ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಕರ್ನಾಟಕ ಗ ಂಥಮಾಲೆ. wwwxvvvv + ~ ~ ಅನಂತ್ ೦೬:೩೯, ೧೪ ಫೆಬ್ರುವರಿ ೨೦೧೮ (UTC) ನೋಡಿ ಮೇಘವೆಂದೂ, ನೀನು ಕೊಡುವ ನೀರನ್ನು ಮಳೆಯ ಹನಿಯೆಂದೂ ತಿಳಿದು ಕುಡಿದು ನಲಿದು ಉಬ್ಬಿ ಹೋಗುವುವು : ಆದುದರಿಂದ ನೀನೇ ಅವುಗಳಿಗೆ ನೀರನ್ನು ಕುಡಿಸು, ಎಂಬ ಅರ್ಥವೂ - ಕಮಲಮುಖಿ ” ಇತ್ಯಾದಿ-ಎಲೆ ಕಮ ಲಮುಖಿಯೇ, ಹಂಸಗಳಿಗೆ ನೀನು ತಾವರೆಯ ದಂಟನ್ನು ತಿನ್ನಲು ಕೊಟ್ಟರೆ, ನಿನ್ನ ಕೆಯ್ಯ ದಂಟನ್ನೂ ನಿನ್ನ ಮುಖವನ್ನೂ ನೋಡಿ, ಇದು ಕಿತ್ತು ತಂದ ತಾವರೆಯ ದಂಟಲ್ಲ, ಕೊಳದಲ್ಲಿರುವ ದಂಟೆಂದೇ ನಂಬಿ ಸಂತೋಷದಿಂದ ಮೆಲ್ಲುವುವು ? ಎಂಬ ಅಭಿಪ್ರಾಯವೂ- ಬಿಂಬಾಧರೆ ” (ಪಲ್ಲವಪಾಣಿ ” ಇತ್ಯಾದಿ-ಎಲೆ ಬಿಂಬಾ ಧರೆಯೇ, ನಿನ್ನ ಅಧರವನ್ನು ಕಂಡು ಬಿಂಬಫಲವೆಂದು ಗಿಳಿಗಳೂ, ಎಲೆ ಪಲ್ಲವ ಪಾಣಿಯೇ, ನಿನ್ನ ಕೆಯ್ಯನ್ನು ಚಿಗುರೆಂದು ಕೋಗಿಲೆಗಳೂ ಕಚ್ಚಿಬಿಡುವುವು ; ಅದರಿಂದ ನಿನ್ನ ಅಧರದ ಮಾಧುರವೂ, ನಿನ್ನ ಹಸ್ತದ ಸೊಂಪೂ ಹೋಗಿಬಿಡುವುವು, ಆದುದರಿಂದ ಅವುಗಳ ಗೂಡುಗಳ ಸವಿಾಪಕ್ಕೆ ನೀವು ಹೋಗದಿರಿ ಎಂಬ ಆಶಯ ಗಳೂ-ಇತ್ಯಾದಿಗಳು ಇಲ್ಲಿ ಪದಸಮಭಿಹಾರದಿಂದ ಸೂಚಿಸಲ್ಪಡುವುವು. ಹೀಗಿರಲು, ಈ ಉದಾಹರಣೆಯು ಜಾತಿ, ದವ, ಕ್ರಿಯೆ, ಗುಣ, ಅಲಂ ಕಾರ, ಮುಖ್ಯವಾಗಿ ವ್ಯಂಗ್ಯ-ಇವುಗಳ ವಿಷಯದಲ್ಲಿರುವ ಕವಿಸಮಯಕ್ಕೆ ಉತ್ತ ಮೋದಾಹರಣವೆಂದು ನಿಸ್ಸಂದೇಹವಾಗಿ ಹೇಳಬಹುದು. 1 ಏವಂಚ ಮೇಲೆ ನಿರೂಪಿಸಿದ ಪದ್ಯಗಳಿಂದ ಕವಿಸಮಯವಿಂಥದೆಂದು ತಿಳಿದುಬರುವುದೂ ಅಲ್ಲದೆ ಅದು ನಾಗವರ್ಮನು ಹೇಳಿದಂತೆ ಲೋಕವಿಷಯ ಸ್ಥಿತಿಯಲ್ಲು, 11 ಅಖಿಳಾಗಮಾರ್ಥಮುಂ ಅಲ್ಕು ” ಎಂಬುದೂ ಗೊತ್ತಾಗುವುದು. ಮತ್ತು ಆ ಕವಿಸಮಯವು ಜಾತಿ ದ್ರವ್ಯ ಕ್ರಿಯಾಗುಣಾಶ್ರಯವಾಗಿಯೂ, ಅಲಂಕಾರಾಶ್ರಯವಾಗಿಯೂ, ರನಾಶ್ರಯವಾಗಿಯ, ವ್ಯಂಗ್ಯಾಶ್ರಯವಾಗಿ ಯ ಇದೆಯೆಂದು ಹೇಳಬಹುದು. ಯದ್ಯಪಿ, ಅಲಂಕಾರವೂ ರಸವೂ ಜಾತಿ ದ್ರವ್ಯ ಕ್ರಿಯಾಗುಣಾತ್ಮಕವಾಗಿಯೇ ಇದ್ದರೂ ಅವುಗಳನ್ನು ಸ್ಪಷ್ಟಿಕರಣಕ್ಕಾಗಿ 1. ಏವಂಚ, ಅಥವಾ ಇತ್ಥಂಹ-ಎಂಬ ಮಾತುಗಳನ್ನು ವಿಷಯವನ್ನು ಸಿದ್ಧಾಂ ತಿಸುವಲ್ಲಿ ಸಾಧಾರಣವಾಗಿ ಉಪಯೋಗಿಸುತ್ತಾರೆ, ಇದಕ್ಕೆ-ಹೀಗೆಲ್ಲಾ ಮೇಲೆ ನಿರೂಪಿಸಿದ ಪ್ರಮಾಣಗಳ ಬಲದಿಂದ, ಎಂದು ಅರ್ಥ, 2 ಹಾಗಿದ್ದರೂ,