ಪುಟ:ಕಾದಂಬರಿ ಸಂಗ್ರಹ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚದಶಗುಚ್ಛ. ಕಾಳಿಚರಣನು ಬುಡುಬುಡುಕಿಯವನ ವೇಷದಿಂದ ತಾನು ಸಾಧಿಸಬೇಕೆಂದಿದ್ದ ಉದ್ಯಮವನ್ನು ಚೆನ್ನಾಗಿ ಸಾಧಿಸಿದನು. ಭುಜಂಗನು ಸಂಪೂರ್ಣವಾಗಿ ಕಾಳಿಚರಣನ ಬಲೆಯಲ್ಲಿ ಬಿದ್ದನು. ಅಷ್ಟೇ ಏಕೆ ? ಅವನು ಈ ಬುಡುಬುಡುಕಿಯವನ ಮಾತಿನಂತೆ ನಡೆಯಲು ಈಷದಪಿ ಹಿಂಜರಿಯುತ್ತಿರಲಿಲ್ಲ, ಇವನು ವಿಷಪ್ರಾಣವನ್ನು ಮಾಡೆಂದು ಹೇಳಿದ್ದರೆ ಅದನ್ನು ಕೂಡ ಮಾಡಲು ಸಿದ್ಧನಾಗಿದ್ದನು, ಈ ಸಂದರ್ಭವನ್ನರಿತು, ಕಾಳೀಚರಣನು ತನ್ನ ವಾಕ್ಚಾತುರ್ಯದಿಂದ ಅವನನ್ನು ಕೇವಲ ಮುಗ್ಧನಾಗುವಂತೆ ಮಾಡಿದನಲ್ಲದೆ ಅವನ ಪರಮಗುರುವಾದ ಪುರಂದರನು ಕೇಳೂ, ನಟನೆಯ ಮನುಷ್ಯ ನೆಂದೂ, ಅವನು ಕೇವಲ ತನ್ನ ಸ್ವಾರ್ಥಕ್ಕಾಗಿ ಆ ರೀತಿ ನಂಬಿಕೆಯನ್ನು ಹುಟ್ಟಿಸಿ, ಕಾರ್ಯವು ಕೈಗೂಡಿದ ಮೇಲೆ ಎಲ್ಲರಿಗೂ ಮೋಸಮಾಡುವನೆಂದೂ, ಏನಾದರೂ ಮಾಡಿ ಅವನಧಿಗದಿಂದ ಆ ದಿವಸವೇ ಹುಡುಗಿಯರನ್ನು ಹೊರತರಬೇತೆ :ದ, ಹೇಳಿ ದನು. ಅವನ ಮಾತಿನಲ್ಲಿ ಭುಜಂಗನಿಗೆ ನಂಬುಗೆಯು ಉಂಟಾಗಿದ್ದುದರಿಂದ ಅವನು ಹೇಳಿದುದು ನಿಜವೆಂದು ನಂಬಿ ಆ ಮನೆ ಬಂದ ಹೆಂಗಸರನ್ನು ಹೇಗೆ ಬೆರೊಂದು ಮನೆಗೆ ಕರೆದುಕೊಂಡು ಹೋಗಬೇಕೆಂದು ಆಲೋಚಿಸಲಾರಂಭಿಸಿದನು, ಕಾಳಿಚರ ಣನು ಆ ದಿನ ಸಾಯಂಕಾಲ ತಾನು ಬಂದು ಕೈಯಲ್ಲಾದ ಸಹಾಯವನ್ನು ಮಾಡು ವುದಾಗಿ ಹೇಳಿ ಭುಜಂಗನ ಅಪ್ಪಣೆಯನ್ನು ಪಡೆದು ಅಲ್ಲಿಂದ ಹೊರಟುಹೋದನು. ಭುಜಂಗನು-ಕಾಳೀಕರಣನ ಹೇಳಿಕೆಗೆ ಮರುಳಾಗಿದ್ದವನು;-ನರಸನು ಆಡಿದ ಮಾತಿ ನಪ್ರಕಾರ ತನ್ನ ಸಹಾಯಕ್ಕಾಗಿ ಸಾಯಂಕಾಲ ಬರಬಹುದೆಂದೂ, ಆ ದಿವಸ ಪುರಂದರ ನನ್ನೂ ಹುಡುಗಿಯರನ್ನೂ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದೂ ನಿಶ್ಚಯಿಸಿ ಕೊಂಡನು, ಹಾಗೆಯೆ, ಆ ಮನೆಯಲ್ಲಿ ಪುರಂದರನನ್ನು ಬೆನ್ನು ಬಿಡದಂತೆ ಕಾಯ್ದನು ಅಷ್ಟರಲ್ಲಿ ಕಾಳೀಕರಣನು ಆ ಮನೆಯ ಯಜಮಾನನನ್ನು ಪತ್ತೆಮಾಡಿಸಿ ಕರೆಯಿಸಿ ಕೊಂಡು ಅವನಿಂದಾಗಬೇಕಾದ ಕೆಲಸಗಳೆಲ್ಲವನ್ನೂ ತಿಳಿಯಿಸಿ, ಅವನೊಂದಿಗೆ ಒಬ್ಬ ಮನುಷ್ಯನನ್ನು ಕಳುಹಿಸಿಕೊಟ್ಟನು. ಅವರಿಬ್ಬರೂ ಪುರಂದರಾದಿಗಳಿದ್ದ ಮನೆಗೆ ಹೋದರು. ಮನೆಯಲ್ಲಿದ್ದ ಪುರಂದರ ಮತ್ತು ಭುಜಂಗ, ಇವರಿರ್ವರೂ ಅವರನ್ನು ಉಚಿತ ವಾಗಿ ಸತ್ಕರಿಸಿ ಬಂದ ಕಾರ್ಯವೇನು ? ” ಎಂದು ಕೇಳಿದರು. ಮನೆಯ ಯಜಮಾ ನನು ( ಸ್ವಾಮಿ ! ಈ ಮನೆಯ ಅಂತರ್ಗೃಹದಲ್ಲಿ ನಮಗೆ ಸ್ವಲ್ಪ ಕೆಲಸವಿದೆ ಒಂದು ಕಾಲುಗಂಟೇಮಟ್ಟಿಗೆ ನಮ್ಮನ್ನಲ್ಲಿ ಬಿಡಬೇಕು ! ” ಎಂದಲದನು,