ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟಗಳುಯುಂ. - *-- ss ನಥ. ತನ್ನ ಹೊರಗೂ ವ್ಯಾಪಿಸಿದುದಲ್ಲದೆ' ಒಳಗೂ ವ್ಯಾಪಿಸಿ, ನೆನಸು, ಕನಸು, ಮನಸು, ತಾನು ಕತ್ತಲೆಯಾಗಿ ಹೋದೆವೆಂಬ ಭಾವವನ್ನು ಹುಟ್ಟಿಸುವಷ್ಟು ಸಾಂದ್ರವ್ಯಾಪಕ ತೆಯನ್ನು ವರ್ಣಿಸುತ್ತಾನೆ. ಕತ್ತಲೆಯಲ್ಲಿ ತನ್ನ ಮೈ ತನಗೆ ಕಾಣದಿರುವುದೊಂದು ವಿಶೇಷವಲ್ಲ. ಅಂಧ ಕಾರವನ್ನು ಮುಟ್ಟಿ ಹೊಡೆದುಕೊಳ್ಳಬಹುದೆಂದು ಹೇಳುವುದೂ ವಿಶೇಷವಲ್ಲ. ಆದು ತನ್ನ ಸ್ಥಿತಿಯನ್ನೇ ಮರೆಯಿಸಿ, ಇದು ಕನಸೋ, ಇದು ನೆನಸೋ ಅಥವಾ ಇದು ಮನಸೋ ಎಂದು ಭ್ರಾಂತಿಪಡುವಂತೆ ಮಾಡಿತೆಂದು ವರ್ಣಿಸುವುದೀಗ ಕವಿಶಕ್ತಿ ಪ್ರಕರ್ಷಕ್ಕೆ ನಿದರ್ಶನವಾಗಿರುವುದು. ಇದೂ ಅಸದಾ ಖ್ಯಾತಿಯೆಂಬ ಕವಿಸಮಯಕ್ಕೆ ಉದಾಹರಣೆ. (5) ಕುಲಭೂಭಕ್ಕೂಟದೊಳ ಮಾಣಿ ಕದಳವಿಸಿಲಂತಂತೆ ದಿಕ್ಕುಂಭಕುಂಭ | ಓಲದೊಳ ಸಿಂದೂರಮೆ೦ತಂತಮರನದಿಯೊಳಾರ¥ನೀರೇಜಪತ್ರಾ| ವಲಿಯೆಂತಂತಬಿ ಯೊಳ ವಿದ್ರುಮಸಮುದಯಮೆಂತಂತೆ ಪರ್ವಿತ್ತು ರಾಗಾ । ಲಮಪ್ಪಂತುರ್ವಿಯೆಲ್ಲ ದಶರಥವಸುಧಾಧೀಶತೇಜೋವಿತಾನಂ | (ಪಂಪರಾಮಾಯಣ9) ಇಲ್ಲಿ ಕವಿಯು ದಶರಥನ ಪರಾಕ್ರಮವನ್ನು ವರ್ಣಿಸುತ್ತಾನೆ. ಆತನ ಪರಾ ಕ್ರಮವು ದಶದಿಕ್ಕುಗಳಲ್ಲಿಯೂ ವ್ಯಾಪಿಸಿ ಅಲ್ಲಲ್ಲಿರುವ ಜನಗಳಿಂದ ಕೊಂಡಾಡಲ್ಪ ಟ್ವಿ ತೆಂಬುದನ್ನು ಈ ರೀತಿ ತಿಳಿಸುತ್ತಾನೆ. ಈ ಉತ್ಸೆ ಕೈಗೆ ಕವಿಗಳು ತೇಜಸ್ಸನ್ನು ಕೆಂಪಗಿರುವ ವಸ್ತುವಿನಂತೆ ವರ್ಣಿಸುವ ಕವಿಸಮಯವೇ ಆಧಾರವಾಗಿದೆ. ದಶರಥನ ಪ್ರತಾಪ ವಿತಾನವು ಅತ್ಯುನ್ನತವಾದ ಕುಲಪರ್ವತಗಳ ಶಿಖರಗಳಲ್ಲಿ ಸ್ವಭಾವಸಿದ್ಧವಾಗಿರುವ ಮಾಣಿ ಕೈಗಳಿಂದ ಹೊರಟ ಬಿಸಿಲಂತೆಯೂ, ದಿಗಂತಗ ಇಲ್ಲಿ ಮಹಾಭೂಮಿಯನ್ನು ಹೊತ್ತುಕೊಂಡಿರುವ ದಿಗ್ಗಜಗಳ ಕುಂಭಸ್ಥಳದಲ್ಲಿ ಮೆರೆವ ಸಿಂದೂರದಂತೆಯೂ, ಮೇಲುಗಡೆ ದೇವಲೋಕದಲ್ಲಿ ಬೆಳ್ಳಗೆ ಪ್ರವಹಿಸುವ ದೇವ ಗಂಗೆಯಲ್ಲಿ ಹುಟ್ಟಿದ ಕೆಂದಾವರೆಗಳ ದಳಗಳಂತೆಯೂ, ಕೆಳಗಡೆ ಸಮುದ್ರತೀರ ದಲ್ಲಿ ಹರಡಿಕೊಂಡಿರುವ ಹವಳಗಳಂತೆಯೂ ಕಾಣಿಸಿಕೊಂಡು ಪ್ರಪಂಚದಲ್ಲಿ ಎಲ್ಲೆ ಲ್ಲಿಯೂ ಪಸರಿಸಿತು, ಎಂದು ಪದ್ಯಾರ್ಥ. ಇಲ್ಲಿ ತೇಜಸ್ಸಿಗೆ ಆರುಣ್ಯ, ನದಿಗಳಲ್ಲಿ ಕಮಲೋತ್ಪತ್ತಿ, ಇತ್ಯಾದಿ ಕವಿಸಮ ಯಗಳನ್ನು ಅಂಗೀಕರಿಸದ್ದಿದರೆ, ಇಷ್ಟು ಆಹ್ಲಾದಕರವಾಗಿ ದಿಗಂತವ್ಯಾಪಿಯಾದ