ಪುಟ:ಕವಿಸಮಯಂ ಪ್ರಥಮ ಭಾಗ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಗ್ರಂಥಮಾಲೆ. ಜ್ಞಾನವೊಂದುಂಟಾದರೆ ಮಿಕ್ಕ ಜ್ಞಾನವು ಬಲುಮಟ್ಟಿಗೆ ಕರತಲಾಮಲಕದಂತಾ ಗುವುದರಿಂದಲೂ ಕಾವ್ಯಜ್ಞಾನವು ಮನುಷ್ಯನಿಗೆ ಆದರಣೀಯತಮವು. - ಆ ಕಾವ್ಯವು ನಾನಾ ವಿಧವಾಗಿರುವುದು, ( ಕವೇ ಕರ್ಮ ಕಾವ್ಯಂ” ಎಂಬ ವ್ಯುತ್ಪತ್ತಿಯಿಂದ ಪುರಾಣೇತಿಹಾಸ ನಾಟಕ ಚಂಪೂ ಗದ್ಯಾದಿಗಳು ಕಾವ್ಯ ಶಬ್ದದಿಂದ ವಾಚ್‌ಗಳಾಗುವುವು. ಹಾಗಾದರೆ ಪುರಾಣೇತಿಹಾಸಗಳನ್ನು ಕಾವ್ಯವಾಗಿ ಗಣಿಸುವರೇ, ಎಂದರೆ-ಪುರಾಣಕರ್ತರನ್ನು ಅನೇಕ ಕಡೆ ( ಕವಿ ?” ಗಳೆಂದು ನಿರ್ದೇ ಸಿಸಿ ಹೇಳುವುದರಿಂದಲೂ, ಪುರಾಣೇತಿಹಾಸಗಳಲ್ಲಿ ಕಾವ್ಯ ಲಕ್ಷಣಗಳು ಅನೇಕವಾಗಿ ಕಂಗೊಳಿಸುವುದರಿಂದಲೂ, ಇತಿಹಾಸಶ್ರೇಷ್ಠವಾದ ಶ್ರೀ ರಾಮಾಯಣವನ್ನು ( ಆದಿಕಾವ್ಯ ” ವೆಂದು ಕರೆವುದರಿಂದಲೂ, ಅವುಗಳನ್ನು ಕಾವ್ಯಗೋಷ್ಠಿಯಲ್ಲಿ ಗಣನೆಯ ಮಾಡಬಹುದು, ಶಾಸ್ತ್ರಗಳು ದುರವಗಾಹವಾಗಿ ನೀರಸವಾಗಿರುವುದರಿಂ ದಲೇ ಪುರಾಣೇತಿಹಾಸಗಳು ಹುಟ್ಟದುವೆಂದು ಅನೇಕರು ಅಭಿಪ್ರಾಯಪಡುವರು. ಇದರಿಂದ ಕಾವ್ಯಾದಿಗಳಲ್ಲಿ ಸರಸತ್ವವೂ ಸುಕರತ್ವ ವೂ ಉಂಟೆಂದು ವ್ಯಕ್ತವಾಗು ವುದು, ಹೀಗಿರುವುದರಿಂದಲೇ ಲೋಕದಲ್ಲಿ ಎಲ್ಲಾ ಕಡೆಯಲ್ಲಿಯೂ ನಾಟಕಾದಿ ಗಂಧಗಳೇ ವಿಶೇಷವಾಗಿರುವುವು ; ಅವುಗಳನ್ನು ಪಠಿಸುವವರೇ ಬಹಳ. ಆದು ದರಿಂದ ಕಾವ್ಯಗಳನ್ನು ಓದುವುದು ಅವಶ್ಯಕವೆಂದು ಹೇಳಬೇಕಾದುದೇ ಇಲ್ಲ. ಆ ಕಾವ್ಯವನ್ನು ತಿಳಿವುದಕ್ಕೆ ಅನೇಕ ಸಾಧನಗಳುಂಟು. ಆ ಸಾಧನಗಳಲ್ಲಿ ಕವಿಸಮಯವೂ ಒಂದು. ರಸಾಲಂಕಾರಾದಿಗಳು ತಿಳಿದರೂ ಕವಿಸಮಯಜ್ಞಾನ ವಿಲ್ಲದಿದ್ದರೆ ಕಾವ್ಯರಸವನ್ನು ಸಂಪೂರ್ಣವಾಗಿ ಆಸ್ವಾದಿಸುವುದಕ್ಕಾಗುವುದಿಲ್ಲವಾಗಿ, ಕವಿಸಮಯವನ್ನು ತಿಳಿವುದು ಅತ್ಯವಶ್ಯಕ. ಹೀಗಿದ್ದರೂ ನಾಲಂಕಾರಾದಿಗಳ ವಿಷ ಯವಾಗಿ ಅನೇಕ ಗ್ರಂಥಗಳು ಹುಟ್ಟಿ, ಈ ವಿಷಯವಾಗಿ ಒಂದು ಪ್ರಬಲಗಂಥ ವೂ ಕೂಡ ಹುಟ್ಟದೇ ಇರುವುದು ಆಶ್ಚಯ್ಯವೇ ಸರಿ. $ ಕನ್ನಡದಲ್ಲಿ ಕಾವ್ಯಾವಲೋ ಕನದಲ್ಲಿಯಲ್ಲದೆ ಮತ್ತಾವ ಗ್ರಂಥಗಳಲ್ಲಿಯೂ ಕೂಡ ಈ ವಿಷಯವನ್ನು ದಿಕ್ಷ ದ ರ್ಶನ ಮಾಡಿಯೂ ಇಲ್ಲ. ಕಾವ್ಯಾವಲೋಕನದಲ್ಲಿ ಹೇಳಿರುವುದೂ ಸಾಲದಾದುದ $ ಜ್ಞಾನಕ್ಕೆ ಪ್ರಬಲಾಂಗಗಳಾದ ರಾಲಂಕಾರದಿಗಳು ತಿಳಿದುಬಂದರೆ ಈಾಥುಸಾನವಾದ ರಸವುದುಜ್ಞಾನನ ತಾನಾಗಿಯೇ ಚರಿತಾರ್ಥವಾಗುವುದರಿಂದ, ಈ ನಿದ್ರಯದಲ್ಲಿ ಗ್ರಂಥಗಳು ಹುಟ್ಟಲಿಲ್ಲವೆಂದು ತೋರುತ್ತದೆ.