ಪುಟ:ಕಾದಂಬರಿ ಸಂಗ್ರಹ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಅಹುದು,.-ಈ ರಾತ್ರಿಯೇ. ಈ ಕ್ಷಣವೇ. ಅಪ್ಪಣೆ, ಹುಜೂರ್‌. ತರುವಾಯ ಮೊಹನನು ಅಲ್ಲಿ ನಿಲ್ಲಲಿಲ್ಲ. ಎಲ್ಲಿಗೋ ಹೊರಟು ಹೋದನು. ಏಳನೆಯ ಅಧ್ಯಾಯ. (ಉಪಸಂಹಾರವು.) ರಾಣಿಯ ಮಗಳೂ ಮುಜಫರನ ಬಂದಿಗಳಾದರು. ಮುಜಫರನ ಸಂತೋ ಷಕ್ಕಂತೂ ಪಾರವೇ ಇಲ್ಲ, ಒಂದುದಿವಸ ಮುಜಫರನು ಸುರೆಯನ್ನು ಕುಡಿದು ಉನ್ಮತ್ತನಾಗಿ, ರಾಯ ಕುವರಿಯಮೇಲೆ ಅತ್ಯಾಚಾರವನ್ನು ಮಾಡಲುದ್ದೇಶಿಸಿ ಬಂದಿಗಳ ಮನೆಯನ್ನು ಹೊಕ್ಕನು. ಅವನು ಅಂಬಾಲಿಕೆಯ ಮಾನವನ್ನ ಪಹರಿಸಲುದ್ಯುಕ್ತನಾಗಲು, ಆಗ ಅವಳು ತನ್ನ ಮಡಿಲಿನಿಂದ ಚೂರಿಯೊಂದನ್ನು ತೆಗೆದು ಅತ್ಮಹತ್ವವನ್ನು ಮಾಡಿಕೊಂಡಳು. ಆಕೆಯ ಸುಲಲಿತವಾದಾದೇವವೃಕ್ಷವು ಕಡಿದು ಭೂಚುಂಬನ ಮಾಡಿದುದು ೬೦ಬಾ ಲಿಕೆಯಾದರೋ ಪರಲೋಕದ ಅನಂತ ಸುಖಧಾಮಕ್ಕೆ ಹೊರಟು ಹೋದಳು. ರಾಣಿ ಯಾದರೋ ಮುಜಫರನ ಬಳಿ ಇನ್ನೂ ಬದಿ ! ಕೊನೆಗೆ ರಾಚಾ ಭಗವತೀದಾಸನು ರಾಯಕರ್ಣನ ಸಹಾಯದಿಂದ ಮುಬ ಫರನನ್ನು ಅವನ ಸೇನೆಯೊಡನೆ ಕೊಂದು ತನ್ನ ರಾಣಿಯನ್ನು ಬಿಡಿಸಿಕೊಂಡನು. ಮಗಳು ಸತ್ತ ಸಮಾಚಾರವನ್ನು ಕೇಳಿದೊಡನೆಯೇ ಮರ್ಧೆಹೋದನು. ಸ್ವಲ್ಪಕಾಲದಮೇಲೆ ವಿಚಾರಿಸಲು ಆತನು ಪನರಪಿ ದುರ್ಗದಲ್ಲಿ ರಾಜ್ಯಭಾರಮಾಡುತಿದ್ದನೆಂದು ತಿಳಿಯಿತು, ಇದಾದ ಹತ್ತು ದಿನಗಳಮೇಲೆ ಬೆಸ್ತರವನೊಬ್ಬನು ಒಂದುಶವವನ್ನು ತಂದನು. ಶವವು ಅಪರಿಚಿತನದೇನೂ ಆಗಿರಲಿಲ್ಲ. ರಾಜನೇ ಮುಂತಾದವರೆಲ್ಲರೂ ಅದನ್ನು ಮೊಹನನ ಶವವೆಂದು ನಿರ್ಧರಿಸಿದರು. ಆಗಲೂ ಸಹ ವಿಕ್ರಮಸಿಂಹನ ಕಂಗಳಿಂದ ಒಂದುತೊಟ್ಟು ನೀರೂಸಹ ಬಾರಲಿಲ್ಲ. ಇದಲ್ಲವೆ ರಜಪೂತರ ಸೈರ್ಯ ! ಕೊನೆಗೆ ವಿಕ್ರಮಸಿಂಹನು ನಿರ್ದೋಷಿಯೆಂಬುದು ವ್ಯಕ್ತವಾಯಿತು,

  • ತರುವಾಯ ರಾಚಮಂತ್ರಿಗಳು ಪ್ರಜೆಗಳನ್ನು ಚಿರಕಾಲ ಬಹಳ ಚೆನ್ನಾಗಿ ಪರಿಪಾಲಿಸಿದರು, ಆದರೆ ಅವರು ಅಂಬಾಲಿಕೆಯ ವಿಷಯವು ಜ್ಞಾಪಕಬಂದಾಗಲೆಲ್ಲಾ ಬಹಳ ದುಃಖಿತರಾಗುತ್ತಿದ್ದರು.

ಸಂಪೂರ್ಣ,