಕೊಳ್ಳುತ್ತಾರೆಂಬುದನ್ನು ಸ್ಥಿರಪಡಿಸಬಹುದು, ಭವಭೂತಿಯು ಪೂರ್ವರಾವು ಚರಿತ ಕಥೆಯನ್ನು ಸಂಗ್ರಹವಾಗಿ ನಿರೂಪಿಸಲೋಸುಗ ಪ್ರಥಮದಲ್ಲಿ ಚಿತ್ರ ಪಠ