ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಸಯಂ. ೩೬ ++ * * * ಈ ಎರಡು ಪದ್ಯಗಳೂ ಚಂದ್ರಿಕಾವರ್ಣನೆಯಲ್ಲಿ ಪ್ರವೃತ್ತವಾಗಿರುವುವು. ಇವೆರಡರಲ್ಲಿಯೂ ವರ್ಣನಾಪ್ರಕಾರವು ಬೇರೆಬೇರೆಯಾಗಿದ್ದರೂ ಚಕ್ರಗಳು ಜ್ಯೋತ್ಸಾ ಪಾನಮಾಡುವುವೆಂಬುವುದೊಂದೇ ಕವಿಸಮಯವು, ಎರಡರಲ್ಲಿಯೂ ಆನಂದವು ಸಮಾನವಾಗಿರುವುದು. ಮೊದಲನೆಯ ಪದ್ಯದಲ್ಲಿ ಚಂದ್ರಿಕಾಪೂರ್ಣವಾದ ಆಕಾಶವನ್ನು ಈಂಗಡ ಲೆಂದೂ, ಆಕಾಶದಲ್ಲಿ ಚಂದಿಕಾಪಾನದಿಂದ ನಲಿದಾಡುವ ಚಕ್ರಗಳು ಈಂಗಡ ಲಲ್ಲಿ ಓಲಾಡುವ ವಿಾನುಗಳೆಂದೂ ಉತ್ಸೆ ಕ್ಷಿಸಿ ಇದೆ. ದ್ವಿತೀಯ ಪದ್ಯದಲ್ಲಿ ಚಕೊರಗಳು ಅನೇಕವಾಗಿ ಸೇರಿ ತಮ್ಮ ತೀಕವಾದ ಚಂಚುಗಳಿ೦ದ ಚಂದ್ರಕಿರಣಗಳೆಂಬ ಲತಾ೦ಕುರಗಳನ್ನು ಕಿತ್ತು ತಿನ್ನಲು, ಆ ಲತೆ ಗಳ ತುದಿಗಳಿಂದ ಬೆಳ್ಳಗೆ ಪಸರಿಸುವ ಹಾಲಿನಂತೆ-ಅಮೃತಕಿರಣನ ಕಿರಣಗಳು ಅಮೃತಧಾರೆಗಳೇ ಆಗಿರುವುದರಿಂದ, ಪೊಸತಾದ ಬೆಳದಿಂಗಳು ಸುರಿದುವು ಎಂದು ಉತ್ತೈಕ್ಷಿಸಿ ಇದೆ. ಮೇಲಿನ ಪದ್ಯದಲ್ಲಿ ಚಕ್ರಕ್ಕೆ ವಿಾನಿನ ಆಕೃತಿಸಾಮ್ಯವು ಉಂಟಾಗುವುದಕ್ಕೆ ಚಂದ್ರಾ೦ಶುಪೂರ್ಣ ಚಂಚುಪುಟಂಗಳl 11 ಎಂದು ಪ್ರಯೋ ಗಿಸಿದೆ. ಈ ವಿಶೇಷಣದ ಅರ್ಥವನ್ನೇ ವಿಸ್ತರಿಸಿ ( ಚಕೋರಪ್ರಕರಂ ಖರಚಂ ಚುವಿನುಡಿದು ತಿನೆ ಸುಧಾಕರಕಿರಣಾಂಕುರ ನಿಕರಮಂ ” ಎಂದು ಮತ್ತೊಂದರಲ್ಲಿ ಹೇಳಿದೆ. ಮೀನುಗಳು ನೀರಿನಲ್ಲಿ ಓಲಾಡುವುದೂ, ಪಕ್ಷಿಗಳು ಲತಾಂಕುರಗಳನ್ನು ಛೇದಿಸಿ ತಿನ್ನುವುದೂ ಎಂಬ ಉಪಮಾನಗಳು ಸ್ವತಏವ ಪ್ರೇಕ್ಷಕರಿಗೆ ಆನಂದ ಕೊಡುವುದರಿಂದ ಅವುಗಳ ಸಾಹಚರದಿಂದ ಉಪಮೇಯಗಳು ಆನಂದದಾಯಕಗ ಳೆಂಬುದು ಸಿದ್ದ. (3) ನಡೆಯಂ ವನ್ಯಗಜಂಗಳ | ನಡೆಯೊಳ್ ಸೋಗೆಗಳ ಸೋಗೆಯಂ ಸೋರ್ಮುಡಿಯೊಳು || ನುಡಿಯಂ ಕೋಕಿಳರುತಿಯೊಳು || ಪಡಿಯಿಡಲೊಡನುಯ್ದೆ ತನಯ ಜನಕಾತ್ಮಜೆಯಂ || ( ಪಂಪರಾಮಾಯಣಂ) ಅಂಚೆಗೆ ಮಂದಯಾನಮದಮಿಂದೊಳಸೋರ್ಗೆ ಮತ್ತಕೋಕಿಲ । ಕಂ ಚರಮಕ್ಕೆ ಕಾಕಳಿಯ ಹೂಂಕೃತಿ ಭಂಗಚಯಕ್ಕೆ ಮೇಚಕೋ |