ಪುಟ:ಕಾದಂಬರಿ ಸಂಗ್ರಹ.djvu/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಾಸಿನಿ ಬಹುದಲ್ಲವೆ? ಎಂದು ಕೇಳಲು ವಿಜಯಿನಿಯು ಮುಖವನ್ನೆತ್ತಿ ನೋಡಿದಳು, ಭೀತಿಯೂ, ನಾಚುಗೆಯ, ವಿಜಯಿನಿಯನ್ನಾ ಕ್ರಮಿಸಿದುವು. ( ಮಹನೀಯರೆ ! ಸರ್ವಾಪರಾಧ !! ಕ್ಷಮಿಸಬೇಕು!” ಎಂದು ಹೇಳುತ್ತ ಲಜ್ಜೆಯಿಂದ ಅಧೋಮುಖಿ ಯಾಗಿ ನಿಂತುಕೊಂಡಳು. ಸಪದಕಗುಚ. ಪಾಠಕಮಹಾಶಯರಿಗೆ ಮು:ದೇನು ನಡೆಯಿತೋ ಎಂದು ತಿಳಿವ ಕುತೂಹಲ ವಿರಬಹುದು. ಅಂತಹ ಸಂಭವವೇನೂ ಇರಲಿಲ್ಲ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಯಿತು. ಅವರ ಪ್ರಮುಖನು ಮಾತ್ರ ಸಿಗಲೇ ಇಲ್ಲ ! ಅಸಮಾನನಾದ ಕಾಳೀಕರಣನ ಸಾಹಸ ದಿಂದ ಪ್ರೇಮಚಂದ್ರ, ದೇವೇಶ, ಶಂಭುದತ್ಯಾದಿಗಳ ನಿರ್ದೋಷತೆಯು ಎಲ್ಲೆಲ್ಲಿಯ ವ್ಯಕ್ತವಾಯಿತು. ಇಳಿ ಸ್ಪೆಕ್ಟರ್ ತಾಂದೋಗಿ ರಾಯರು ಅವಕಾಶವು ಒದಗಿಬಂದಾ ಗಲೆಲ್ಲಾ, “ ಕಾಳೀಕರಣನು ಕೇವಲ ಅವತಾರಪುರುಷನೆಂದರೂ ಕೂಡ ಸಾಲವಾಗಿದೆ ! ಈತನ ಧೈರ್ಯವೇನೂ ! ಶಕ್ತಿಯನೂ ! ಸಾಹಸವೇನೂ ! ಎಲ್ಲವೂ ಅಸಾಧಾರಣ !! ಅತ್ಯದ್ಭುತ !!!?” ಎಂದಂದುಕೊಳ್ಳುತ್ತ ಅತಿಶಯವಾದ ಆಶ್ಚರ್ಯದ ಆನಂದವನ್ನನು ಭವಿಸುತ್ತಿದ್ದರು. ಕಾಳಿಚರಣನು, ತಾನೆಷ್ಟು ಸಾಹಸ ಮಾಡಿದರೂ ಕರಗತನಾಗಿದ್ದ ಆ ಕರಿಯು ತಪ್ಪಿಸಿಕೊಂಡು ಬಿಟ್ಟನು, ಪ್ರಮುಖನಾದವನನ್ನು ಹಿಡಿದು ಶಿಕ್ಷಿಸುವ ಪರ್ಯ೦ತರವೂ ತಾನು ಕೃತಕೃತ್ಯನಲ್ಲ, ಅಲ್ಲದೆ ಅವನು ಕೇವಲ ವಂಚಕಾಗ್ರೇಸರನಾದುದರಿಂದ ಅಂತ್ಯದವರೆಗೂ ಅವನ ಕೂರಕೃತ್ಯಗಳನ್ನು ಪದೇಪದೇ ಬಹಿರಂಗಪಡಿಸದೇ ಬಿಡುವವ ನಲ್ಲ. ಅವನಿಲ್ಲದಿದ್ದರೆ ಈ ಬಡಪಾಯಿಗಳು ಏನು ಮಾಡಲು ತಾನೇ ಶಕ್ತರಾಗಿದ್ದರು ! ಎಂತಾದರೂ ಅವನನ್ನು ಹಿಡಿಯಲೇಬೇಕು. ಹಾಗಲ್ಲದಿದ್ದರೆ ತನ್ನ ಶ್ರಮವೆಲ್ಲವೂ ಕೇವಲ ನಿರರ್ಥಕ ! ಎಂದಂದುಕೊಳ್ಳುತ್ತಿದ್ದನು. - ಒಂದುದಿನ ಕಾಳೇಚರಣನೂ, ತಾಂದೋಣಿರಾಯರೂ, ಮಾತನಾಡುತ್ತ ಕುಳ ತಿದ್ದರು. ಆಗ, ಟಪಾಲಾಫೀಸಿನ ಕರ್ಮಚಾರಿಯೊಬ್ಬನು ಕಾಳೀಕರಣನಿಗೆ ಒಂದು ಕಾಗದವನ್ನು ತಂದು ಕೊಟ್ಟನು. ಕಾಳೀಚರನು ಕಾಗದವನ್ನು ತೆರೆದು ಓದಿದನು. ಕಾಗದದಲ್ಲಿ :