೧© ಕರ್ಣಾಟಕರಂಥಮಾಲೆ,
- * * * * * * * **
ದಶರಥನ ಪರಾಕ್ರಮವನ್ನು ವರ್ಣಿಸುವುದು ಅಸಾಧ್ಯ ; ಭಾವಾರ್ಥ ದಲ್ಲಿ ಔಚಿತ್ಯ ಕಾಣಬರುತ್ತಿರಲಿಲ್ಲ. ಇದೂ ಅಸದಾಖ್ಯಾತಿಯೆಂಬ ಕವಿಸಮಯೋದಾಹರಣ. (6) ಬಕುಳಂ ಗಂಡೂಷಸೇಕಾಸನಕೆ ಪರಿಮಳಂಗೆಯ್ಯ ವೊಲೆ ಪೂಗಳಂ ಬೀ | ಆಕುಮಾಚಾಂಪೇಯಮುಂ ಕೆಂಪಿಡಿಯೆ ಯುವತಿವಕ್ಕೆ ಂದು ಚೆಂಬೂಗಳ೦ ಪೊ || ೯ಿಕುಮಿಂತೀಭ್ಯಂಗಸಂಘಂ ಮುದದೊದೆವಬಲಾನೂಪುರಧ್ಯಾನಮುಂ ಕೇ । ಇು ಕರಂ ತಾಂ ಕಲ್ಲಶೋಕಂಗಳೊಳನುಕರಿವಂತಿಂಪಿನಿಂ ಪಾಡುತಿರ್ಕು೦ | ( ಮಿತ್ರವಿಂದಾಗೋವಿಂದಂ ) - ಇದು ವನಕೇಳೀ ವರ್ಣನೆಯಲ್ಲಿ ಪ್ರವೃತ್ತವಾದ ಪದ್ಯ. ವಕುಳವೃಕ್ಷವು ಅಬಲೆಯರು ತನ್ನ ಮೇಲೆ ಮುಕ್ಕುಳಿಸುವ ಮದ್ಯದ ಪರಿಮಳ ವನ್ನು ಹೆಚ್ಚಿಸುವುದಕ್ಕೆ ಎಂಬಂತೆ ಅವರ ಗಂಡೂಷ ಸಂಪರ್ಕದಿಂದ ಹೂವುಗ ಳನ್ನು ಬೀಳಿಸುವುದು ; ಅವರ ಮುಖವು ಮದ್ಯಪಾನದಿಂದ ಕೆಂಪೇರಲು, ಅದನ್ನು ಕಂಡ ಮಾತ್ರದಲ್ಲಿಯೇ ಸಂಪಗೆಯು ಹೂವುಗಳನ್ನು ಹೊಮ್ಮಿಸುವುದು ; ಅವರ ಪಾದತಾಡನದಿಂದ ಅಶೋಕವು ಚಿಗುರಿ ಪುಷ್ಪ ಬಿಡುವುದು ; ಆ ಪುಷ್ಪಗಳಲ್ಲಿರುವ ಮಕರಂದವನ್ನು ಪಾನಮಾಡುತ್ತ ದುಂಬಿಯು ಗಾನಮಾಡುವುದು ; ಆ ಗಾನವು ಅಶೋಕವನ್ನು ಒದವುದರಲ್ಲಿ ಉಂಟಾದ ನೂ ಪರಧ್ಯಾನಮಂ ಕಲಿತುಕೊಳ್ಳಲು ಅವುಗಳು ಮಾಡುವ ಅಭ್ಯಾಸವೋ ಎಂಬಂತೆ ತೋರುವುದು~ ಎಂದು ಪದ್ಯಾರ್ಥ. ಸ್ತ್ರೀಯರ ಪಾದತಾಡನದಿಂದ ಅಶೋಕದಲ್ಲಿ, ಅವರ ದೃಷ್ಟಿ ಪಾತದಿಂದ ಸಂಪ ಗೆಯಲ್ಲಿ, ಅವರ ಗಂಡೂಷಸಂಪರ್ಕದಿಂದ ವಕುಳದಲ್ಲಿ ಪಲ್ಲವಕುಸುಮೋತ್ಪತ್ತಿಯು ಅಕಾಲದಲ್ಲಿಯೂ ಉಂಟಾಗುವುದೆಂದು ವರ್ಣಿಸುವುದು ಕವಿಸಮಯ. ಈ ಕವಿ ಸಮಯವನ್ನು ತಿಳಿದುಕೊಂಡಲ್ಲದೆ ಈವರ್ಣನೆಯು ಹೃದಯಂಗಮವಾಗದು ; ಇದ ರಲ್ಲಿ ಔಚಿತ್ಯವು ತೋರದು. ಈ ಸಂದರ್ಭದಲ್ಲಿ ಮಲ್ಲಿನಾಥಪುರಾಣದ ವನಕೆಳಿ ವರ್ಣನೆಯನ್ನು ಅನು ವಾದ ಮಾಡುವುದರಲ್ಲಿ ಪ್ರಯೋಜನವುಂಟು. ಅದೇನಂದರೆ-- ವ| ಅವನಿಪತಿ ಮಂಗಳವೃತ್ತವನೋದಿದ ಮಂಗಳಪಾಠಕಂಗೆ ತದುತ್ಸವಮಹಾ ದಾನಮುಂ ಮಾಡಿ ಪಲ್ಲವಿತಲತಾದುಮಂಗಳಂ ನೋಡುವಲ್ಲಿ,