ಪುಟ:ಕಾದಂಬರಿ ಸಂಗ್ರಹ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಡಕಗುಚ್ಛ. ಪಾಠಕಮಹಾಶರಿಗೆ ಭುಜಂಗನ ವಿಚಿತ್ರವಾದ ಕುಟೀರವನ್ನು ಒಮ್ಮೆ ತೋರಿಸಿ ಬಿಟ್ಟಿರುತ್ತೇವೆ. ಇಂದು, ಭುಜಂಗನು ತನ್ನಾ ಕುಟೀರದ ಒಂದು ಮೂಲೆಯಲ್ಲಿ ಕುಳಿ ತುಕೊಂಡು ಚಿಂತಾಕ್ರಾಂತನಾಗಿರುವನು. ವಿಷಯವೇನಿರಬಹುದು? ಕಾಳೀಚರಣನು ಬುಡುಬುಡುಕಿಯವನಂತೆ ವೇಷವನ್ನು ಧರಿಸಿ, ಭುಜಂಗನ ಅತ್ಯದ್ಭುತ ಭವಿಷ್ಯತ್ತನ್ನು ಅರ್ಥಾಂತರವಾಗಿ ಬೋಧಿಸಿದ್ದನಾದುದರಿಂದ ಅವನು ಅದನ್ನು ಕುರಿತೇ ಆಲೋಚಿಸುತ್ತಿ ರಬಹುದು ! ನರಸನು ಹೇಳಿದ ಒಂದೊಂದು ಶಬ್ದವೂ ಜ್ಞಾಪಕಕ್ಕೆ ಬರುತ್ತಿದ್ದಿತು. ಆ ದಿವಸ ನಡದ ಆ ವಿಚಿತ್ರ ವ್ಯಾಪಾರವು ಅವನನ್ನು ಅಸ್ಪಷ್ಟವಾದ ಸ್ಥಿತಿಗೆ ಗುರಿಮಾಡಿ ದ್ದಿತು. ಒಮ್ಮೊಮ್ಮೆ “ ನರಸನ ಮಾತಿನ ಮಹಿಮೆಯು ಅತ್ಯದ್ಭುತವಾಗಿರುವಂತಿದೆ ! ಅಂತು, ಆ ದಿವಸ ಕಾಳೀಚರಣ, ಪುರಂದರ, ಇವರಿಬ್ಬರಲ್ಲಿ ಯಾರಾದರೊಬ್ಬರು ಸತ್ತರೆ ನನ್ನ ಸುಕೃತಕ್ಕೆ ಎಣೆಯುಂಟೆ ? ಒಂದುವೇಳೆ ಪುರಂದರನೇನಾದರೂ ಸಿಕ್ಕಿ ಬಿದ್ದರೇ ! ಛೇ !! ಅದೆಲ್ಲಿಯ ಮಾತು : ಅವನೇನು ಸಾಮಾನ್ಯನೆ ? ಇಂತಹ ಮನೆ ಯಲ್ಲಿ ಕೈಗೆ ಸಿಕ್ಕಿದವನು ಎಷ್ಟು ಸಾಹಸ ಮಾಡಿ ತಪ್ಪಿಸಿಕೊಂಡಿರುತ್ತಾನೆ! ಹೇಗೆ ಪರಾರಿ !! ಇಂತಹವನು ಕಾಡಿನಲ್ಲಿ ಬಿದ್ದ ಮೇಲೆ ಕಾಳೀಚರಣನ ಕೈಗೆ ಸಿಕ್ಕುವುದುಂಟೆ ? ಇಲ್ಲ !! ಕೇವಲ ಅಸಂಬದ್ಧ ಪ್ರಲಾಪ !!! ನರಸನು ಹೇಳಿದಂತೆ ಏನೊ, ಎಲ್ಲವೂ ನಡೆ ಯುವ ಹಾಗೇ ಕಾಣುತ್ತದೆ ! ಆದ್ದರಿಂದ ಅವನ ಮಾತಿನಂತೆ ಈ ದಿವಸ ಕಾಳೀಚರ ಣನು ಪುರಂದರನಿಂದ ಸತ್ತರೂ ಸಾಯಬಹುದು. ಆದುದರಿಂದ ಆ ವಿಜಯಿನಿ ವಿಲಾಸಿನಿ ಯರನ್ನು ಅಲ್ಲಿಂದ ಹೊರತೆಗೆದು, ನನ್ನ ಧೀನದಲ್ಲಿಟ್ಟುಕೊಂಡು, ಏನಾದರೂ ಸಾಹಸ ಮಾಡಿ, ಇಬ್ಬರೂ ನನ್ನ ವಶರಾಗುವಂತೆ ಮಾಡಿಕೊಂಡೆನೆಂದರೇ, ಅಗಣಿತದ್ರವ್ಯವೆ ಲ್ಲವೂ ನನ್ನ ಧೀನವಾಗುವುದು” ಎಂದು ಮೊದಲಾಗಿ ಆಲೋಚಿಸುತ್ತಿದ್ದನು, ನರಸನು ಬರುವ ಸಮಯವಾಯಿತು !” ಎಂದಂದುಕೊಳ್ಳುತ್ತಿದ್ದನು. ಕಾಳೀಚರಣನು ಬೇರೇ ವೇಷವನ್ನು ಧರಿಸಿ, ಭುಜಂಗನ ಮನೆಗೆ ಬಂದನು. ಭುಜಂಗನು ನರಸನ ಧ್ಯಾನದಲ್ಲಿಯೇ ಇದ್ದನಾದುದರಿಂದ, “ ನರಸಯ್ಯಾ ! ನೀನೋ ??? ಎಂದಂದನು. ಕಾಳೀಚರಣನು, 14 ಸ್ವಾಮಿಗೆ ಜಯಕಾಲ ! ಬೇಗ ಹೊರಡಬೇಕು !!” ಎಂದು ಹೇಳಲು, ಭುಜಂಗನು, ನರಸಯ್ಯಾ ! ಆ ಮನೆಯ ಸುತ್ತಲೂ, ಪೊಲೀಸಿನ ವರು ಕಾವಲಿರುತ್ತಾರಲ್ಲ! ಆ ಮನೆಯೊಳಕ್ಕೆ ನಾವು ಹೋಗುವುದೆಂತು ? ಆ ಹುಡುಗಿ