ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ. ••••. •••••••••, , , , , , ಎಂಬ ಪದ್ಯದಿಂದ ವ್ಯಕ್ತವಾಗುವುದು. ಈ ಸಮಯಕ್ಕೆ 1 ಲೋಕವಿಷಯ ಸ್ಥಿತಿ” ಯಾದ, « ಆಗಮಾರ್ಥ ” ನಿರೂಪಿತವಾದ ಯಾವ ಗಮಕವನ್ನೂ ಹೇಳುವು ದಕ್ಕಾಗುವುದಿಲ್ಲ. ಆದರೂ ಕವಿಗಳು ಇದನ್ನು ಒಪ್ಪಿಕೊಂಡಿರುವರು. ಇನ್ನು ಮೇಲೆ ಪದ್ಯಾರ್ಥವನ್ನು ನೋಡೋಣ. ನಾಯಿಕೆಯ ವದನವಿಧು = ಮುಖವೆಂಬ ಚಂದ್ರನು, ಪ್ರಸಿದ್ದ ನಾದ ಲೋಕಾ ಹ್ಲಾದಕನಾಗಿ ಗಗನದಲ್ಲಿ ಪ್ರಕಾಶಿಸುವ ಆ ಚಂದ್ರನಲ್ಲಿರುವ ಹರಿಣನುಮಂ= ಜಿಂಕೆಯನ್ನೂ , ಹತ್ತನ್ನೂ, ವಟತರುವನ್ನೂ ತೊರೆದು = ನಿನ್ನಾ ರವೆಂದೋ, ಬಹು ದೊಡ್ಡದೆಂದೋ, ಅಥವಾ ತನ್ನ ಸೌಂದಯ್ಯಕ್ಕೆ ಕುಂದಕವನ್ನು ಉಂಟುಮಾವುದೆಂ ದೋ ನಿರಾಕರಿಸಿ, ಅವಕ್ಕೆ ಪ್ರತಿಯಾಗಿ ಅವುಗಳಲ್ಲಿರುವ ಅಡ್ಡಿ = ಜಿಂಕೆಯ ಅವಯ ವಗಳಲ್ಲಿ ಅತ್ಯಂತ ಮನೋಹರವಾದ ಅಂಗವಾಗಿಯೂ ಲೋಕದಲ್ಲಿ ವಿಸ್ತಾರಕ್ಕೂ ಚಾಂಚಲ್ಯಕ್ಕೂ ಸದೃಶೋಪಮಾನತ್ತೇನ ಗಣಿಸಲ್ಪಟ್ಟಿರುವ ಅದರ ಕಣ್ಣನ್ನೂ, ಫಣಿ = ಹುತ್ತಿನಲ್ಲಿ ವಾಸಮಾಡುವುದಾಗಿಯೂ ಸರಳವಾಗಿಯೂ ವಕ್ರವಾಗಿಯೂ ಕಪ್ಪಾಗಿಯೂ ಹುಬ್ಬಿಗೆ ಉಚಿತೋಪಮಾನವೆಂದು ಕವಿಲೋಕ ನಿರ್ಣೀತವಾದ ಕೃಷ್ಣ ಸರ್ಪವನ್ನೂ, ಮತ್ತು ಫಲಂ = ದೊಡ್ಡದಾಗಿ ಬೆಳೆದು ಬಹುಸ್ಥಲವನ್ನು ಆಕ) ಮಿಸುವ ಆಲದಮರಕ್ಕೂ ಶೋಭಾವಹವಾಗಿ, ಬಣ್ಣದಿಂದಲೂ ಆಕಾರದಿಂದಲೂ ನೋಡಿದವರ ಕಣ್ಣನ್ನೂ ಮನಸ್ಸನ್ನೂ ಬಂದಿವಿಡಿವ, ಇದನ್ನು ಬಿಟ್ಟರೆ ಅಧರಕ್ಕೆ ಬೇರೆ ಉಚಿತೋಪಮಾನ ಕಾಣಬಾರದ ಆಲದ ಹಣ್ಣನ್ನೂ, ಆಂತ೦ತಿರೆ = ಧರಿಸಿಕೊಂಡ ನೋ ಎಂಬ ಸಂದೇಹವನ್ನು ಹುಟ್ಟಿಸುವಂತೆ, ನೇತ್ರಭೂಬಿಂಬಾಧರ೦ಗಳಿ೦ದ ಕೂಡಿ, ಎಸೆಗುಂ = ಪ್ರಕಾಶಿಸುತ್ತಾನೆ- ಎಂದು ಪದ್ಯಾರ್ಥವು. - ಒಂದು ವಸ್ತುವನ್ನು ತತ್ಸದೃಶವಾದ ಮತ್ತೊಂದು ವಸ್ತುವಿನೊಡನೆ ಹೋಲಿ ಸುವುದರಲ್ಲಿ ಆಹ್ಲಾದವೂ ಯಥೋಚಿತವಾಗಿ ಸ್ವರೂಪಜ್ಞಾನವೂ ಹೆಚ್ಚು ವುದು. ಸ್ವತಸ್ಸ೦ತೋಷಜನಕವಾದ ವಸ್ತುವಿನೊಡನೆ ವಸ್ತ್ರಂತರವನ್ನು ಸಮವೆಂದು ಹೇಳಿ ದರೆ ತಪ್ಪಾ ಹಚರದಿಂದ ಇದೂ ಸಂತೋಷಜನಕವಾಗುವುದನ್ನು ಬಹುಕಡೆ ಅನುಭ ವಿಸಿದ್ದೇವೆ. ಇದೇ ಮುಖಕ್ಕೆ ಚಂದ್ರನ ಸಾಮ್ಯವನ್ನು ಕೊಡುವುದರಲ್ಲಿ ಕಾರಣವ. ಚಂದ್ರನಲ್ಲಿರುವ ಅಥವಾ ಚಂದ್ರನಿಗೆ ಕುರುಪಾದ ಗುಣಗಳೆಲ್ಲವೂ ಮುಖದಲ್ಲಿ ಇಲ್ಲದಿದ್ದರೆ, ಅದಕ್ಕೂ ಇದಕ್ಕೂ ಹೇಗೆ ಸಾಮ್ಯವು ಸಿದ್ಧಿಸುವುದು ? ಆದುದರಿಂದಲೇ ಕಳಂಕರಹಿತನಾದ ಚಂದ್ರನೆಂದು ಮುಖವನ್ನು ನಿರೂಪಿಸಲಿಲ್ಲ, ಹಾಗೆ ವರ್ಣಿ