ಪುಟ:ಕಾದಂಬರಿ ಸಂಗ್ರಹ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಾಸಿನ hhh }} ಯರನ್ನು ನಾವು ಕರೆತರುವುದೆಂತು ? ಏನೋ ನಿನ್ನ ಮಾತಿನಲ್ಲಿ ನನಗೆ ಬಹಳ ಭಯ ವುಂಟಾಗಿದೆಯಪ್ಪ !” ಎಂದಂದು, ನರಸನು-(ಅರಳಿದ ಕಣ್ಣುಗಳುಳ್ಳವನಾಗಿ) ಏನು ಸ್ವಾಮೀ ! ನಾನೇನು ನಾಡಾಡಿಯೊ ? ಹಕ್ಕಿ ಮಾತನ್ನು ಪಾದದಲ್ಲಿ ಅರಿಕೆ ಮಾಡಿರುತ್ತೇನೆ ಸ್ವಾಮೀ ! ಅದು ಸುಳ್ಳೆಂದರೆ ಪರಪಂಚವೇ ಸುಳ್ಳು ಸ್ವಾಮೀ !! ಅದೇಕೆ ಸ್ವಾಮೀ, ನನ್ನ ಸಾಹಸ ಈಗ ತೋರಿಸುತ್ತೇನೆ ಬನ್ನಿ, ಪೊಲೀಸಿನವರಲ್ಲದಿದ್ದರೆ ದೇವತೆಗಳಿರಲಿ, ಏನು ಸ್ವಾಮೀ! ನನ್ನ ಮಾತು ಸುಳೊ ಈಗ ನಿಮ್ಮ ಪರಮ ಸತುವೊಬ್ಬನು ನಿಮಗೆಲ್ಲಾ ದಣಿಯಾಗಿ ದ್ದವನೊಬ್ಬನನ್ನು ಬೆನ್ನಾಡಿಕೊಂಡು ಹೋಗಿಲ್ಲವೋ ? ಈಗ ನೋಡಿ, ಅವರು ಒಬ್ಬರಿ ಗೊಬ್ಬರೂ ಹೊಡೆದಾಡಿ ಇಬ್ಬರೂ ಸತ್ತಿರುತ್ತಾರೆ ! ಬೆಳಕು ಹರಿಯುವುದರಲ್ಲಿ ನೋಡಿ ಸ್ವಾಮಿ ! ನನ್ನ ಮಾತು ಸುಳ್ಳೋ ನಿಜವೋ ಗೊತ್ತಾಗುತ್ತದೆ. ಬುದ್ದಿಯವರು ಮಾತು ಕೊಟ್ಟ ಸರ್ಕಾರ ಬಂದೆ ! ಈಗೇನು ಹೋಗಲೋ ಬುದ್ದಿ ??? ಭುಜಂಗ-11 ನರಸಯ್ಯಾ, ಬೇಡ | ಹಾಗಲ್ಲ !! ಈವಾಗ ಅವರನ್ನು ಕರೆದು ಕೊಂಡು ಬರುವದಕ್ಕಾಗುತ್ತದೆಯೊ ?” ನರಸtc ಅದರ ಯೋಚನೆ ನಿಮಗ್ಯಾಕೆ ಸ್ವಾಮೀ ! ನನ್ನ ಜತೆಯಲ್ಲಿ ಬನ್ನಿ! ನನ್ನ ವಿದ್ಯ ತೋರಿಸುತ್ತೇನೆ !! ” ಎಂದು ಹೇಳಲು, ಭುಜಂಗನು ಹೊರಟನು. ಕಾಳೀಕರಣನು ಭುಜಂಗನನ್ನು ಸಮೀಪದಲ್ಲಿದ್ದ ಒಂದು ಬನ್ನಿಮರದ ಹತ್ತಿ ರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆ ಮರವನ್ನು ಪೂಜಿಸಿ, ಏನೋ ಮಹಾ ಮಂತ್ರ ವನ್ನು ಉದ್ಯೋಷಿಸುವಂತೆ ನಟಿಸಿ, ಭುಜಂಗನ ಹಣೆಗೆ ಸ್ವಲ್ಪ ಕುಂಕುಮವನ್ನಿಟ್ಟು ತಾನೂ ಸ್ವಲ್ಪ ಇಟ್ಟು ಕೊಂಡು, ಅವನ ಕೈಯ್ಯಲ್ಲೊಂದು ಪಿಸ್ತೂಲನ್ನು ಕೊಟ್ಟು, • ಸ್ವಾಮಿ ! ದಯಮಾಡಬೇಕು ! ಬುದ್ದಿಯವರನ್ನು ಈಗ ಯಾರಾದರೂ ಕಂಡು ಮಾತನಾಡಿಸಿದ್ದೇ ಆದರೆ ಈ ಪಿಸ್ತೂಲಿನಿಂದ ನರಸನನ್ನು ಸುಟ್ಟು ಬಿಡಿ. ನರಸನ ಯೋಗ್ಯತೆಯು ಇದರಲ್ಲಿದೆ ಗೊತ್ತಾಗುತ್ತದೆ. ಎಂದು ಹೇಳಲು ಇವನ ಮಾತಿನಲ್ಲಿ ಬಹಳ ನಂಬುಗೆಯನ್ನಿಟ್ಟಿದ್ದ ಭುಜಂಗನು ಅವನು ಹೇಳಿದುದನ್ನು ಕೇಳಿ, ಆ ಕುಂಕುಮ ದಲ್ಲೇನೊ ಗುಣಾತಿಶಯವಿರಬಹುದೆಂದಂದುಕೊಂಡು ಅವನ ಜತೆಯಲ್ಲಿ ಮುಂದು ವರಿದನು. ಇರ್ವರೂ ವಿಜಯಿನಿ ವಿಲಾಸಿನಿಯರಿಗೆ ಗೋಪ್ಯಾಶ್ರಯವನ್ನಿತ್ತಿದ್ದ, ಆ ಮನೆಯ ಸಮೀಪಕ್ಕೆ ಹೋದರು. ಮೊದಲೇ ಕಾಳೀಕರಣನೀದ ಎಚ್ಚರಗೊಳಿಸಲ್ಪಟ್ಟಿದ್ದ ಪೊಲೀ