ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸವಯುಕಿ, •೧೩ • /v • • - བས གའའའའའ ಇಲ್ಲಿ ಪದಸಮಭಿಹಾರದಿಂದ, ಬೇಸಗೆಯ ಬಿಸಲಿನಲ್ಲಿ ಬಳಲಿದವನಿಗೆ ಚಂದನ, ಕರ್ಪೂರಾಂಜನ, ತನಿಗೆನೆವಾಲು ಹೇಗೆ ತಾಪನಿವಾರಕವೋ, ಹಾಗೆ ಸಂಸಾರ ತಾಪ ತನಿಗೆ ಚಂದ್ರನಾಥಸೇವೆಯಲ್ಲದೆ ಮತ್ತಾವ ನಿವಾರಣವೂ ಇಲ್ಲವೆಂಬ ಕವಿ ಹೃದಯವೂ, ದ್ರವ್ಯವೆಂದು ಕವಿಸಂಕೇತ ನಿರ್ಣೀತವಾದ ಜ್ಯೋತೃಗೆ ಸಂದರ್ಭಕ್ಕೆ ಉತ್ತೇಜಕವಾಗುವಂತೆ ಬಾವನ್ನ, ತೆಳ ಸ್ಪುರ, ತನಿಗೆನೆವಾಲು ಎಂಬ ಪರಿಣಾಮ ವನ್ನು ಹೇಳಿರುವುದರಲ್ಲಿ ಸದೌಚಿತ್ಯವೂ ತಿಳಿದು ಬರುವುವು, ಕವಿಯು ಅತಿಪ್ರಸಿದ್ದ ವಾದ ತ್ಸೆಗೆ ದ್ರವ್ಯತ್ಯಾರೋಪರೂಪವಾದ ಕವಿಸಮಯವನ್ನೂ, ಸತ್ವ ಗುಣವೇ ಮೂರ್ತಿಗೊಂಡಂತಿರುವ ಚಂದ್ರನಾಥನ ಚಂದ್ರನಾಥನೆಂಬ ಹೆಸರಿನಲ್ಲಿ ರುವ ಚಂದ್ರಶಬ್ದವನ್ನೂ ಮನಸ್ಸಿಗೆ ತಂದುಕೊಂಡು, ಸಂಸಾರತಾಪತಪ್ತನಾದವ ನಿಗೆ ಚಂದ್ರನಾಥನ ಸೇವೆಯಲ್ಲದೆ ಸಂತಾಪನಿವಾರಕವಾದ ಗತ್ಯಂತರವಿಲ್ಲವೆಂಬ ತನ್ನ ಗೂಢಾಭಿಪ್ರಾಯವನ್ನು ಪಾಠಕರ ಮನಸ್ಸಿನಲ್ಲಿ ಸ್ಪುರಿಸಿ, ಅದು ಅಲ್ಲಿ ಊರು ವಂತೆ ಎಷ್ಟು ಚೆನ್ನಾಗಿ ಹೇಳಿರುವನು, ನೋಡಿದಿರಾ ! (12) ಹರಿಣನುಮಂ ಪುತ್ತಂ ವಟ | ತರುವಂ ತೊರೆದ ಫಣಿಫಲಂಗಳನಾಂತಂ ! ತಿರೆ ನೇತ್ರ ಭೂಬಿ೦ಬಾ | ಧರ೦ಗಳಿ೦ದವಳ ವದನವಿಧು ಕರವೆಸಗುಂ || ( ರಾಜಶೇಖರವಿಲಾಸಂ) - ಈ ಪದ್ಯದಲ್ಲಿ ಕವಿಯು ಒಬ್ಬ ನಾಯಿಕೆಯ ಮುಖವನ್ನು ಚಂದ್ರ ದೃಷ್ಟಾಂತ ದಿಂದ ವರ್ಣಿಸುತ್ತಾನೆ. ಚಂದ ಕಳಂಕವರ್ಣನಾವಿಷಯಕವಾದ ಕವಿಸಂಪ್ರದಾಯವು ತಿಳಿಯದಿದ್ದರೆ, ಪದ್ಮಾಭಿಪ್ರಾಯವು ಸ್ಪಷ್ಟವಾಗುವುದಿಲ್ಲ. ಕವಿಗಳು ಚಂದ್ರನಲ್ಲಿರುವ ಕಳಂಕ ವನ್ನು ಜಿಂಕೆ, ಹುತ್ತು, ಆಲದಮರ, ಶಶ, ಇತ್ಯಾದಿಗಳಿಗೆ ಹೋಲಿಸಿ ಹೇಳುವರು. ಈ ಸಮಯವ~. ಮೃಗಲಕ್ಷ ಸಂಜೆಗೆಂಪಿಂ ಪುದಿದುದಯಿಸಿ ಸರೋರೈಗಾನಂದಮಂ ವಾ ! - ರ್ಧಿಗೆ ಪೆರ್ಚ೦ ಮಾಡಿ ಮುನ್ನ೦ ಬಳಿಕೆರ್ದೆಗೆರೆಯಂ ತೋರೆಯುಂ ಕಂಡು ಲೋಕಂ। ಬಗೆಗೊಂಡಾಲಂ ಮೋಲಂ ಪುರಲೆಯೆನುತದಂ ಕೂರ್ತು ಕೈಗೆಯ್ಯೋಳಿನ್ನು ೦. ಪೊಗಳಪ್ಪರ ಭಾವು ಲೋಕಕ್ಕುಪಕರಿಸುವನೊಳ ಗೋಷಮುಂ ಸ್ತುತ್ಯಮಿ ಆ ( ಕವಿಕುಂಜರಲೀಲಾವತಿ)