ಒwwwx ಕರ್ಣಾಟಕ ಗ್ರಂಥಮಾಲೆ. ಹೂವಿನ ಆಕಾರವನ್ನು ನೋಡಿದರೆ ಆ ಅನಂದವುಂಟೆ ?' ಇಲ್ಲ. ಆ ಗುಲಾಬಿ ಹೂವಿನಲ್ಲಿ ವಾಸನೆಯುಂಟು. ಆ ವಾಸನೆ ಸುಖದಾಯಕವಾದ ವಸ್ತುವೆ ? ಅದೂ ಅಲ್ಲ, ಗುಲಾಬಿಯ ಅತ್ತರಿನಲ್ಲಿ ಅಂಥ ಆನಂದವಿಲ್ಲ. ಹಾಗಾದರೆ ಆ ಸುಖಕ್ಕಕರಣ ವೇನಿರಬಹುದು? ಬಣ್ಣ, ಆಕಾರ, ವಾಸನೆ ಇವುಗಳು ಪದಾರ್ಥಗಳಲ್ಲಿ ಬೇರೆ ಬೇರೆ ಇರಬಹುದಾದರೂ ಅವು ಅಂಥ ಸುಖವನ್ನು ಕೊಡುವುದರಲ್ಲಿ ಕಾರಣವಾಗಲಿಲ್ಲ. ಅವುಗಳ ಯುಕ್ತಸಮ್ಮೇಳನ ಪ್ರಕಾರವಾದ ಗುಲಾಬಿಹೂವಿನಲ್ಲಿ ಸೌಂದಯ್ಯವ ಸಿದ್ದ ವಾಯಿತು ಎಂದರೆ, ಯುಕ್ತ ಸಮ್ಮೇಳನಜ್ಞಾನ ಹುಟ್ಟಿದಾಗ ಗುಲಾಬಿಯ ಹೂವು ಸೊಗಸಾಯಿತು. ಹೀಗಿರುವುದರಿಂದ ಔಚಿತ್ಯಜ್ಞಾನವು ವಸ್ತುನಿಷ್ಟವಾದ ಗುಣಗಳ ಚಾನಪೂರ್ವಕವಾಗಿಯೇ ಉಂಟಾಗಬೇಕು. ಹಾಗೆ ಉಂಟಾಗದೆ ಹೋದರೆ ಹತ್ತು ಹೂವುಗಳ ಹಾಗೆ ಇದೂ ಒಂದು ಹೂವು ಎನ್ನು ವುದರಲ್ಲೇ ಬುದ್ದಿ ನಿಂತು ಬಿ ಡುವುದು; ಸಂದೇಹವಿಲ್ಲ, ಸಿದ್ಧ. ಹೀಗಿರುವುದರಿಂದ ಕಾವ್ಯರಸಾಸ್ವಾದನಕ್ಕೆ ಕಾರಣವಾದ ಯುಕ್ತ ಸಮ್ಮೇಳ ನದಲ್ಲಿ ಔಚಿತ್ಯಜ್ಞಾನ ಬರುವುದಕ್ಕೆ ತದಾಶ್ರಯವಾದ ಕವಿಸಂಕೇತಜ್ಞಾನವು ಅತ್ಯವ ಶ್ಯಕವೆಂದು ಹೇಳಬೇಕಾದುದೇ ಇಲ್ಲ, ಅವುಗಳನ್ನು ತಿಳಿದೇ ಕಾವ್ಯಕಲೆಯ ಸುಖ ವನ್ನು ಅನುಭವಿಸಬೇಕು. ಈ ಪ್ರಥಮ ಸಂಪುಟದಲ್ಲಿ ಕವಿಸಮಯಸ್ವರೂಪವನ್ನು ಸಾಮಾನ್ಯವಾಗಿ ಯಥಾವತಿ ವಿವರಿಸಿದೆನು, ಈ ನನ್ನ ಪ್ರಯತ್ನವು ಗುಣೈ ಕಪಕ್ಷಪಾತಿಗಳಿಗೆ ರುಚಿ ಸಿದಲ್ಲಿ ಸತ್ರರೂಪವಾಗಿಯೇ ಆಗಲಿ ವಿಭಾಗಾರ್ಹವಾಗಿಯೇ ಆಗಲಿ ಆಗುವ ಕವಿ ಸಂಕೇತಗಳನ್ನು ಕುರಿತು ವಿಚಾರಮಾಡಲುದ್ದೇಶಿಸಿರುವೆನು, ಈ ನನ್ನ ಉದ್ದೇಶವ ಸಾಂಗವಾಗಿ ನೆರವೇರುವುದಕ್ಕೆ ಸಕಲ ಶ್ರೇಯಸ್ಸಿಗೆ ಕಾರಣನಾದ ಭಗವಂತನ ಅನುಗ್ರಹವನ್ನು ಹಾರೈಸುತ್ತಿರುವೆನು. ಭದ್ರಂ ಶುಭಂ ಮಂಗಳಂ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೭೩
ಗೋಚರ