ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HY ಕರ್ನಾಟಕ ಗ್ರಂಥಮಾಲೆ. ಪತಿಯಂ ಪಲವು ಪರಸಿ ಮತ್ತ ಮಾವಿಪ್ರನಿಂತೆಂದಂ:- ಮುಂಚುವುದೆರೆವನನೀನಂ! ಕಿ೦ಚಾನರ್ಥ್ಯ೦ ಯದವಸರೇ ದತ್ತ ಮೆನು || ತುಂ ಚಲದವೀವುದಲ್ಲದೊ | ಡೇಂ ಚಾಗಮೆ ದಾನಿ ನೀನೆ ದಾನವಿನೋದಾ || ೩೩ || ಮೆಚ್ಚದೊಡೇನಿತರಜನಂ। ಮೆಚ್ಚದ ಪೆಗ್ ಮೆಚೊ ಸೊಬಗನೆನಿಪುದರಿಗಣಂ || ಮೆಚ್ಚೆ ಕಲಿಯೆನಿಪುದೆರೆವಂ || ದಾನಿಯೆನಿಪುದೀವರದೇವಾ 11 ೩೪ || ಎ೦ದಾಪಾರ್ವ೦ ಪೋದಂ1 ( ಕವಿಕುಂಜರಲೀಲಾವತಿ, ಆ ೬ ) ಈ ವರ್ಣನೆಯಲ್ಲಿ ಸ್ವಭಾವೋಕುಸಮೋ೩ ಕ್ಷಾಗಳು ಉತ್ತೇಜಕವಾ ಗುವಂತೆ ಹೇಗೆ ಸೇರಿಸಲ್ಪಟ್ಟಿರುವುದು ನೋಡಿದಿರಾ ! ಇದನ್ನು ಓದುವಾಗ ಇದು ವರ್ಣನೆಯೆಂಬ ಭಾವ ಹುಟ್ಟುವುದಿಲ್ಲ. ನಾವೇ ಆ ರಾಜನ ಜತೆಯಲ್ಲಿ ಇದ್ದು ಕೊಂಡು, ಅವನಂತೆ ಬಿಸಲಲ್ಲಿ ಬಳಲಿ, ದಾಹಪೀಡಿತರಾಗಿ ನೀರನ್ನು ಅರಿಸಿಕೊಂಡು ಹೋಗುತ್ತ, ಅವನು ಅನುಭವಿಸಿದ ಅನುಭವಗಳನ್ನು ಅನುಭವಿಸಿ, ಅವನು ನೋಡಿದ ನೋಟಗಳನ್ನು ನೋಡಿಯೂ, ಆ ಸಾರ್ವನೊಡನೆ ರಾಜನನ್ನು ಹೊಗಳು ತಲೂ ಇದ್ದು ( ಪಾರ್ವ೦ ಪೋದಂ?” ಎಂಬ ಕೊನೆಯ ವಾಕ್ಯವನ್ನು ಓದಿದೊಡನೆ ಯೇ, “ ಆಹಾ ! ಇದು ವರ್ಣನೆಯು, ಕವಿಯು ನಮ್ಮನ್ನು ಮರಳು ಮಾಡಿ ಬಿಟ್ಟನು. ಅವನು ಎಷ್ಟು ಸಮರ್ಥನೋ ! ೨” ಎಂಬ ಭಾವವು ನಿಸ್ಸಂದೇಹವಾಗಿ ಹುಟ್ಟುವುದು, ಇದರಿಂದ ಈ ವರ್ಣನೆಯಲ್ಲಿ ಕವಿಯ ಆಶಯವು ಸಿದ್ದಿಸಿತೆಂದು ಹೇಳಬೇಕಾಗಿಲ್ಲ. ಕಾವ್ಯಕ್ಕೆ ಮುಖ್ಯವಾಗಿ ಎರಡು ಪ್ರಯೋಜನಗಳುಂಟು. ವಿಷಯವನ್ನು ಸ್ಪಷ್ಟ ವಾಗಿ ತಿಳಿಸುವುದೊಂದು ಪ್ರಯೋಜನ ; ಆಹ್ಲಾದವನ್ನುಂಟುಮಾಡುವುದು ಮ ತ್ತೊಂದು, ಇದನ್ನು ಎಲ್ಲರೂ ಒಪ್ಪಿಕೊಂಡಿರುವರು. ಪ್ರಾಯಶಃ ಈ ವಿಷಯ ದಲ್ಲಿ ಭಿನ್ನಾಭಿಪ್ರಾಯವಿಲ್ಲ. ಕವಿಸಂಕೇತವನ್ನು ಅಂಗೀಕರಿಸದಿದ್ದರೆ ಈ ಎರಡು ಟ --೩೪, ಎರೆವಂ ... ಯಾಚಕನು.