ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇy ಕರ್ಣಾಟಕ ಗ್ರಂಥಮಾಲೆ. vvvvv/ vv ಅಪರಿಚಿತವಾದ ವಸ್ತುವಿನಲ್ಲಿ ಸಂಪೂರ್ಣ ಹೋಲಿಕೆಯಿದ್ದರೂ, ಅದರ ಹೋಲಿಕೆ ಯಿಂದ ಪ್ರಯೋಜನವಿಲ್ಲ. ಸಂಪೂರ್ಣವಾಗಿ ಸಮಾನಧರ್ಮವುಳ್ಳ ಅಪರಿಚಿತ ವಸ್ತುವಿನೊಡನೆ ಹೋಲಿಸುವುದಕ್ಕಿಂತ ಅಲ್ಪಸ್ವಲ್ಪವಾಗಿಯಾದರೂ ಹೋಲಿಕೆ ತೋರಿಬರುವ ಪರಿಚಿತವಸ್ತುವಿನೊಡನೆ ಹೋಲಿಸುವುದರಲ್ಲಿ ವಸ್ತು ಜ್ಞಾನವು ಮನಸ್ಸಿಗೆ ಸುಗಮವಾಗುವುದು. ಆದುದರಿಂದ ಲೋಕದಲ್ಲಿ ದೃಷ್ಟಸಾಮ್ಯವನ್ನೇ ಕೊಟ್ಟು ವಲ್ಲಿ ಸುವರು ; ಅದರಿಂದ ಯಥೋಚಿತವಾಗಿ ವಸ್ತು ಜ್ಞಾನವುಂಟಾಗುವುದು. ಇದೊಂ ದು ಅಲಂಕಾರಕ್ಕೆ ಪ್ರಯೋಜನ, ಕೋಮಲತ್ವ ಮಸೃಣತ್ವಗಳಲ್ಲಿ ಹಸ್ತಕ್ಕೂ ಸಲ್ಲ ವಕ್ಕೂ ಸಾಮ್ಯವಿರುವಹಾಗೆ ಬೆಕ್ಕಿನಮೈಗೂ ಬಾಳೆಯ ದಿಂಡಿಗೂ ಇದೆ. ಇವೆಲ್ಲವೂ ದೃಷ ಸಾಮ್ಯಗಳೇ, ಆದರೂ ಬಾಳೆಯ ದಿಂಡಿಂದಲೂ ಬೆಕ್ಕಿನ ಮೆಯಿಂದಲೂ ವಸ್ತು ಜ್ಞಾನ ಬರುವುದಿಲ್ಲ, ಏಕೆಂದರೆ-ಆಕೃತಿನಾಮ್ಯವಿಲ್ಲ; ಆಹ್ಲಾದಕತ್ವವೂ ಇಲ್ಲ. ಚಿಗು ರಿನ ಸಾಮ್ಯವನ್ನು ಹೇಳಿದರೆ, ವಸ್ತು ಜ್ಞಾನವುಂಟಾಗುತ್ತದೆ, ಏಕೆಂದರೆ-ಮಾರ್ದವ ಮಸ್ಟಣತ್ವ ರೂಪಗುಣಗಳು ಇರುವುದೂ ಅಲ್ಲದೆ ಆಕೃತಿಸಾಮ್ಯವೂ ಉಂಟು; ಮತ್ತು ಮನಸ್ಸಿನಲ್ಲಿ ಆಹ್ಲಾದವೂ ಹುಟ್ಟುತ್ತದೆ. ಆದುದರಿಂದ ಹಸ್ತಕ್ಕೆ ಚಿಗುರಿನ ಸಾಮ್ಯವನ್ನು ಕೊಡುವುದರಲ್ಲಿ ಯಥೋಚಿತವಾದ ಸ್ವರೂಪಜ್ಞಾನವೂ ಮತ್ತು ಆಹ್ಲಾದವೂ ಉಂಟಾ ಗುವುವು, ವರ್ಣನೆಗೆ ಆಹ್ಲಾದವೇ ಮುಖ್ಯ ಪ್ರಯೋಜನವು, ಹೀಗಿರುವುದರಿಂದ ಸ್ತ್ರೀಯರ ಅವಯವಗಳನ್ನು ಇವಿವುಗಳಿಗೇನೆ ಹೋಲಿಸಿ ವರ್ಣಿಸಬೇಕೆಂಬ ಸಂಕೇ ತ ಹುಟ್ಟಿರಬಹುದು. - ಕೆಲವು ಕೆಲವು ವಸ್ತುಗಳಲ್ಲಿ ಪ್ರಮುಖವಾದ ಅಂಗಗಳನ್ನು ಹೇಳಿದರೇನೆ ಸಾಕು; ಆ ವಸ್ತುಗಳು ಬುದ್ದಿ ಗೋಚರವಾಗುವುವು, ಅವುಗಳಲ್ಲಿಯೂ ಯಾವ ಅಂಗವ ನ್ನು ಹೇಳಿದರೆ ಹೃದಯಕ್ಕೆ ಹಿತವುಂಟಾಗುತ್ತದೆಯೋ, ಆ ಅ೦ಗವನ್ನೇ ಹೇಳಬೇಕು. ಆದುದರಿಂದಲೇ ಕವಿಗಳು ಆನೆಯನ್ನು ವರ್ಣಿಸುವಾಗ ಕೋಡಿನಿಂದ ಮಾಡುವ ಅದರ ವಪ್ರಕ್ರೀಡೆಯನ್ನೂ, ಶುಂಡಾದಂಡವನ್ನೆತ್ತಿ ಮಾಡುವ ವೂತ್ಕಾರವನ್ನೂ, ಜಲಕ್ರೀಡೆಯನ್ನೂ ನಿರೂಪಿಸುವರು. ಮಯೂರಗಳನ್ನು ವರ್ಣಿಸುವಾಗ ಅದರ ನೃತ್ಯವನ್ನೂ, ಭ್ರಮರಗಳಲ್ಲಿ ಝೇಂಕಾರವನ್ನೂ, ಪರ್ವತಗಳಲ್ಲಿ ಶೃಂಗಾದಿಗಳನ್ನೂ ವರ್ಣಿಸುವರು. ಪಶ್ವತಗಳಲ್ಲಿ ಆನೆಯ ಸಾಲುಗಳನ್ನೂ ಸಿಂಹ ಶರಭಾದಿಗಳ ವ್ಯಾಪಾ ರವನ್ನೂ ವರ್ಣಿಸುವುದು ಅದರ ಗಹನತ್ವ ನಿರ್ಮಾನುಷತ್ವ ಸೂಚನಾರ್ಥವಾಗಿ, ಜಲಾ ಶ್ರಯಮಾತ್ರದಲ್ಲಿ ಹಂಸಾದಿಗಳನ್ನು , ನದಿಗಳಲ್ಲಿ ನೀಲೋತ್ಪಲಾದಿಗಳನ್ನು ವರ್ಣಿಸು ನಿ.