ಕವಿಸಮಯ. ೧೩೩ ೧೦೬:೫೨, ೧೪ ಫೆಬ್ರುವರಿ ೨೦೧೮ (UTC) ಗ್ರಂಥಗಳಲ್ಲಿ ವಿಶೇಷವಾಗಿ ಕವಿಗಳು ವರ್ಣಿಸುವರು. ನಿತ್ಯವೂ ಲೋಕಸ್ಥಿತಿ ಯನ್ನು ನೋಡಿನೋಡಿ, ಅವುಗಳ ವರ್ಣನೆಗಳನ್ನು ಕಾವ್ಯಮೂಲಕ ಪರಿಚಯ ಮಾಡಿಮಾಡಿ ಉಂಟಾದ ಬೇಸರಿಕೆಯನ್ನು ತಪ್ಪಿಸುವುದೇ ಇವಕ್ಕೆ ಪ್ರಯೋಜನ ವಾಗಿರಬಹುದೆಂದು ತೋರುತ್ತದೆ. ಇದಲ್ಲದೆ “ ರತ್ನ ಹಾರಿತುರ್ಥಿವಃ ?” ಎಂಬ ನ್ಯಾಯಕ್ಕನುಸಾರವಾಗಿ ಅನೇಕ ರಮ್ಯ ವಸ್ತುಗಳನ್ನು ಭೋಗಿಸುವ ರಾಜರೂ ಶ್ರೀಮಂತರೂ ಕೂಡ ಜುಗುಪ್ಪಿತವಾಗಿಯೂ ಹೇಯವಾಗಿಯೂ ವಿಕಾರವಾಗಿಯೂ ಇರುವ ಅನೇಕ ಕ್ಷುದ್ರ ವಸ್ತುಗಳನ್ನು ನೋಡುವುದರಲ್ಲಿಯೂ ಕುರೂಪಿಗಳಾಗಿಯ ಅಂಗಹೀನರಾಗಿಯ ಇರುವ ಕೂನರನ್ನೂ ಆಳುಗಳನ್ನಾಗಿ ಇಟ್ಟು ಕೊಳ್ಳುವುದರ ಲ್ಲಿಯ, ಕೊಕ್ಕರೆಯ ನಾಟ್ಯದಂತೆ ವಿಕಾರವಾಗಿ ಕುಣಿಯುವ ಕಾಡಕುರುಬರ ನಾಟ್ಯವನ್ನು ಕುಣಿಸುವುದರಲ್ಲಿಯೂ ಆಶೆ ಪಡುವಂತೆ ರಸಜ್ಞರು ಇಂಥ ವರ್ಣನೆಗಳಲ್ಲಿ ಆಶೆಪಡಬಹುದು. < ಪಿಂಡಖರ್ಜೂರದಲ್ಲಿ ಬೇಸರಪಟ್ಟು ಹುಳಿಹಣ್ಣನ್ನು ತಿಂದು ಸುಬಿಸುವಂತೆ ಇಂಥ ವರ್ಣನೆಯನ್ನು ಅನುಭವಿಸಿ ಸುಖಿಸುವರೆಂದು ತೋರುತ್ತದೆ. ಮತ್ತು ಕವಿಗಳು ತಮ್ಮ ಗ್ರಂಥಗಳಲ್ಲಿ * ಭೋಗಭೂಮಿಗಳನ್ನೂ, ಋಷ್ಯಾ ಶ್ರಮಗಳನ್ನೂ ವರ್ಣಿಸುವ ಪದ್ದತಿಯುಂಟು. ಲೋಕದ ಸಹಜಸ್ಥಿತಿಯನ್ನು ವಿಚಾ ರಿಸಿದರೆ ದುಃಖಮಿಶ್ರವಿಲ್ಲದ ಸುಖವೇ ಇಲ್ಲ. ಮಾನಸಿಕ ಸುಖದಲ್ಲಿಯ ಅನೇಕ ವೇಳೆ ದುಃಖಮಿಶ್ರವಿಲ್ಲದೆ ಇಲ್ಲ. ಹೀಗಿರುವುದರಿಂದ ಕೇವಲ ಸುಖವನ್ನು ಹುಟ್ಟಿ ಸಲೂ ಮತ್ತು ಸುಖದ ಪರಾಕಾಷ್ಠೆಯನ್ನು ತೋರಿಸಲೂ, ಹೇಗೆ ಆದರೆ ನಮ್ಮ ಈ ಪ್ರಾಪಂಚಿಕ ಸುಖವು ಅದರ ಎಲ್ಲೆಯನ್ನು ಮುಟ್ಟಿತೆಂದು ಹೇಳಬಹುದೋ ಅಂಥ ಸ್ಥಿತಿಯನ್ನು ತೋರಿಸಲೂ - ಕವಿಗಳ ವರ್ಣನೆಯು ಹೀಗೆ ಹೊರಡುವುದೆಂದು ಹೇಳ ಲು ಬಹಳ ಅವಕಾಶವಿದೆ. ಇಂಥ ಕಥಾಕನೆಯ ರಸಜ್ಞರ ಹೃದಯಕ್ಕೆ ಹಿತ ವಾಗಿಯೇ ಇರುವದು. ಪಾಠಕರು ಅಂಧ ಸುಖವನ್ನು ಆಸ್ವಾದಿಸಲೆಂಬದಾಗಿ ದುರ್ಗಸಿಂಹಕೃತವಾದ ಪಂಚತಂತ್ರ ದಲ್ಲಿರುವ ಋಷ್ಯಾಶ್ರಮವರ್ಣನೆಯನ್ನೂ, ಹಂಸದೇವವಿರಚಿವಾದ ಆದಿಪುರಾಣದಲ್ಲಿರುವ ಭೂಗಭೂಮಿಯ ಮಾಹಾತ್ಮವನ್ನೂ ಇಲ್ಲಿ ಉದಾಹರಿ ಸುತ್ತೇನೆ. --ಋಷ್ಯಾಶ್ರಮ ವಃ ಪಥಶ್ರಾಂತನಾದ ನೃಪಂಗೆ ಪ್ರಾಣವಾಯು ಬರ್ದ೦ತೆ ಹೊಮಧ್ಯಪಿ # ಭೋಗಭೂಮಿ ಎಂದರೆ ದುಃಖಮಿಶ್ರವಿಲ್ಲದ ಸುಖಸ್ಥಾನಗಳು. ವಾ
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೫೪
ಗೋಚರ