ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸವುದು, • • • •- +r - - - -+• • • •v -/Mar ವಿವೇಕವೆಲ್ಲಿಂದ ಬರುವುದು ? ಸೀತೆಯ ರುತಿಯು ಕೋಕಿಳದಲ್ಲಿ, ಈಕ್ಷಣವು ಉತ್ಪಲ ದಲ್ಲಿ, ವಿನೀಳಕುಂತಳವು ಅಳಿಮಾಲೆಯಲ್ಲಿ, ಈ ರೀತಿಯಾಗಿ ಕೆಲಕೆಲವು ಅಂಗಗಳು ಕೆಲಕೆಲವಲ್ಲಿ ಮರೆಸಿಯಿಕೊಂಡವೆಂದು ಭ್ರಮಿಸಲು ಕಾರಣವೇನೆಂದರೆ-ಸೀತೆಯ ಧ್ವನಿಯು ಕೋಕಿಲದಲ್ಲಿ ಮರೆಯಿಸಿಕೊಳ್ಳದಿದ್ದರೆ ಕೋಕಿಳಕ್ಕೆ ಅಂಧ ಕಲಧ್ವನಿಯು ಹುಟ್ಟುವ ಸಂಭವವಿರುತ್ತಿರಲಿಲ್ಲ; ಅವಳ ಈಕ್ಷಣವು ಉತ್ಪಲದಲ್ಲಿ ಮರೆಯಿಸಿಕೊಳ್ಳ ದಿದ್ದರೆ ಅಂಥ ಸೌಂದರವು ಅದಕ್ಕೆ ಬರುತ್ತಿರಲಿಲ್ಲವೆಂದು ತಿಳಿದನು. ಇತ್ಯಾದಿ. ಹೀಗಿರಲು ಶ್ರೀರಾಮನು ಮೊದಲು ತಳಿರು ಮೊದಲಾದುವುಗಳನ್ನು ಸೀತೆಯಿ ರುವ ಸ್ಥಳವನ್ನು ಕೇಳಿ, ಬಳಿಕ ಅವಳ ಈಕ್ಷಣ ಮೊದಲಾದುವು ಉತ್ಪಲಾದಿಗಳಲ್ಲಿ ಮೈಗ ರೆದುವೆಂದು ಭ್ರಮಿಸಿ ಬಳಿಕ ಅವಳನ್ನೇ ಶರಣಹೊಂದಿದನೆಂದು ವರ್ಣಿಸಿರುವುದರಲ್ಲಿ ಅರ್ಥೇಚಿತ್ಯ, ಸದೌಚಿತ್ಯ, 1 ಸ್ಥಿತೌಚಿತ್ಯಗಳು ಚೆನ್ನಾಗಿ ಕಂಡುಬರುವುವು. ಇವಲ್ಲದೆ ಈ ಎರಡು ಪದ್ಯಗಳಲ್ಲಿಯೂ ಪದಗಳ ಜೋಡಣೆಯಿಂದ ಕವಿಗೆ ಬೇರೆ ಆಶಯಗಳು ಉಂಟೆಂದು ಗೊತ್ತಾಗುವುದು, ಅವೇನೆಂದರೆ-೧, ತಾವರೆ ಮೊದಲಾದುವುಗಳನ್ನು ನೋಡಿದ ಕೂಡಲೆ ಅವುಗಳು ವಿರಹತನಾದ ಶ್ರೀರಾಮನ ಚಿತ್ತಭಿತ್ತಿಯಲ್ಲಿ ಸೀತಾದೇವಿಯ ಚಿತ್ರ ಪಠವನ್ನು ರಚಿಸದೇ ಇರವು, ಅದರಿಂದ ವಿರ ಹತಾಪವು ವೆಗ್ಗಳಿಸಿ ರಾಮನಿಗೆ ಸಹಿಸಲಶಕ್ಯವಾಗಿ ಆಗುವುದು, ೨, ಬಿಸಿಲ ಬೇಗೆಗೆ ಬಾಯಾರಿ ಬಳಲಿದವನು ದರದಲ್ಲಿ ಬಿಸಿಲ್ಲು ದುರೆಯನ್ನು ಕಂಡು ಸಮೀಪದಲ್ಲಿಯೇ ನೀರು ಸಿಕ್ಕುವುದೆಂದು ಭ್ರಮಿಸಿ ಶಾಂತಿಹೊಂದುವ ಹಾಗೆ ಶ್ರೀರಾಮನು ಇವುಗ ಳನ್ನು ನೋಡಿ ಸ್ವಲ್ಪ ಶಾಂತನಾದನು. ೩. ಸೀತಾದೇವಿಯು ಶ್ರೀರಾಮಮುದ್ರಿಕೆ ಯನ್ನು ಕಂಡು ಅದನ್ನು ತನ್ನ ನಯನಕ್ಕೆ ಒತ್ತಿ ಹೃತ್ಕಮಲದಲ್ಲಿ ಇಟ್ಟು ಕೊಂಡು ಚೈತನ್ಯ ಪಡೆದಂತೆ ಶ್ರೀರಾಮನು ಸೀತಾವಯವಗಳ ಪ್ರತಿಕೃತಿಗಳನ್ನು ಕಂಡು ಆಪ್ಯಾಯಿತನಾದನು-ಎಂಬ ಆಶಯಗಳೂ > ವ್ಯಂಗ್ಯ ಮರಾದೆಯಿಂದ ತಿಳಿದು ಬರುವವು. ಹೀಗಿರಲು ಇಲ್ಲಿ ಕವಿಯು ಶೃಂಗಾರರಸಕ್ಕೆ ವಾಕ್ಚಾತುರವೆಂಬ ಒರತೆಯನ್ನು ಕೊಟ್ಟಿರುವನು. 1. ತನ್ನ ಸ್ಥಿತಿಗೆ ಸರಿಯಾಗಿ ಮಾತುಗಳನ್ನು ಆಡುವಿಕೆ. 2, ವ್ಯಂಗ್ಯಮತ್ಯಾದೆಯೆಂದರೆ :-ವಾಕ್ಯದಲ್ಲಿ ಅನ್ವಿತವಾದ ಪದಗಳಿಂದ ವಾಚ್ಯ ವಾಗಿ, ಎಂದರೆ, ಸ್ಪಷ್ಟವಾಗಿ ತಿಳಿದು ಬರುವ ಅರ್ಥವನ್ನು ವಾಚ್ಯಾರ್ಥ