ಪುಟ:ಕಾದಂಬರಿ ಸಂಗ್ರಹ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

wwwmmmmmnnnnnnnnnnnn ಕಾದಂಬರೀ ಸಂಗ್ರಹ mmmmmmm ಹಾಗೆಯೇ ನೋಡುವಾಗ ಆ ದಿವಸವೇ ಬರೆಯಲ್ಪಟ್ಟಿದ್ದ ಮತ್ತೊಂದು ಪತ್ರವು ಸಿಕ್ಕಿತು ಅದರಲ್ಲಿ :

  • ನೀವು ಮಾಡಿದ ತಂತ್ರಕ್ಕೆ ಕಾಳೀಚರಣ ಮತ್ತು ತಾಂಣಿರಾಯರು, ಮೋಸ ಹೋಗಿ ದೇವೇಶನನ್ನು ಸೆರೆಯಲ್ಲಿಟ್ಟಿರುವರು. ನಿಮ್ಮ ಸಾಮರ್ಥ್ಯವು ಅಸಾಧಾರ ಣವಾದುದು, ನಿಮ್ಮ ಪ್ರಭಾವದಿಂದ ಈಗ ನನ್ನನ್ನು ಮಾತನಾಡಿಸುವವರೇ ಇಲ್ಲ ! ನೀವು ಹೇಳಿ ಕಳಿಸಿದಂತೆ ನಿಮಗೆ ವಾಸಕ್ಕೆ ತಕ್ಕ ಮನೆಯನ್ನು ನೋಡಿರುತ್ತೇನೆ, ಈ ದಿವಸ ರಾತ್ರೆಯೇ ಮನೆಗೆ ಬಂದು ಮನೆಯನ್ನು ಸೇರತಕ್ಕದ್ದು.

ಇತಿ, ಭುಜಂಗ' ಎಂದು ಬರೆಯಲ್ಪಟ್ಟಿತು. - ಇವುಗಳನ್ನು ನೋಡಿ, ಎಲ! ಎಲ ! ಭುಜಂಗ, ನೀನೂ, ನಿನ್ನ ಸಹಪಾಠಿ ಯೂ ಗಟ್ಟಿಗರೆಂದೂ, ನಿಮ್ಮ ಮೋಸಕ್ಕೆ ಎಲ್ಲರೂ ಸಿಕ್ಕಿಕೊಂಡು ನಿನ್ನನ್ನು ಮಾತ್ರ ನಾಡಿಸುವವರೇ ಇಲ್ಲವೆಂದೂ ತಿಳಿದುಕೊಂಡಿರುವೆಯಾ ? ಆವಾಗಲೂ ನಿನ್ನ ಮೇಲೆ ಕಣ್ಣನ್ನಿಟ್ಟುಕೊಂಡು, ಬೇಕೆಂತಲೇ ನಿನ್ನ ರೀತಿಯಲ್ಲೂಾಡಲು ಬಿಟ್ಟು ಕೊಂಡಿರುವ ಕಾಳೀಕರಣನ ಬಲೆಯಲ್ಲಿ ನೀನು ಬಿದ್ದಿರುವೆಯೋ ಅಥವಾ ಕಾಳಿಚರಣನು ಮೋಸ ಹೋಗಿರುವನೋ ? ನಿಜಸ್ಥಿತಿಯು ಅತ್ಯಲ್ಪ ಕಾಲದಲ್ಲಿಯೇ ಹೊರಬೀಳುವುದು ! ?” ಎಂದಂದುಕೊಳ್ಳುವಷ್ಟರಲ್ಲಿಯೇ ಹೊರಗಡೆಯಾರೋ ಮಾತನಾಡುತ್ತಿದ್ದಂತೆ ಬೋಧೆ ಯಾಗಲು, ಆ ವ್ಯಕ್ತಿಯು, ಅಂದರೆ, ಸ್ವಯಂ ಕಾಳೀಕರಣನೆಂದು ಹೇಳುವುದು ಪ್ರಕೃತದಲ್ಲಿ ಅತ್ಯು ಕ್ರಿಯೆ ;-ಹೊರಗಡೆಯಿಂದ ನೋಡುವವರಿಗೆ ತಾನು ಸರಿಯಾಗಿ ಕಾಣುವಂತೆ ದೀಪವನ್ನಿರಿಸಿ, ತಾನು ಮತ್ತೊಂದು ಮೂಲೆಯಲ್ಲಿ ನಿಂತುಕೊಂಡನು. ಹೊರಗಡೆಯಲ್ಲಿದ್ದವರು ಆ ದೀಪದ ಬೆಳಕನ್ನು ಕಂಡು, ' ಈ ವೇಳೆ ನಾವು ನಾಲ್ಕು ಜನರೂ ಒಟ್ಟಾಗಿ ನುಗ್ಗಿ, ಅವನನ್ನು ಹಿಡಿಯಬೇಕು. ನಮ್ಮಲ್ಲಿ ರಿವಾಲ್ವರು ಗಳಿದ್ದಿದ್ದರೆ ಅವನನ್ನು ಇಲ್ಲಿಂದಲೇ ಹೊಡೆದುಬಿಡಬಹುದಾಗಿತ್ತು. ಗ್ರಹಚಾರವಶಾತ ಅವೂಕೂಡ ಒಳಗೆ ಸಿಕ್ಕಿಹೋಗಿವೆ ! ಏನಾದರೂ ಆಗಲಿ ! ಪ್ರಾಣಭಯಕ್ಕೆ ಹಿಂಜರಿ ಯದೆ ನುಗ್ಗಿ ಯೇ ಬಿಡಬೇಕು ! ಈ ಗವಿಗೆ ಇನ್ನೊಂದು ಬಾಗಿಲಿರುವುದು ಅವನಿಗೆ ಗೊತ್ತಿಲ್ಲದಿರುವುದರಿಂದ ಎರಡು ಬಾಗಿಲುಗಳಿಂದಲೂ ಒಳಗೆ ನುಗ್ಗಿ ಅವನನ್ನು ಹಿಡಿ ಯೋಣ !' ಎಂದು ಮಾತನಾಡಿಕೊಂಡು ಹಾಗೆಯೆ ಆರ್ಕಡೆಗಳಿಂದಲೂ ಅವರು ಒಳಗೆ ನುಗ್ಗಿದರು,