ಪುಟ:ಕಾದಂಬರಿ ಸಂಗ್ರಹ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ ಮಾತ್ರ ಸೃರಿಸಲಾರರು. ಈ ಸಮಾಚಾರವನ್ನು ಕೇಳಿದೊಡನೆಯೇ ಭಗವತೀದಾಸನ ನೇತ್ರಗಳಲ್ಲಿ ದ್ವೇಷಾನಲವು ಪ್ರಕಾಶಿಸಲಾರಂಭವಾಯಿತು ; ಮಬ್ಬು ಗಂಟಿಕ್ಕಿದನು, ಮುಖವು ರೌದ್ರಾಕಾರವನ್ನು ತಾಳಿದುದು, ಶರೀರದಲ್ಲಿ ರೋಮೋದ್ಯಮವಾದುದು, ಅವನ ಹಸ್ತವು ಸಮೀಪದಲ್ಲಿದ್ದ ಕಬ್ಬುನದ ಅಸಿಯನ್ನೆಳೆಯಿತು. ರಾಜನು ಈ ಸಮಾಚಾರವನ್ನು ತಂದ ದೂತನನ್ನು ಸಮಾಪ್ತಿಗೊಳಿಸುವುದರಲ್ಲಿದ್ದನು, ಅಷ್ಟ ರಲ್ಲಿಯೇ ವಿಕ್ರಮಸಿಂಹನೇ ಮುಂತಾದವರು ಬಂದು ರಾಜನಿಗೆ ಬುದ್ದಿವಾದವನ್ನು ಹೇಳಿ ತಡೆದರು. ಆದರೆ ಭಗವತೀದಾಸನ ಕೊಧವು ತೃಣಮಾತ್ರವೂ ಕುಂದಲಿಲ್ಲ: ಕ್ಷಣೇಕ್ಷಣೇ ಆಧಿಕ್ಯವನ್ನು ಕಳೆಯಲಾರಂಭವಾಯಿತು. ಭಗವತೀದಾಸನಿಗೆ, ಈ ಹಾಳು ಯವನರಾಜ್ಯ ವೃಕ್ಷದ ಬೇರನ್ನೇ ಕಿತ್ತು ಬಿಸುಟು, ಅವರನ್ನು ಭಾರತ ವರ್ಷ ದಿಂದಲೇ ಹೊರದೂಡಬೇಕೆಂಬುವಷ್ಟರಮಟ್ಟಿಗೆ ಕೋಪಬಂದಿತು, ಆದರೆ, ರಾಜ ಧರ್ಮದ ಮೇಲೆ ದೃಷ್ಟಿಯನ್ನಿಟ್ಟು ಮುಜಫರನ ದೂತನನ್ನು ಸಂಹರಿಸಲಿಲ್ಲವಾದರೂ ಅವನನ್ನು ಚೆನ್ನಾಗಿ ಬಯ್ಯು ಅಪಮಾನಗೊಳಿಸಿ ಕಳುಹಿಸಿದನು. ಇದಾದ ಕೆಲವು ದಿನಗಳ ಬಳಿಕ ಒಂದು ದಿವಸ ಮಂತ್ರಿಯಾದ ವಿಕ್ರಮ ಸಿಂಹನು ಬಂದು ರಾಜನನ್ನು ಕಂಡು ಮಾತನಾಡಿದನು. ವಿಕ್ರಮಸಿಂಹ----ಮಹಾರಾಜ ! ಆ ವಿಷಯವನ್ನು ಆಗಲೇ ಮರೆತುಬಿಟ್ಟಿರು " ವಂತೆ ಕಾಣುತ್ತದೆ. ಭಗವತೀದಾಸ -ಆದುವುದು, ಅಂತರ ವಿಷಯ ? ವಿಕ್ರಮಸಿಂಹ-ಮುಜಫರನ ವಿಷಯ. ಭಗವತೀದಾಸ-ಅದನ್ನೆ ? ಅದನ್ನು ಮರೆಯುವುದೆಂದರೇನು ? ಅದು ಈಗಲೂ ನನ್ನ ಸ್ಮತಿಪಥದಲ್ಲಿರುವುದು, ಅದು ಹಾಗಿರಲಿ, ಈಗ ಅವನ ಸಮಾಚಾರ ವೇನು ? ವಿಕ್ರಮಸಿಯ:-ಮಹಾರಾಜ ! ತಾವು ಅವನ ದೂತನನ್ನು ತಿರಸ್ಕರಿಸಿದು ದರಿಂದ ಕುಪಿತನಾದ ಮುಜಫರನು, ನನ್ನ ಪುತ್ರನಾಗಿದ್ದ ಮೋಹನಸಿಂಹನ ಹೇಳಿಕೆಯ ಪ್ರಕಾರ ನಮ್ಮ ಮೇಲೆ ದಂಡೆತ್ತಿ ಬರುತ್ತಿರುವನು, ಭಗವತೀದಾಸ :-ಇದು ನಿಜವೆ? ವಿಕ್ರಮಸಿಂಹ :----ಅಹುದು, ನನ್ನ ಗುಪ್ತಚರರಲ್ಲೋರ್ವನು ಬಂದು ಹೇಳಿದನು.