ಪುಟ:ಕಾದಂಬರಿ ಸಂಗ್ರಹ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಅಂಬಾಲಿಕ್ಕೆ 1 ) ದುರ್ಗದಿಂದ ನಾಗೂರು ಸುಮಾರು ಹದಿನೈದು ಜೋಶಗಳಷ್ಟು ದೂರದಲ್ಲಿ ದ್ವಿತು, ನಾವು ಆವಕಾಲದ ಚರಿತ್ರೆಯನ್ನು ವಿವರಿಸಲೆಳಸಿರುವೆವೋ, ಆಕಾಲದಲ್ಲಿ ಮುಜ ಫರಖಾನನೆಂಬುವನು ನಾಗೂರಿನ ಅಧಿಪತಿಯಾಗಿದ್ದನು. ಮುಜಫರನು ವಿನಯ, ವಾಪ ಭೀತಿ, ಮುಂತಾದ ಸನ್ಮಾರ್ಗಗಳ ವಾಸನೆಯನ್ನೇ ತಿಳಿಯದ ಮತ್ತು, ಆಪ್ರಮಾಣಿಕತೆ, ಇಂದ್ರಿಯ ಪಾರವಶ್ಯ, ವ್ಯಭಿಚಾರ, ವಂಚನೆ, ಇತ್ಯಾದಿ ದುರಾಚಾರಗಳಿಂದ ಕೂಡಿದ ಅಧರ್ಮೈಕನಿರತನಾಗಿದ್ದನೆಂದರೆ ಸದ್ಯಃ ಸಾಕಾಗಿರುವುದು. ಪ್ರದೋಷಕಾಲದ ಹೊತ್ತಿಗೆ ಮೋಹನಸಿಂಹನು, ಅರಮನೆಯ ಮುಂದೆ ಬಂದು ನಿಂತು, ಒಬ್ಬ ಚಿತ್ರಗಾರನು ತನ್ನ ಚಿತ್ರಪಠಗಳೊಂದಿಗೆ ಬಂದಿರುವನೆಂದು ಹೇಳಿ ಕಳುಹಿಸಿದನು, ನಿರಂತರವೂ ಸ್ವಾರ್ಥ ದಲ್ಲಿಯೇ ಆಸಕ್ತನಾಗಿರುತ್ತಿದ್ದ ಆ ರಾಜನಿಗೆ ಮತ್ತಾವ ಕೆಲಸವೂ ಇಲ್ಲದಿದ್ದುದರಿಂದ, ಅಂದು ಅವನು ಪ್ರಮೋದದ ಉದ್ಯಾನದಲ್ಲಿ ಕುಳಿತು ಸುರೆಯನ್ನು ಸೇವಿಸುತಲಿದ್ದನು. ಮೋಹನನ ಬರುವಿಕೆಯನ್ನು ತಿಳಿದೊಡನೆಯೇ ಅವನಿದ್ದೆಡೆಗೆ ಬಂದು, 11 ಎಲ್ಲಿ ? ನಿನ್ನ ಚಿತ್ರಪಟಗಳನ್ನು ತೆಗೆದು ತೋರಿಸು.” ಎಂದನು, ಆಗ ಮೋಹನನು ತನ್ನ ಕಂಕುಳಿನಲ್ಲಿದ್ದ ಗಂಟನ್ನು ಬಿಚ್ಚಿ ಚಿತ್ರ ಪಠಗಳನ್ನು ಒಂದೊಂದಾಗಿ ತೆಗೆದು ತೋರಿಸುತ್ತೆ, “ ಮಹಾಪ್ರಭು ! ನಾನೊಬ್ಬ ಪ್ರಸಿದ್ಧನಾದ ಚಿತ್ರಗಾರನು, ರಾಜಾಸ್ಥಾನದ ರಾಜರುಗಳೆಲ್ಲರೂ ತಂತಮ್ಮ ಮತ್ತು ತಂತಮ್ಮ ಮನೆಯವರ ಚಿತ್ರಗಳನ್ನು ಬರೆಯಿಸಿಕೊಳ್ಳುವುದಕ್ಕೆ ನನ್ನನ್ನೇ ಕರೆಸುವರು. ನನ್ನಲ್ಲಿರುವ ಚಿತ್ರಗಳಲ್ಲಿನ ಎಲ್ಲಾ ಮನುಷ್ಯರನ್ನೂ ನಾನೇ ಸ್ವತಃ ನೋಡಿ ಬಂದಿರುತ್ತೇನೆ. ಈಗೈ ಸುಮಾರು ಎರಡು ತಿಂಗಳುಗಳ ಕೆಳಗೆ ಮೇವಾರದ ರಾಣಾರವರು ತಮ್ಮ ಚಿತ್ರಪಠ ವನ್ನು ತಯಾರುಮಾಡುವುದಕ್ಕಾಗಿ ನನ್ನನ್ನು ಕಳುಹಿದ್ದರು. ಆಗ ಅವರು ನನ್ನ ಬುದ್ಧಿ ಕುಶಲತೆಗೆ ಮೆಚ್ಚಿ ಒಂದು ಸಹಸ್ರ ವರಹಗಳನ್ನು ಪಾರಿತೋಷಿಕವಾಗಿ ಕೊಟ್ಟರು. ಅನಂತರ ನಾನು ಯೋಧಪುರದ ರಾಯರವರ ಚಿತ್ರವನ್ನು ತಯಾರುಮಾಡಿ ಅವರಿಂದ ದೊಡ್ಡ ಬಹುಮಾನವನ್ನು ಪಡೆದೆನು. ಮೊನ್ನೆ ತಾನೆ ದುರ್ಗದ ಭಗವತೀದಾಸರವರು ತಮ್ಮ ಕುವರಿಯ ರೂಪನ್ನು ಚಿತ್ರಿಸುವುದಕ್ಕಾಗಿ ನನ್ನನ್ನು ತಮ್ಮ ಬಳಿಗೆ ಕರೆಯಿಸಿ ದ್ದರು. ಸ್ವಲ್ಪ ಕಾಲದಲ್ಲಿಯೇ ನಾನು ಆ ರಾಜಕುಮಾರಿಯ ಅಸಮಾನವಾದ ರೂಪನ್ನು ಬಹಳ ಅಂದವಾಗಿ ಚಿತ್ರಿಸಿದೆನು. ಅದಕ್ಕಾಗಿ ಅವರು ಪಾರಿತೋಷಿಕವಾಗಿ ಒಂದು ಅಮೂಲ್ಯವಾದ ಮುತ್ತಿನ ಹಾರವನ್ನು ಕೊಟ್ಟು ದೂ ಅಲ್ಲದೆ, ನನಗೆ ಕಷ್ಟ ಕಾಲವು ಸಂಪ್ರಾಪ್ತವಾದಾಗ ತಮ್ಮ ಬಳಿಗೆ ಬರಬಹುದೆಂದು ತಮ್ಮ ಅನುಜ್ಞೆಯನ್ನಿತ್ತಿರುತ್ತಾರೆ.