ಕವಿಸಮಯುಂ. ,,,,,,..~ ~ ರಗಳಿಗೆ ಮಲ್ಲಿಕಾದಿಗಳಲ್ಲಿ ಆಹ್ಲಾದಕತ್ವವೂ, ಚಂಪಕದಲ್ಲಿ ಮಾರಕತ್ವವೂ ಲೋಕಾ ನುಭವಕ್ಕೆ ವಿರೋಧವಾಗಿದ್ದರೂ ಕವಿಸಂಪ್ರದಾಯಸಿದ್ದಗಳು. ಈ ಕವಿಸಂಕೇತ ವನ್ನು ಲಕ್ಷದಲ್ಲಿ ಇಟ್ಟು ಕೊಂಡು, ಪದ್ಯಾರ್ಥವನ್ನು ನೋಡೋಣ, ಮಲ್ಲಿಕಾಮಾಲೆ ಗಳ ಮೇಲೆ ಚಂಪಕಮಾಲಿಕೆಯನ್ನು ಎತ್ತಿಕೊಳ್ಳದಿದ್ದರೆ, ಅವಳ ಶ್ವಾಸಪರೆಮಳಕ್ಕೂ, ಚಂದನ ಚರ್ಚೆಗೂ, ಮಲ್ಲಿಗೆಯ ಮಕರಂದಕ್ಕೂ ದುಂಬಿಗಳು ನಾಲ್ಕು ಕಡೆಯಿಂದ ಕವ್ವರೆಗೊಂಡು ಬಂದು ಮುತ್ತುವುವು ; ಆಗ ಅವುಗಳ ಕಾರ್ಷ್ಟದಿಂದ ( ನವನೀಲ ಪಟಮಂ ಮುಸುಕಿದವೋ೮ ಆಗಿ, ಚಂದ್ರಿಕಾದಿ ಶ್ವೇತದ್ರವ್ಯಗಳಿಂದ ಮರೆಸಯಿ ಲ್ಪಟ್ಟ ಅವಳ ಗಮನವೂ ರೂವೂ ಸೂಚಿಸಲ್ಪಡುವುವು. ಹೀಗಿರಲು, ಭ್ರಮರದ ನಿವಾ ರಣಕ್ಕಾಗಿ ಚಂಪಕಮಾಲಾಧಾರಣವು, ಈ ಅವಸರದಲ್ಲಿ ರಸೋತ್ತೇಜಕವೇ ಹೊ ರತು ರಸಕುಂದಕವಲ್ಲ. ಅದಂತಿರಲಿ. ಚಂಪಕಮಾಲೆಯಿಂದ ಅವಳ ಗಮನವು ಸೂಚಿಸಲ್ಪಡುತ್ತದಲ್ಲ ; ಅವಳ ಉದ್ಯೋಗಕ್ಕೆ ಭಂಗ ಬರುವುದಿಲ್ಲವೆ ? ಎಂದರೆದೀಪದ ಬೆಳಕಿನಲ್ಲಿಯೂ, ತಿಂಗಳ ಬೆಳಕಿನಲ್ಲಿಯೂ ಚ೦ಪಕದ ಹೊಂಬಣ್ಣವು ಅಷ್ಟು ಚೆನ್ನಾಗಿ ಕಾಣಬರುವುದಿಲ್ಲ, ಸುಮಾರಾಗಿ ಕಾಣಬರಬಹುದು, ಹಾಗಿದ್ದರೂ ಇಲ್ಲಿ ಚಂದ್ರಿಕೆಯ ಸಾಂದ್ರತ್ವದಿಂದ ಮರೆಯಿಸಲ್ಪಡುವುದೇ ನಿಶ್ಚಯ. ಚಂದಕದಲ್ಲಿ ಭ್ರಮರಗಳಿಗೆ ಮಾರಕತ್ವವೆಂಬ ಕವಿಸಂಕೇತವನ್ನು ಇಟ್ಟು ಕೊಂ ಡು, ಜಯವೃಪಕಾವ್ಯದಲ್ಲಿ ಕವಿಯು ಸುಲೋಚನಾದೇವಿಯ ಮೂಗುತಿಯ ಧಾರ ಣವನ್ನು ಎಷ್ಟು ಹೃದ್ಯವಾಗಿ ವರ್ಣಿಸಿರುವನು ! ಅದೇನೆಂದರೆ :- ಅರಲುರಿಣಿಯಿಬಂಡುಂಡೊಡೆ | ಮರಣಮವಕೆ ನಿಶ್ಚಯಮದರಿ೦ದಾ | ಗರಳಮನಿದರಿಂ ಕಿಡಿಪೆನೆನುತ ಬನಸಿರಿಯಾಶಂಸಕದ | ಬಿರಿಮೊಗ್ಗೆಯ ತುದಿಗಮ್ಮತದ ಘಟಿಕೆಯ | ನಿರಿಸಿದವೊಲು ಮುತ್ತಿನ ಮೂಗುತಿಯಂ | ವಿರಚನೆಗೆಚ್ಚಳದೊರ್ವಳ: ತರುಣಿಯ ನಾಸಾಮುಕುಳದೊಳು || ಇವೆರಡೂ ಸದಕೀರ್ತನ-ಇರುವುದನ್ನು ಇಲ್ಲವೆಂದು ವರ್ಣಿಸುವುದೆಂಬ ಕವಿ ಸಮಯಕ್ಕೆ ಉದಾಹರಣವಾಗಿವೆ. (4) ಅರಿಯೆಂ ಪಿರಿದಂ ಪೊಗಳಲೆ | ಪೆರತೇಂ ಮುಚ್ಚಿದೊಡೆ ಮುಚ್ಚಿರಲ್ಕಲ್ಲದೆ ಕ | ಡೈರೆಗೆ ತೆರೆದಂತಲ್ಲದೆ | ಮೆರೆದಂತನೆಯಿಕ್ಕಲೀಯದಿಡಿಡ ತಮಂಧಂ ।
ಪುಟ:ಕವಿಸಮಯಂ ಪ್ರಥಮ ಭಾಗ.djvu/೨೬
ಗೋಚರ