ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ ರಿ೦ದ ಕವಿಸಮಯವನ್ನು ವಿಸ್ತರಿಸಿ ಬರೆವುದರಲ್ಲಿ ಪ್ರಯೋಜನವುಂಟೆಂಬ ನಂಬಿ ಕೆಯಿಂದ ಈ ಪ್ರಯತ್ನವನ್ನು ಕೈಕೊಂಡಿರುವೆನು. ಕವಿಸಮಯವಂದರೇನು ?- ಎಂಬುದನ್ನು ಕುರಿತು ಈ ಪೀಠಿಕಾ ಪ್ರಕರಣ ದಲ್ಲಿ ಸಾಮಾನ್ಯವಾಗಿ ವಿಚಾರಮಾಡುತ್ತೇನೆ. ಕವಿಸಮಯವೆಂದರೆ, ಕಾವ್ಯಗಳಲ್ಲಿ ಕವಿಗಳು ಅನೇಕವಿಧವಾದ ವರ್ಣನಾ ವೈಖರಿಯಿಂದ ಲೋಕವೃತ್ತವನ್ನು ತಿಳಿಸುತ್ತಾರೆ. ಈ ಕಾರದಲ್ಲಿ ಆಹ್ಲಾದಾತಿಶಯ ಕ್ಕಾಗಿ ಕೆಲಕೆಲವು ಸಂಕೇತಗಳನ್ನು ಇಟ್ಟು ಕೊಳ್ಳುತ್ತಾರೆ; ಅವುಗಳಿಗೆ ಕವಿಸಮಯ ವೆಂದು ಹೆಸರು, ವಸ್ತುಸ್ಥಿತಿಯನ್ನು ನೋಡಿದರೆ ಯಾವುದು ಲೋಕದಲ್ಲಿ ಸಹಜ ವಾಗಿಲ್ಲವೋ ಅದು ಉಂಟೆಂದೂ, ಪಾರಮಾರ್ಥಿಕವಾಗಿ ಯಾವುದು ಇರುವುದೋ ಅದು ಇಲ್ಲವೆಂದೂ, ಭಿನ್ನ ವಸ್ತುಗಳನ್ನು ಅಭಿನ್ನ ವಸ್ತುಗಳೆಂದೂ, ಕಾಠ್ಯಕ್ಕೆ ಸಿದ್ಧ ವಾದ ಕಾರಣವನ್ನು ಇಲ್ಲವೆಂದೂ, ಅದಕ್ಕೆ ಬೇರೊಂದು ಕಾರಣ ಉಂಟೆಂದೂ-ಇ ತ್ಯಾದನೇಕ ಸಂಕೇತಗಳನ್ನು (= ಏರ್ಪಾಡು) ಕಾವ್ಯದಲ್ಲಿ ಮಾಡಿಕೊಳ್ಳು ವುದರಿಂದ ಅವುಗಳಿಗೆ 11 ಕವಿಸಂಕೇತ ” ಅಥವಾ “ ಕವಿಸಮಯ ?” ವೆಂದು ಹೆಸರು, ಕವಿ ಪರಂಪರಾಪ್ರಾಪ್ತವಾಗಿ ಬಂದಿರುವುದರಿಂದ ಅವು (( ಕವಿಸಂಪ್ರದಾಯ” ವೆಂದೂ ಕರೆಯಲ್ಪಡುವುವು. ಈ ವಿಚಾರದಲ್ಲಿ ನಾಗವರ್ಮನು ಹೀಗೆ ಹೇಳುತ್ತಾನೆ:- ( ಆವುದಶೇಷಲೋಕವಿಷಯಸ್ಥಿತಿಯಲ್ಲಖಿಲಾಗಮಾರ್ಥಮುಂ । ಭಾವಿಪೊಡಲ್ಕು ಸತ್ಕವಿಪರಂಪರೆಯಿಂ ಪರಿಗೀತವಾಗಿ ನಿ॥ ಪೈವಳಮಾದ ರೂಢಿವಶದಿಂ ಸಲೆ ಸಲ್ವುದಿದ ಶಿಷ್ಟ ಸಂr ಭಾವಿತಮಪ್ಪ ಕಾವ್ಯ ಸಮಯಂ ಭುವನತ್ರಯವಸ್ತುಗೊಚರಂ!” ಇದರಿಂದ ಕವಿಸಮಯವು ಲೋಕಾನುಭವದಿಂದ ನಿರೂಪಿತವಾಗತಕ್ಕುದೂ ಅಲ್ಲ; ಆಗಮ ಪುರಾಣೇತಿಹಾಸಗಳಿಂದ ಸಿದ್ಧವಾದ ವಿಷಯವೂ ಅಲ್ಲ; ಆದರೂ • ನಿಷ್ಕವಳವಾದ ರೂಢಿವಶದಿಂದ ೨” ಕವಿಜನ ಪರಿಗೃಹೀತವಾಗಿ ಮಾತ್ರ ಬಂದಿ ರುವುದಾಗಿರಬೇಕು, ಈತನ ಅಭಿಪ್ರಾಯವು ಕವಿಸಮಯವಿಷಯವಾಗಿ ಸಹೃದ ಯರ ಅಭಿಪ್ರಾಯವನ್ನೆಲ್ಲಾ ಒಳಕೊಂಡಿದೆ ಎಂಬುದಕ್ಕೆ ಸಂದೇಹವೇ ಇಲ್ಲ. ಉದಾಹರಣೆಗಳಿಂದ ಸಹಿತವಾಗದಿದ್ದರೆ, ಯಾವುದೂ ಸ್ಪಷ್ಟವಾಗುವುದು ಕಷ್ಟ ವಾಗಲಾಗಿ ಉದಾಹರಣೆಗಳೊಡನೆ ನಿರೂಪಿಸುತ್ತೇನೆ.