ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸಮಯಂ. kwwy ಎರಡನೆಯ ಪದ್ಯದಲ್ಲಿ ಶೃಂಗಾರರಸೋದ್ದೀಪಕ ಸಾಮಗ್ರಿಗಳು ಹೇಳಲ್ಪಟ್ಟಿವೆ. ಮೊದಲನೆಯದರಲ್ಲಿ ವೈರಾಗ್ಯರಸಕ್ಕೆ ಉಚಿತವಾದುವುಗಳು, ಎರಡು ಪದ್ಯಗಳೂ ರಸಪುಷ್ಟಿಯಲ್ಲಿ ಒಂದೇ ತುಲೆಯಲ್ಲಿರುವುವು, ಆಯಾ ರಸಗಳನ್ನು ಉತ್ಪಾದಿಸುವುದ ರಲ್ಲಿ ಇನ್ನೂ ಅತಿಶಯವಾಗಿ ವರ್ಣಿಸುವುದು ಅಸಾಧ್ಯವೆಂದೇ ತೋರುತ್ತದೆ, ರಸ ಪುಷ್ಟಿಯಲ್ಲಿ ಎರಡೂ ಪರಭಾಗವನ್ನು ಹೊಂದಿವೆ. ಮತ್ತು (6) ವಾಯುವಿನಲ್ಲಿ ಮಾಂದ್ಯ ಶೈತ್ಯ ಸೌರಭ್ಯರೂಪವಾದ ಗುಣಗಳು ಇರ ಬೇಕು, ಅವುಗಳಿಲ್ಲದಿದ್ದರೆ ವಾಯುಚಲನವು ಆಹ್ಲಾದಕರವಾಗಿಯೂ ಹಿತವಾ ಗಿಯೂ ಇರದು. ಈ ಗುಣಗಳನ್ನು ಇಟ್ಟು ಕೊಂಡು ಸಂದರ್ಭೋಚಿತವಾಗಿ ರಸೋ ತೇಜಕವಾಗುವಂತೆ ವರ್ಣಿಸುವ ನಿಮಿತ್ತ ಪುಂಸ್ಕಾರೋಹಣವನ್ನು ಮಾಡಿ ಕವಿ ಗಳು ವರ್ಣಿಸುವ ಸಂಕೇತವುಂಟು, ಚೈತನ್ಯ ಕಾವ್ಯವನ್ನು ವರ್ಣಿಸುವಾಗ ನಮಗೆ ಸಜಾತೀಯ ವಿಜಾತೀಯ ಪ್ರಾಣಿಗಳಂತೆ ಉತ್ತೇಸಿ ಹೇಳದಿದ್ದರೆ ತನ್ನಿ ರೂಪಿತ ವ್ಯಾಪಾರಗಳು ಸ್ಪಷ್ಟವಾಗಲಾರವು. ಆದುದರಿಂದ ಕವಿಗಳು ವಾಯುವಿಗೆ ತತ್ವ ತೃಂದರ್ಭಕ್ಕೆ ಉಚಿತವಾದ ರೀತಿಯಲ್ಲಿ ಪುಂಸ್ಕಾರೋಪ ಮಾಡಿಯೇ ಪ್ರಾಯಶಃ ವರ್ಣಿಸುವರು, ಆಯಾ ವರ್ಣನೆಗಳನ್ನು ನೋಡಿದಾಗಲ್ಲವೆ ಕವಿಸಮಯವು ಕವಿಗಳ ಪ್ರತಿಭೆಗೆ ಹೇಗೆ ಅವಕಾಶವನ್ನು ಕೊಡುತ್ತದೆಯೋ ಅದನ್ನು ತಿಳಿಯಬಹುದು. ಉದಾಹರಣೆ:- ೧, ನೆಲಸುತ್ತುಂ ಕೊಳದೊಳ• ಸರೋಜಮುಕುಳಂ ಸಸ್ಕೋರಮಪ್ಪಂತು ಜಿ | ಕುಲಿಸುತ್ತುಂ ಪೊಸತಂ ಲತಾಪ್ರಸವಮಂ ಮುಂದಾಡಿ ತಣ್ಣ೦ಪನ | ಗ್ಗಲಿಸುತ್ತುಂ ಪರಪುಷ್ಟ ಕೀರರವಮಂ ತಂದೊಂದನೊಂದೊಂದರೊಳೆ | ಕಲಸುತ್ತುಂ ಬನದಿಂ ವಿನೋದಚತುರಂ ಬಂದತ್ತು ಮಂದಾನಿಲಂ || ( ಮಲ್ಲಿನಾಥಪುರಾಣ೦) ಟಿಪ್ಪಣಿ ಸರ ಮುಪ್ಪಂತು= ಹುಸಿನಗೆ ನಗುವಹಾಗೆ, ಜಕ್ಕಲಿಸುತ್ತು!= ಆಟವಾಡಿಸಿ, ದುಂಡಾಡಿ...ಸುತ್ತು= ತಲೆಸವರಿ, ಅವಳಿಗೆ ತಿಳಿದುದಂತೆ ತಣ್ಯಂ ನನ್ನು ಉದಹರಿಸಿ :