ಪುಟ:ಕಾದಂಬರಿ ಸಂಗ್ರಹ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಅಂಬಾಲಿಕ ತನ್ನ ಮಾತೆಗೆ ತಿಳುಹಿದಳು. ಆಗ ರಾಣಿಯು ಕುಪಿತಳಾಗಿ, ಎಲ್ಲ ವನ್ನೂ ಭಗವತಿ ದಾಸನಿಗೆ ತಿಳುಹಿದಳು. ಅದಕ್ಕೆ ಅವನಾವ ಉತ್ತರವನ್ನೂ ಕೊಡಲಿಲ್ಲ ; ಆದರೆ, ಬಹಳ ಆಲೋಚನಾನಿಮಗ್ನನಾದನು, ಎರಡನೆಯ ಅಧ್ಯಾಯ. ಮಾರನೇ ದಿವಸ ಪ್ರಾತಃಕಾಲದಲ್ಲಿ ಮೋಹನ ಸಿಂಹನು ಅರಮನೆಯನ್ನು ಪ್ರವೇಶಿಸಿ ರಾಚಾ ಭಗವತೀ ದಾಸನನ್ನು ಕಂಡನು, ಮಂತ್ರಿ ಪುತ್ರನಿಗೆ ಅರಮನೆ ಯನ್ನು ಪ್ರವೇಶಿಸಲು ಅಧಿಕಾರವನ್ನು ಸ್ವಯಂ ಭಗವತೀದಾಸನೇ ಕೊಟ್ಟಿದ್ದನು, ಅದು ಕಾರಣ ಮೋಹನನು ಆರ ಆತಂಕವೂ ಇಲ್ಲದೆ ರಾಜನ ಇದಿರಿಗೆ ಬಂದು ನಿಂತನು. ಕುಶಲಪ್ರಶ್ನೆಗಳಾದನಂತರ ರಾಜನು, ಮೊಹನನು ಅರಮನೆಗೆ ಬಂದರ ಕಾರಣ ವನ್ನು ವಿಚಾರಿಸಿದನು. ಮೋಹನಸಿಂಹನು ಅದಕ್ಕೆ ಯಾವ ಪ್ರತ್ಯುತ್ತರವನ್ನೂ ಕೊಡದೆ ಮೌನವಾಗಿದ್ದನು. ಭಗವತಿ ದಾಸ :- ಮೋಹನಸಿಂಹ ! ನಿನ್ನೆಯದಿವಸದ ನಿನ್ನ ವರ್ತನವೆಲ್ಲವೂ ನನಗೆ ತಿಳಿಯಿತು. ಸಂಧ್ಯಾ ಕಾಲದಲ್ಲಿ ನೀನು ರಾಣೀವಾಸದ ಉಪನವನವನ್ನು ಏಕಕಿ ಯಾಗಿ ಒಳಹೊಕ್ಕುದು ಬಹಳ ತಪ್ಪ” . ಮೋಹನಸಿಂಹ- (ನಿರುತ್ತರು. ಭಗವತೀದಾಸ-ಮಂತ್ರಿ ಕುಮಾರ! ನಿನ್ನ ಅಪರಾಧವನ್ನು ಪ್ರಚ್ಛನ್ನವಾಗಿಟ್ಟು ಕೊಂಡು ಮರೆತುಬಿಡುವೆನೆಂದು ತಿಳಿಯಬೇಡ : ಶೀಘ್ರದಲ್ಲಿ ಅದಕ್ಕೆ ತಕ್ಕ ಶಿಕ್ಷೆ ಯನ್ನು ವಿಧಿಸುವೆನು, - ಮೋಹನಸಿಂಹ-ಮಹಾರಾಜ! ದುಡುಕಬೇಡಿರಿ, ನಿಮ್ಮ ಮಗಳ ಮತ್ತು ನಿಮ್ಮ ರಾಜ್ಯದ ಮಂಗಳದ ಮೇಲೆ ದೃಷ್ಟಿಯನ್ನಿಟ್ಟು ಚೆನ್ನಾಗಿ ಆಲೋಚಿಸಿ ಮಾತ ನಾಡಿರಿ, ಇಲ್ಲವಾದರೆ ಬಹಳ ವ್ಯಥೆಗೀಡಾಗುವಿರಿ. ಭಗವತೀದಾಸ-ಎಲಾ, ಪಾಪಿ! ಅಧ!! ಇಂದು ನೀನು ನನ್ನ ಪವಿತ್ರ ವಾದ ಕುಲಕ್ಕೇ ಕಳಂಕವನ್ನು ತಂದೊಡ್ಮಿರುವಿ. ಈ ಉಪಕಾರಕ್ಕಾಗಿ ನಿನಗೆ ನನ್ನ