ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸಮಯಂ, S$ - - - - - - - - - - - - - - - -+ www~ ಹುಟ್ಟುತ್ತದೆ ಎಂಬುದು ನಿಜ, ಅದರ ಉತ್ಪತ್ತಿಗೆ ಇತರಕಾರಣಗಳೂ ಇರುವುವು, ರಸ ವೆಂಬ ವೃಕ್ಷಕ್ಕೆ ಬೀಜಸ್ಥಾನವಾಗಿರುವುವು ಕೆಲವು, ಗೊಬ್ಬರ ನೀರು ಬಿಸಿಲುಗಳಂತಿರು ವುವು ಕೆಲವು, ವೃಕ್ಷವಾಯಿತೆಂದು ತೋರಿಸುವುವು ಕೆಲವು. ಇವುಗಳನ್ನು ವಿಭಾವ, ಅನುಭಾವ, ಸಾತ್ವಿಕಭಾವ, ಸಂಚಾರೀಭಾವಗಳೆಂದು ಕರೆವರು. ಈ ಕಾರಣಗಳಿ ದ್ದರೂ ಫಲವು ಮಾತ್ರ ಸರ್ವತ್ರ ನಿಯತವಾಗಿರುವಂತೆ ಕಾಣಬರುವುದಿಲ್ಲ. ಫಲವಾದ ಕಡೆಯಲ್ಲಿಯ ತಾರತಮ್ಯಗಳು ಕಂಡುಬರುವುವು. ಹೀಗಿರಲು ರಸವಿಷಯದಲ್ಲಿ ಕ್ಲಿಪ್ರವಾದ ಕಾರ್ ಕಾರಣಭಾವವನ್ನು ನಿರೂಪಿಸಲಾಗುವುದಿಲ್ಲವೆಂದು ತೋರುತ್ತದೆ. ಆದರೂ ಕವಿಗಳು ರಸವಿಷಯದಲ್ಲಿ ಕಾರ್ ಕಾರಣಭಾವಗಳು ನಿಯತವಾಗಿರುವಂತ ಯೇ ಸಂಕೇತಮಾಡಿಕೊಂಡು ನಿರೂಪಣಮಾಡುತ್ತಿರುವರು. ಉದಾಹರಣೆಗಾಗಿ, ಶೃಂಗಾರರಸಕ್ಕೆ ಉದ್ದೀಪಕ ವಿಭಾವಗಳಾದ ಗಿರಿ, ವನ, ಚಂದ್ರೋದಯ, ಚೂತ ಪಲ್ಲವ, ಕೋಕಿಲಾಲಾಪ, ಮೊದಲಾದುವು ಕೆಲವರ ಹೃದಯದಲ್ಲಿ ಶೃಂಗಾರರಸ ವನ್ನು ಹುಟ್ಟಿಸುತ್ತದೆ ; ಕೆಲವರಲ್ಲಿ ಹುಟ್ಟಿಸುವುದಿಲ್ಲ ; ಕೆಲವರಲ್ಲಿ ಹೆಚ್ಚಾಗಿಯೂ, ಕೆಲವರಲ್ಲಿ ಅತ್ಯಂತ ಸೂಕ್ಷವಾಗಿಯ ಹುಟ್ಟಿಸುತ್ತದೆ. ಹೀಗೆ ಕಾರ್ಯದಲ್ಲಿ ತಾರ ತಮ್ಯ ಸದ್ಧಾನಕ್ಕೆ ಸ್ತ್ರೀಪುರುಷರ ಅವಸ್ಥಾ ಭೇದವೇ ಕಾರಣವೆಂದು ಕೆಲವರು ನಿರೂಪಿಸುವರು. ಅದನ್ನು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಏಕೆಂದರೆ-ಕವಿ ಗಳ ವರ್ಣನೆಯನ್ನು ನೋಡಿದರೆ ಅದು ಆಗ ತಿಳಿದುಬರುವುದು, ನಾಯಕವಿರಹದಿಂ ದಾದ ನಾಯಿಕೆಯ ಅವಸ್ಥೆಯನ್ನು ಜಗನ್ನಾಥವಿಜಯದಲ್ಲಿ ಸೋಂಕಿದ ಗಾಳಿ ದಳ್ಳುರಿವೊಲಾದುದು, ಪೊಕ್ಕ ಸರೋವರಾಂಬು ಕಾ | ಬ್ರಿಂ ಕುದಿದು, ನಂದನವನಂ ಕರಿಕೇಳುದು ನೋಡೆ ಸುಯ್ದ ಸು | ಮೈಂಕೆಯಿದೆಯೆ ಚಂದ್ರಿಕೆ ಬಿಸಿಲೆಣೆಯಾಯ್ತು, ನಿಚಾಂಗತಾಪದಿಂ | ಸಂಕರುಹಾಕ್ಷಿ ಕಾಮಶಿಖಿ ಸೆಣ್ಣರಿಃಖ೦ ತಳೆದಂತೆ ತೋರಿದಳ | ಎಂದೂ ಅರ್ಧನೇಮಿಪುರಾಣದಲ್ಲಿ « ತರುಣಿಯ ಮೆಯ್ಯ ಬೆಂಕೆಯೊಳೆ ಬಿದ್ದ ಮೃತಾಂಶುಮರೀಚಿ ಸುಟ್ಟ ಕ। ಓರದವೊಲಾಗಿ ಸುಟ್ಟ ಪುದಿದಲ್ಲದೊಡೆಲ್ಲಿಯದಲ್ಲಿ ತಾಪಮೋ | ಸರಿಸದೆ ಪುಷ್ಪಬಾಣಮಿಸೆ ನಾಂಟಿ ಮುರುಂಟಿದ ಪೂವೆ ಪುಳ್ಳಿಯಾ | ಗಿರೆ ಮನಮೆಯ್ದೆ ಬೆಂದಪುದಿದ್ದಲ್ಲದೊಡೆಲ್ಲಿಯದಂಗಜಾನಳಂ ॥ ಎಂದೂ, ಟ-ಪರಿದು = ಹೆಂಗಸಿನ ನೇಪ,