ಪುಟ:ಕಾದಂಬರಿ ಸಂಗ್ರಹ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಏಲಾಸಿನಿ ಟ್ಟಿದ್ದುವು, ಭುಜಂಗನು ಮನೆಯಿಂದ ಹೊರಹೊರಟನು, ಕಡಲೆ ವೇಷಧಾರಿಯಾಗಿದ್ದ ಕಾಳಿಚರಣನು ತನ್ನ ವಾದ್ಯವನ್ನು ಧ್ವನಿಮಾಡಿ ( ಜಯ!ಜಯ!!” ಎಂದು ಹೊಗ ಳಿದನು, ಭುಜಂಗನಿಗೆ ಇಂತಹ ಜನಗಳ ಮಾತಿನಲ್ಲಿ ಹೆಚ್ಚಾಗಿ ನಂಬುಗೆಯಾಗಿದ್ದುದ ರಿಂದ, 4ವಿ! ಹಕ್ಕಿನರಸಯ್ಯ! ಈ ದಿವಸ ಹಕ್ಕಿ ಹೇಳಿದ ವಿಶೇಷ ವಾರ್ತೆಯೇನಾದರೂ ಉಂಟೋ? ?” ಎಂದು ಕೇಳಿದನು. ಕಾಳೀಚರಣ:- (ಬುಡುಬುಡುಕೆಯನ್ನು ಬಹು ರಭಸದಿಂದ ಧ್ವನಿಗೆಯು (ಸ್ವಾಮಿಗೆ ಜಯವುಂಟು! ಹೆಣ್ಣಿನದೆಶೆಯಿಂದ ಹೇರಳವಾಗಿ ಹೊನ್ನು ಕೈಸೇರುವುದು, ಹೆಣ್ಣಿನ್ನೂ ಸ್ವಾಧೀನವಾಗಲಿಲ್ಲವೆಂದು ಸಂಕೋಚ. ಭಯಕಾಲವು ಕಳೆಯಿತು! ಜಯಕಾಲವು ಸಮಿಾಪಿಸಿತು!! ” ಎಂದಂದು, ಮತ್ತೊಮ್ಮೆ ವಾದ್ಯದ ವಿಚಿತ್ರವಾದ ಧ್ವನಿಯನ್ನು ವ್ಯಕ್ತಗೊಳಿಸಿ, ( ಸ್ವಾಮಿಗೆ ಜಯವಾಗುತ್ತದೆ! ನರಸನ ಮಾತು ಎಂದಿಗೂ ಸುಳ್ಳಲ್ಲ!! ಸ್ವಾಮಿ ಸುಮ್ಮನಿರಕೂಡದು. ನರಸನು ವಂಶಪಾರಂಪರೆಯಾಗಿ ಬಂದಿರುವ ಗೀರ್ವಾಣಭಾಷೆಯ ಮಹಿಮೆಯಿಂದ ಹಕ್ಕಿ ಹೇಳಿದ್ದೆಲ್ಲವನ್ನೂ ತಿಳಿದು ಕೊಂಡು ಬಂದಿರುವನು. ದಿಟವಾದರೆ ದಿಟವೆನ್ನ ಬೇಕು ! ಸವೆಯಾದರೆ ಸಟೆಯೆನ್ನ ಬೇಕು. ಸ್ವಾಮಿಯು ಒಂದು ದೊಡ್ಡ ಇನಾಮು ಕೊಡಬೇಕು. ನರಸನು ನಾಡಾಡಿಯವನಲ್ಲ ಹೇಳಿದ ಮಾತೆಂದೂ ಸುಳ್ಳಾಗುವುದಲ್ಲ. ಸ್ವಾಮಿಯ ಸಮಾಚಾರವನ್ನು ಇಂತಹ ಬಹಿರಂಗಸ್ಥಳದಲ್ಲಿ ಹೇಳತಕ್ಕದ್ದಲ್ಲ. ” ಎಂದಂದು ಮತ್ತೊರ್ಮೆ ವಾದ್ಯರವವನ್ನು ಮಾಡಿ II ಇನಾಮು ಬರಬೇಕು ಸ್ವಾಮಿಾ !” ಎಂದಂದನು. ಭುಜಂಗನಿಗೆ ಆಶೆಯು ಹೆಚ್ಚಾಯಿತು. ಬುಡುಬುಡುಕೆಯವನನ್ನು ಕೇಳಕೇಳುತ್ತ ಹೋದ ಹಾಗೆಲ್ಲ ಅವನು ತನ್ನ ವಾಗೈಖರಿಯಿಂದ ಭುಜಂಗನಿಗೆ ಮತ್ತಷ್ಟು ಆಶೆಯು ಹೆಚ್ಚಾಗುವಂತೆ ಮಾಡಿದನು, ಭುಜಂಗನು ಇವನಿಂದೆಲ್ಲಾ ಸಂಗತಿಗಳನ್ನೂ ತಿಳಿದು ಕೊಳ್ಳಬೇಕೆಂದೆಣಿಸಿ, ನರಸ ! ಇದು ನಮ್ಮ ಮನೆಯಲ್ಲ ! ನಮ್ಮ ಮನೆಗೆ ಹೋಗೋಣ ಬಾ ! ನಿನ್ನ ಹಕ್ಕಿಯು ಹೇಳಿದುದನ್ನೆಲ್ಲ ಹೇಳುವಿಯಂತೆ !! ” ಎಂದಂದನು. ನರಸನು ಪುನಃ ಬುಡುಬುಡುಕೆಯನ್ನು ಚೆನ್ನಾಗಿ ಬಾರಿಸಿ, - ಪರಾಕು ಸ್ವಾಮಿಾ ! ಜಯವಾಗಲಿ ಸ್ವಾಮಿ !! ಬುದ್ದಿಯವರಿಗೆ ಈ ಮನೆಯಲ್ಲಿ ಸರ್ವಸ್ವತಂತ್ರವುಂಟು. ದೇವರ ಜೀವವಾದ ಅಮ್ಮನವರು ಇಲ್ಲೇ ಉಂಟು !! ಈ ಹೊತ್ತು ದೇವರು ಕೃಪೆಮಾಡಿಯಾನು !!! ಲಕ್ಷ್ಮಿ ಕಟಾಕ್ಷ ಒದಗೀತು ! ಬುದ್ದಿಯವರಿಗೆ ಸಂತೋಷವಾದೀತು !! ನರಸನ ಮಾತು ಸುಳ್ಳಲ್ಲ ! ” ಎಂದು ಹೇಳಲು, ಭುಜಂಗನಿಗೆ ಆಶೆಯು ಮಿತಿಮೀರಿತು.