ಪುಟ:ಕಾದಂಬರಿ ಸಂಗ್ರಹ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಫಿಲಾಸಿನಿ ruvvvvvvvvvvvvvvvvvvvvvvvvAAAAAAAAAAAAAAAAAAM ಭುಜಂಗ - ಸ್ವಾಮಿ ! ಮಾಘಮಾಡಬೇಕು ! ಅಲ್ಲಿ ನಾವು ಬಹಳ ಸಾಮಾ ನುಗಳನ್ನು ತುಂಬಿರುವೆವು. ನಮಗೆ ಒಂದು ದಿನ ಪುರುಸತ್ತು ಕೊಟ್ಟರೆ ಬಿಡುವು ಮಾಡಿಸಿ ಕೊಡುತ್ತೇನಲ್ಲದೆ ಈಗ ಖಂಡಿತವಾಗಿಯೂ ಆಗುವುದಿಲ್ಲ!” ಯಜಮಾನ- ಸ್ವಾಮೀ ದಯವಿಟ್ಟು ಹಾಗೆ ಮಾಡಬೇಡಿ. ದಯವಿಟ್ಟು ಈಗಲೇ ಅಪ್ಪಣೆಕೊಡಬೇಕು. ಬೇಕಾದರೆ ತಾವೂ ನಮ್ಮ ಜತೆಯಲ್ಲೇ ಇರಿ, ನಿಮ್ಮ ಸಾಮಾನೊಂದನ್ನೂ ಮುಟ್ಟುವುದಿಲ್ಲ! ಬಹು ಅಗತ್ಯವಾಗಿದೆ. ಸ್ವಾಮಿ! ಅದರಲ್ಲಿ ಮುಚ್ಚು ಮರೆಯೇನು ಸ್ವಾಮಿ! ನಿಜವಾದ ಸಂಗತಿಯನ್ನು ಹೇಳಿಬಿಡುತ್ತೇನೆ ಕೇಳಿ ಇವರಿದ್ದಾರಲ್ಲಾ,” ಎಂದಂದು ತನ್ನ ಜತೆಯಲ್ಲಿದ್ದವನನ್ನು ತೋರಿಸಿ, “ ಇವರ ತಂದೆಯವರು ರ್ಪಷ್ರ ಕಲೆಕ್ಟರು, ಈಗ ಎರಡು ವರ್ಷಗಳ ಹಿಂದೆ ಈ ಮನೆಯ ಲ್ಲವರಿದ್ದರು. ಆ ಕಾಲದಲ್ಲಿ ಈತನ ತಾಯಿಯು ಸ್ವಲ್ಪ ದ್ರವ್ಯವನ್ನು ಭೂಸ್ಥಾಪನೆ ಮಾಡಿದರು, ಎಲ್ಲಿ ? ಆ ಅಂತರ್ಗೃಹದಲ್ಲೊಂದು ಕಡೆ ! ಈಗ, ಈತನ ಮೇಲೆ ಐದು ಸಾವಿರ ರೂಪಾಯಿಗೆ ಒಂದು ದಾವಾ ಡಿಕ್ಕಿಯಾಗಿರುತ್ತೆ. ಈ ದಿವಸ ಕೋರ್ಟಿನ ಕಾಲಕ್ಕೆ ಸರಿಯಾಗಿ ಡಿಕ್ಕಿ ಮೊಬಲಗನ್ನು ಹಾಜರ್‌ ಮಾಡಬೇಕು.” ಪುರಂದರ-II ಸ್ವಾಮಿ, ಇದಕ್ಕಾಗಿ ಇಷ್ಟು ವ್ಯಥೆಯೇಕೆ ? ಆ ರೂಪಾಯಿ ಗಳನ್ನು ನಾನು ಕೊಟ್ಟಿರುತ್ತೇನೆ. ಅನಂತರ ನೀವು ನಿಮ್ಮ ಭೂಗತ ದ್ರವ್ಯವನ್ನು ತೆಗೆದುಕೊಡಬಹುದು.” ಮನೆಯ ಯಜಮಾನನು ಅದಕ್ಕೆ ಪ್ರತ್ಯುತ್ತರವನ್ನು ಹೇಳಲು ಏನೂ ತೋರದೆ ಜತೆಯಲ್ಲಿದ್ದವನ ಮುಖವನ್ನು ನೋಡಿದನು. ಅವನು ಈತನ ಅಭಿಪ್ರಾಯವನ್ನರಿತು << ಅದೆಲ್ಲಿಯ ಮಾತು ಸ್ವಾಮಿ ! ಎಷ್ಟಿರುವುದೋ ಏನೋ ! ನಮ್ಮ ದುಡ್ಡನ್ನು ನಾವು ಉಪಯೋಗಿಸೋಣ !?” ಎಂದಂದನು. ಪುರಂದರನಿಗೆ ಸ್ವಲ್ಪ ಕೋಪವುಂಟಾಯಿತು. • ನೀವು ನಮಗೆ ತೊಂದರೆ ಕೊಡುವುದಕ್ಕಾಗಿ ಬಂದಿರುವಂತೆ ತೋರುತ್ತದೆ. ನೀವು ಏನು ಬೇಕಾದರೂ ಮಾಡಿ ಕೊಳ್ಳಿ, ನಾನು ಖಂಡಿತವಾಗಿಯೂ ಒಳಗೆ ಬಿಡುವುದಿಲ್ಲ!” ಎಂದು ಸ್ವಲ್ಪ ಆಕ್ರೋಶ ದಿಂದ ಹೇಳಿದನು, ಮನೆಯ ಯಜಮಾನನು, “ ನಾವು ನಿಜಸ್ಥಿತಿಯನ್ನು ಹೇಳಿರುವುದರಿಂದ ನಿಮ್ಮ ನಂಬಿಕೆ ನಮಗೇನು ? ಖಂಡಿತವಾಗಿಯೂ ಈ ಹೊತ್ತು ತೆಗೆದುಕೊಂಡೇ ಹೋಗಬೇಕು. ನಮ್ಮ ದ್ರವ್ಯವನ್ನು ಈಗಲೇ ತೆಗೆದುಕೊಂಡು ಹೋಗಬೇಕು, ಅವಕಾಶ 11