ಪುಟ:ಕಾದಂಬರಿ ಸಂಗ್ರಹ.djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ

  • ಅಸಹಾಯ ಶೂರರ ಪದಾರವಿಂದದಲ್ಲಿ,

ಈ ನಿರ್ಭಾಗ್ಯನು ಆವುದೋ ಒಂದು ಕಾಲದಲ್ಲಿ ಸಾಹಸಿಯ ಸಹಪಾಠಿಯಾ ಗಿದನು, ಒಂದೊಂದುವೇಳೆ ಅತಿಶಯ ಚಮತ್ಕಾರದಿಂದ ಚಾತುರ್ಯಪ್ರದರ್ಶನೆಯನ್ನೂ ಮಾಡುತ್ತಿದ್ದನು. ಇದೇ ನಿರ್ಭಾಗ್ಯನು ಅದನ್ನು ಜ್ಞಾಪಕಕ್ಕೆ ತರಲು ಪ್ರಯತ್ನ ಪಡ ಬೇಕೆಂದರೂ ಸಂಕುಚಿತನಾಗುವನು, ತಮ್ಮ ಸಾಹಸವನ್ನು ನಾನು ಬಲ್ಲೆ ! ನನ್ನಾಟವು ತಮ್ಮ ಮುಂದೆ ನಡೆಯಲಾರದೆಂದು ತಿಳಿದುಕೊಂಡೂ ಇದೆ. ಆದರೇನು ? ಸಮಯ ದೊರೆತಾಗ ಸಾಹಸವನ್ನು ಪಯೋಗಿಸಬೇಕೆಂಬ ಆಶೆಯು ಆರನ್ನು ತಾನೆ ಪರಿಪೀಡಿಸ ವಿರುವುದು ? ಕೇವಲ ದುರ್ದೈವದ ಕರ್ಮವಿಪಾಕ ! ನನ್ನ ತಿಶಯತಾತರ್ಯಸಾಹ ಸಾದಿಗಳೆಲ್ಲವೂ ತೇಜೋಮಯನಾದ ಭಾಸ್ಕರನ ದಿವ್ಯ ಕಿರಣರಾದೆಯಿಂದ ಕರಗಲ್ಪ ಡುವ ಮಂಜಿನಂತೆ ಮಾಯವಾದುವು ! ಯಾವದಿನ ಆವ ಮುಖವನ್ನು ಗೃಹಾಂತ ರಾಳದಲ್ಲಿ ಕಂಡೆನೋ ಅಂದೇ ನಾನು ಕರಗತನಾದೆನೆಂದು ಭಾವಿಸಿದೆನು. ಆವ ಮುಖವು ಒಂದು ಕಾಲದಲ್ಲಿ ತಮ್ಮಿಂದ ಆದರಿಸಲ್ಪಡುತ್ತಿದ್ದಿತೋ ಅದೇ ಆ ಮುಖವೇ ಈಗ ಅತಿಶಯವಾದ ಪಾಪರಾಶಿಯಿಂದ ಪರಿಪೂರ್ಣವಾಗಿ ಹೇಯವೂ, ಅತಿ ಭಯಂ ಕರವೂ ಆಗಿರುವುದು ! ಒಂದುವೇಳೆ ಪರವು ಮಿತ್ರರಾಗಿದ್ದವರು ಈಗ ಪರಸ್ಪರ ವಿರುದ್ಧ ಭಾವದಲ್ಲಿ ನಿಂತೆವು ! ಜಯಾಪೇಕ್ಷೆಯಿಂದ ಪರಸ್ಪರ ಅತಿ ಭಯಂಕರವಾದ ದ್ವಂದ್ವ ಯುದ್ಧವನ್ನು ಮಾಡಿದೆವು. ಆದರೇನು ? ಕರ್ಮಕ್ಕೆ ತಕ್ಕ ಫಲ!! ದೈವ ವ್ಯಾಪಾರವು ಅತಿಶಯವಾದುದು ! ಒಂದು ಪಕ್ಷದಲ್ಲಿ ಸದ್ದರ್ಮವೂ, ಇನ್ನೊಂದು ಪಕ್ಷದಲ್ಲಿ ಪರಹಿಂಸಾರೂಪವಾದ ಪಾಪವೂ, ಬೆಂಬಲವಾಗಿ ನಿಂತವು. ಅಧರ್ಮಕ್ಕೆ ಆಗಬೇಕಾದುದು ಆಯಿತು. ಪಾವಶೇಷದಿಂದಲೂ, ಕ್ರೂರ ಕೃತ್ಯಗಳಿಂದಲೂ, ಅಧೋ ಗತಿಗಿಳಿಯುತ್ತಿರುವ ನಾನು, ಪೂರ್ವಾರ್ಜಿತ ಸುಕೃತಸಾಮರ್ಥ್ಯದಿಂದ ಪ್ರಸಿದ್ಧರಾಗು ಕ್ಲಿರುವ ನಿಮ್ಮ ಉತ್ತಮ ಗುಣವನ್ನು ಆದೆಂದಿಗೂ ದ್ವೇಷಿಸುವವನಲ್ಲ. ಪೂರ್ವಾ ರ್ಜಿತ ಸುಕೃತದಿಂದ ನೀವು ಹೇಗೆ ಉತ್ನ ತಪದವಿಯನ್ನು ಪಡೆಯುತ್ತಿರುವಿರೋ ಹಾಗೆಯೇ ನಾನು ಚತುರೋಪಾಯಗಳಿಂದ ಸಾಧಿಸಬೇಕೆಂದಿದ್ದ ಸುಖ ಜೀವನಕ್ಕೆ ನೀವು ಅಡ್ಡಿಯಾದುದಕ್ಕೆ ಮಾತ್ರ ನಿಮ್ಮನ್ನು ಬಹಳವಾಗಿ ದ್ವೇಷಿಸುವೆನು. ಅದಕ್ಕೆ ಮಿತಿ ಯುಂಟೆ ? ಗಣನಾತೀತವಾದ ಆಶೆಗಳು ! ಮಿತಿಮೀರಿದ ದ್ವೇಷ !! ಅದಕ್ಕೇನ,ತಾನೆ ಮಾಡಬಲ್ಲೆ ? ಪ್ರತೀಕಾರವನ್ನೆ ಸಗಬೇಕೆಂಬ ಆಶೆ ! ಆದರೂ, ಕೇವಲ ಚೈತಸ್ಯ ಶೂನ್ಯ !! ನಿಮ್ಮನ್ನು ಜಯಿಸುವ ಭರವಸೆಯು ನನಗುಳಿಯಲಿಲ್ಲ !!! ಹಿಂಸಿಸಬೇಕೆಂಬ ವಾಂಛಿಯು ನನ್ನನ್ನು ಬಿಡಲಿಲ್ಲ ! ಅದಕ್ಕೆ ನಾನೇನು ಮಾಡುವೆನು ? ಇಗೋ ! ಸಾಯುವೆನು !!