ಕವಿಸಮಯ 2. • • •••• - * * * * * * * * * - - - - - - .. • • • • •y on ಯು ತನ್ನಂತೆ ಶ್ರೇಷ್ಠವಾಗಿಯೂ, ಬಿಳುಪಾಗಿಯೂ ಇರುವ ವಸ್ತುಗಳ ಮುಂದೆ ತನ್ನ ಮಾಹಾತ್ಮವನ್ನು ತೋರಿಸಿಕೊಂಡಿತು ; ಅದರಿಂದ ಅವುಗಳೆಲ್ಲವೂ ತಿರಸ್ಕಾರ ಹೊಂದಿ, ರೂಪಾಂತರವನ್ನು ಪಡೆದುವೆಂದು ವರ್ಣಿಸಿರುತ್ತಾನೆ. ಅದು ಹೇಗೆಂದರೆ ? ಅಮಲಧರ್ಮಜನ ಕೀರ್ತಿ, ನಾಗೇಂದ್ರನಂ-ಆದಿಶೇಷನನ್ನು, ಬಿಡದೆ ತಲೆ ವಾಗಿಸಿತ್ತು; ಅಮರನಾಗೇಂದ್ರನಂ-ಐರಾವತವನ್ನು , ಬುದ್ಧಿ ದೊರೆಯಿಸಿತು-ಮಂ ಕುಮಾಡಿತು ; ಪುರಮರ್ದನ-ತಿ ಪುರಾರಿಯಾದ ಈಶ್ವರನ, ಅಗೇಂದ್ರನಂ-ವಾಸ ಸ್ಥಾನವಾದ ಕೈಲಾಸ ಪರತವನ್ನು , ನಿಂದು ಬೆರಗಾಗಿಸಿತ್ತು--ಇದನ್ನು ನೋಡಿ ನಿಂತಲ್ಲಿಯೇ ನಿಂತಿತು, ಎಂದರೆ, ಸ್ಥಬ್ಧವಾಯಿತು ; ಬಳಿಕ, ನಾಗೇಂದ್ರ ಶಯನ ಶೇಷಶಾಯಿಯಾದ ವಿಷ್ಣುವಿನ, ಆಲಯವು-ಮನೆಯಾದ ಕ್ಷೀರಸಮುದ್ರವನ್ನು, ಜಡಧಿಯೆನಿಸಿ-ಮಂಕುಬುದ್ಧಿಯುಳ್ಳದೆಂದು ಮಾಡಿ, ( ಜಡಧಿ - ಜಲಧಿ, ಸಮುದ್ರ; ಶೇಷಾರ್ಥ) ; ನುತನಾಗೇಂದ ವರದ-ಗಜೇ೦ದನಿಗೆ ವರಸ ದಾನಮಾಡಿದ ವಿಷ್ಣುವಿನ, ಆಯುಧವ-ಕೆಯ್ಯಲ್ಲಿ ಬೆಳ್ಳಗಿರುವ ಶಂಖವನ್ನು , ಪೊಳ್ಳು ಗಳೆದುಂಟೊಳ್ಳು ಮಾಡಿಬಿಟ್ಟ; 1 ಮಥನಾಗೇಂದಧರನ-ಸಮುದ್ರಮಥನದಲ್ಲಿ ಕಡೆಗೋ ಲಾದ ಮಂದರಪಕ್ವತವನ್ನು ಧರಿಸಿದ ಕ್ಷೀರಸಮುದ ದ, ಜಾತೆಯ--« ಕ್ಷೀರಸಾ ಗರ ಕನ್ಯಕೆ ?” ಯಾದ ಲಕ್ಷ್ಮಿಗೆ, ನಿಲವುಗೆಡಸಿ'-- ಸ್ಥಾನಭ೨೦ಶವನ್ನುಂಟುಮಾಡಿ, ಮೂಜಗದೊಳು, ರಾಜಿಸಿತು, ಎಂದು ವರ್ಣಿಸಿರುತ್ತಾನೆ. ಸರ್ಷಕ್ಕೆ ತಲೆ ಬಗ್ಗಿಸಿಕೊಂಡಿರುವುದು ಸ್ವಭಾವ, ಅನೆಗೆ ಬುದ್ಧಿ ಮಾಂದ್ಯವು ಸ್ವಭಾವ, ಕೈಲಾಸಕ್ಕೆ ಸ್ತಬ್ಧವಾಗಿ ನಿಂತಿರುವುದು ಸ್ವಭಾವ, ಕ್ಷೀರಸಮುದ್ರವು ಜಡಧಿಯೇ, ಶಂಖವು ಟೊಳ್ಳೆ, ಲಕ್ಷ್ಮಿಯು ಚಂಚಲಳೇ, ಹೀಗಿರುವಾಗ ಸಹಜ ವಾದ ಗುಣಗಳ ಸಹಜತ್ವವನ್ನು ಅಸಲಸಿಸಿ, ಧರಜನ ಕೀರ್ತಿಪ್ರಸರಣದಿಂದ ಹೀಗಾದುವೆಂದು ಅನುಮಾನಿಸಿ ಹೇಳಿರುವುದು ಕವಿಯ ಔಚಿತ್ಯಜ್ಞಾನಪ್ರಕಾಶ. 1. ಮಥನಾ...ಗೆಡಿಸಿ- ಸಮುದ್ರಮಥನ ಕಾಲದಲ್ಲಿ ಕಡೆಗೋಲಾದ ಮಂದರ ಪತವನ್ನು ಬೆನ್ನಿನ ಮೇಲೆ ಧರಿಸಿದ ಕೂಕ್ಷ್ಮರೂಪಿಯಾದ ವಿದ್ಯುಸಿನ, ಜಾತೆಲುಪದೋತೃವಳಾದ ಗಂಗೆಯ (ನಿಮ್ಮ ಪಾದೋದ್ಭವಾ ಗಂಗಾ-ಅವರ ನಿಲವುಗೆಡಿಸಿಸ್ವರ್ಗದಿಂದ ಭೂಮಿಗೆ ಭೂಮಿಯಿಂದ ಪಾತಾಳಕ್ಕೆ ಹೋಗುವಹಾಗೆ ಮಾಡಿ-ಎಂಬ ಅರ್ಥವು ಆಗುತ್ತದೆ. 2, ಕಾರಣಗಳಿಂದ ಊಹಿಸಿ,
ಪುಟ:ಕವಿಸಮಯಂ ಪ್ರಥಮ ಭಾಗ.djvu/೪೨
ಗೋಚರ