ಪುಟ:ಕಾದಂಬರಿ ಸಂಗ್ರಹ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಅಂಬಾಲಿಕೆ ಚಾಕರನು:-ಹುಜೂರ್ ! ಈ ಮನುಷ್ಯನು ರಜಪೂತನು, ಬಹಳ ಕೆಟ್ಟ ಎಧರ್ಮಿಗಳ ಜಾತಿಗೆ ಸೇರಿದವನು. ಇವನು ಗೂಢಚಾರನಿರಬಹುದು. ಈ ಕಾಫರ ರನ್ನು ನಂಬುವುದಕ್ಕಾಗುವುದಿಲ್ಲವಾದುದರಿಂದ ಇವನನ್ನು ತಟ್ಟನೆ ಅಂಥಾ ಭಾರೀ ಚಾಕರಿಯಲ್ಲಿಟ್ಟು ಕೊಳ್ಳುವುದು ಬಹಳ ಅಪಾಯಕರವು. ಅದಕ್ಕೆ ಮುಜಫರನು, “ ನೀನು ಹೇಳಿದುದೂ ಉಚಿತವಾಗಿ ತೋರುತ್ತದೆ (ಮೋಹನನ ಕಡೆ ತಿರುಗಿ), ಆಯ್ಯಾ ! ಚಿತ್ರಗಾರ ! ನೀನು ನನ್ನ ಚಿತ್ರಪರವೊಂದನ್ನು ಬರೆ, ಅದನ್ನು ನೋಡಿ ನಂಬುಗೆಯುಂಟಾದರೆ ನಿನ್ನನ್ನು ಚಾಕರಿಯಲ್ಲಿ ನಿಯಮಿಸುವೆವು. ಅದಕ್ಕೆ ಸಮ್ಮತಿಸಿ, ಮೋಹನಸಿಂಹನು ಮಾರನೇ ದಿನ ಮುಜಫರನ ಚಿತ್ರಪಠ ವೊಂದನ್ನು ಬಹಳ ಸುಂದರವಾಗಿ ತಯಾರುಮಾಡಿಕೊಟ್ಟನು. ಚಿಕ್ಕಂದಿನಿಂದಲೂ ಚಿತ್ರಬರೆವ ವಿದ್ಯೆಯನ್ನು ಬಹಳ ಶ್ರಮದಿಂದ ಅಭ್ಯಾಸಮಾಡಿದ್ದನಾದುದುಂದ ಅವನಿಗೆ ಅದು ಕಷ್ಟಕರವಾಗಿ ತೋರಿಬರಲಿಲ್ಲ. ಮುಜಫರನು ಮೋಹನನ ಕೌಶಲಕ್ಕೆ ಮೆಚಿ ಅವನನ್ನು ತನ್ನ ಅಂಗರಕ್ಷಕರಲ್ಲೋರ್ವನನ್ನಾಗಿ ನಿಯಮಿಸಿದನು. ಮೋಹನಸಿಂಹನಿಗೆ ತನ್ನ ಇಷ್ಟ ಪೂರ್ತಿಯಾದುದಕ್ಕೋಸ್ಕರ ಬಯಳ ಆಮೋದ ವುಂಟಾಯಿತು. 4 ನಾಲ್ಕನೆಯ ಅಧ್ಯಾಯ. ಮುಜಫರನು ಕಾಮಾಂಧನಾದನು, ನಮ್ಮ ಪ್ರಿಯ ಪಾತಕ ಪಾಠಕಿಯರಿಗೆ ಚಿರಪರಿಚಿತನಾದ ಪುಷ್ಪಶರನ ಪ್ರಬಲಾವೇಶಕ್ಕೆ ಮುಜನರನು ಸಿಕ್ಕಿ ಬಿದ್ದನು, ಅಂಬಾಲಿ ಕೆಯ ಚಿತ್ರ ಪಠವನ್ನು ನೋಡಿದಂದಿನಿಂದ ಅವನ ಮನಸ್ಸೇ ಬೇರೇ ಕಡೆಗೆ ತಿರುಗಿತು. ತನ್ನ ರಾಣೀವಾಸದ ಮುಸಲ್ಮಾನ ಬೇಗನುಗಳನ್ನು ಕಂಡರೆ ಆಲಸ್ಯವನ್ನು ತೋರ್ಪಡಿ ಸಲಾರಂಭಿಸಿದನು. ಸುರೆಯನ್ನು ಪಾನಮಾಡಿದಾಗ:ತೂ ಉನ್ಮತ್ತನಾಗಿ ಜ್ಞಾನರಹಿತ ನಾಗುತ್ತಿದ್ದನು. ಕೊನೆಗೆ ಮೋಹನಸಿಂಹನ ಹೇಳಿಕೆಯಪ್ರಕಾರ ಅಂಬಾಲಿಕೆಯನ್ನು ತನಗೇ ವಿವಾಹಮಾಡಿಕೊಡಬೇಕೆಂದು ಭಗವತೀದಾಸನಿಗೆ ಆಜ್ಞಾಪಿಸಿದನು. - ರಜಪೂತರು ಉತ್ತಮಟಾತಿಯವರು. ಯುದ್ಧ ಮಾಡಬಲ್ಲರು, ದೇಶಹಿತಕ್ಕಾಗಿ ತಮ್ಮ ಪ್ರಾಣಗಳನ್ನಾ ದರೂ ಅರ್ಪಿಸಬಲ್ಲರು, ಆದರೆ, ಅವರು ಅಪಮಾನವನ್ನು