84 ಕರ್ಣಾಟಕ ಗ ಂಥವರ. • • • • • • • • • • , , , - - – -• , , ,
- * * * * *
ಬರಿಯ ಸಂಕೇತವೇ ? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ. ಕವಿಸಮಯ ನಿಬಂಧನಗಳೆಲ್ಲಕ್ಕೂ ಕಾರಣಗಳನ್ನು ನಿರೂಪಿಸುವುದಕ್ಕಾಗದಿದ್ದರೂ ಅನೇಕ ಕಡೆ ಹೇಳಬಹುದು, ಹೇಗೆಂದರೆ ? ಸಕಲ ಪ್ರವೃತ್ತಿ ನಿವೃತ್ತಿಗಳೂ ಸುಖದುಃಖನಿಬಂಧನವಾಗಿರುವುದು ಕಂಡೇ ಇದೆ. ಕೀರ್ತ್ಯಕೀರ್ತಿಗಳು ಸುಖದುಃಖ ನಿಮಿತ್ತಗಳು, ದೃಷ್ಟಿಗೋಚರಗಳಲ್ಲವು. ಇವುಗಳನ್ನು ಕಣ್ಣಿಗೆ ಕಂಡಂತೆ ಕವಿಗಳು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ, ಏಕೆ ಎಂದರೆ, ಸುಖಾತಿಶಯಕ್ಕಾಗಿ, ತೊಂದ್ರಿಯಪ್ರತ್ಯಕ್ಷಕ್ಕಿಂತ ಒಂದು ವಸ್ತುವು ಚಕ್ಷುರಿಂದ್ರಿಯ ಪ್ರತ್ಯಕ್ಷವಾದರೆ ಅದರ ಸಂಸ್ಕಾರವು ಚಿರಸ್ಥಾಯಿಯಾಗಿಯೂ ಸು ಖಾತಿಶಯದಾಯಕವಾಗಿಯೂ ಆಗುವುದು, ಧಾವಳ್ಯ ಕಾರ್ಷ್ಟಗಳು ಸ್ವಭಾವತಃ ಸುಖದುಃಖಜನಕಗಳು. ಆದುದರಿಂದ ಅಮೂರ್ತದ್ರವ್ಯವಾದ ಕೀರ್ತಿಗೆ ಧಾವಳ್ಯ ವನ್ನೂ ಅಕೀರ್ತಿಗೆ ಕಾರ್ಷ್ಟವನ್ನೂ ಆರೋಪಿಸಿ ಹೇಳುವುದರಲ್ಲಿ ಔಚಿತ್ಯವುಂಟು. ಈ ಲೋಕದಲ್ಲಿ ಜನಗಳಿಗೆ ಹಿಂಸೆಯನ್ನೂ ಕೈಭೆಯನ್ನೂ ಕೊಟ್ಟು ಹತ್ತಿರಕ್ಕೆ ಒಬ್ಬರನ್ನೂ ಸೇರಿಸದಹಾಗೆ ಮಾಡುವುದರಲ್ಲಿ ಬೆಂಕಿಯಂತೆ ಉತ್ತಮವಾದ ದೃಷ್ಟಾಂ ತವು ಮತ್ತೆ ಬೇರೆ ಇಲ್ಲ. ಆರುಣ್ಯವೂ ಶೈಕ್ಷವೂ ಬೆಂಕಿಗೆ ನಿರೂಪಕಧರ್ಮವು. ಪ್ರತಾಪಕ್ಕೆ ಆರುಣ್ಯವನ್ನೂ ಔಷ್ಟ್ರವನ್ನೂ ಕೊಡುವುದಕ್ಕೆ ಇದೇ ಕಾರಣವಿರ ಬಹುದು. ಎಲ್ಲಿ ಯಾವುದು ಹೆಚ್ಚಾಗಿದೆಯೋ ಅಲ್ಲಿ ಎಲ್ಲವೂ ಅದೇ ಎಂದು ಹೇಳುವುದು ಸ್ವಭಾವ. ಒಬ್ಬನಲ್ಲಿ ಅನೇಕ ಸುಗುಣಗಳಿದ್ದು ಒಂದೆರಡು ದುರ್ಗುಣಗಳಿದ್ದರೂ ಅವನನ್ನು ಸುರ್ಗುಣಿಯೆಂದೇ ಹೇಳುವರು. ಅದರಂತೆಯೇ ಮಲಯಪರ್ವತದಲ್ಲಿ ಚಂದ ನವೇ ಹೆಚ್ಚಾಗಿ ಬೆಳೆವುದರಿಂದಲೂ, ಹಿಮವತ್ಪರ್ವತದಲ್ಲಿ ಭೂರ್ಜವೇ ಹೆಚ್ಚಾಗಿ ಬೆಳೆವುದರಿಂದಲೂ, ಮಲಯಗಿರಿಯಲ್ಲಿಯೇ ಚಂದನೋತ್ಪತ್ತಿಯೂ, ಹಿಮಗಿರಿಯ ಲ್ಲಿಯೇ ಭೂರ್ಜಜನ್ಮವೂ ಎಂಬ ಕವಿಸಮಯವು ಹುಟ್ಟಿರಬಹುದು, ಹೀಗೆಯೇ ವಸಂತದಲ್ಲಿಯೇ ಕೋಕಿಲರುತವೂ, ವರ್ಷತರ್ುವಿನಲ್ಲಿಯೇ ಮಯೂರನೃತ್ಯವೂ ಇತ್ಯಾದಿ ಕವಿಸಮಯಗಳೂ ಹುಟ್ಟಿರುವುದಕ್ಕೆ ಕಾರಣವನ್ನು ಊಹಿಸಿಕೊಳ್ಳಬಹುದು. ಶುಕ್ಲ ಪಕ್ಷದಲ್ಲಿ ಅಂಧಕಾರವೇ ಇಲ್ಲವೆಂಬ ಕವಿಸಮಯಕ್ಕೆ ಪೂರ್ವರಾತ್ರಿಯಲ್ಲಿ ಚಂದ್ರಿಕೆಯು ಬಹುಕಾಲವಿರುವುದೂ; ಕೃಷ್ಣ ಪಕ್ಷದಲ್ಲಿ ಚಂದ್ರಿಕೆಯೇ ಇಲ್ಲವೆಂಬ ಕವಿಸಮಯಕ್ಕೆ ಪೂರ್ವರಾತ್ರಿಯಲ್ಲಿ ಅಲ್ಪ ಕಾಲ ?ಕಂದ್ರಿಕೆ ಇರುವದೂ ಅಥವಾ