ಪುಟ:ಕಾದಂಬರಿ ಸಂಗ್ರಹ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರಿ ಸಂಗ್ರಹ, ಅವರೆಲ್ಲರೂ ಹೋದ ಮೇಲೆ ಕಾ೪ಚರಣನು ತಾನು ಕಟ್ಟನ್ನು ಕೀಳಲು ಪ್ರಯತ್ನಪಟ್ಟು ನೋಡಿದನು. ಸಾಧ್ಯವಾಗಲಿಲ್ಲ ! ಕಾಲವಿಳಂಬಕ್ಕೆ ಅವಕಾಶವಿಲ್ಲ ! ! ತನ್ನಿಂದಾಗಬೇಕಾದ ಕೆಲಸಕ್ಕಾದರೂ ಮಿತಿಯಿಲ್ಲ !! ಆಗೇನು ಮಾಡುವುದು ? ಮೇಲಿಂದ ಮೇಲೆ ಸಹಸವಾಡಿ ನೋಡಿದನು ! ಸಾಹಸವೆಲ್ಲವೂ ಕೇವಲ ನಿರರ್ಥಕ ! ನಿಪ್ಪಲ್ !! ಕಾಳಿಚರನು ತಾನೆಂತು ಬಿಡಿಸಿಕೊಳ್ಳುವುದು ? ತನ್ನ ಮುಂದಿನ ಪರಿಣಾಮವೇನು ? ಎಂದು ಮೊದ ಲಾಗಿ ಆಲೋಚಿಸುತ್ತಿರಲು, " ಅವನು ಸಹಾಯ ರಹಿತನಾಗಿ ಬಿದ್ದುಕೊಂಡು ಏನು ಮಾಡುತ್ತಿರುವನು ? ಈ ಬಂಧನದಿಂದ ಹೇಗೆ ಮುಕ್ತನಾಗುವನು ? ” ಎಂತಂದುಕೊಂಡು ನೋಡಲು ಕುತೂಹಲಯುಕ್ತನಾಗಿರುವನೋ ಎಂಬಂತೆ ಕುಮುದಬಾಂಧವನು ಪೂರ್ವಾದಿ)ಯನ್ನಡರಿಸುತ್ತಲೂ ನೋಡತೊಡಗಿ ದನು ! ಚಂದನ ಅಂದವಾದ ಮುಖದಿಂದ ಹೊರಸೂಸುತ್ತಿದ್ದ ಸಚ ತರ ಮರೀಚೆಗಳು ಅವನಿಯನ್ನು ಅಂದವಾಗಿ ಅಲಂಕರಿಸುತ್ತಿದ್ದುವು. ಆನಂದ ದಾಯಕವಾದ ಆ ಅಮೃತಕಿರಣಗಳು ಆ ಮುರುಕು ಮನೆಯನ್ನಾವರಿಸಿ ಅಲ್ಲಲ್ಲಿದ್ದ ಸಂದುಗಳ ಮಾರ್ಗವಾಗಿ ಮನೆಯೊಳಗೂ ಪ್ರವೇಶಿಸಿದವು. ರಾರಾಜಿಸುತ್ತಿರುವ ರಜನೀಪತಿಯನ್ನು ಕಂಡು, ಕಾಳಿಚರಣಸಿಗೆ ಮನಸ್ಸಿನಲ್ಲಿ ಒಂದು ವಿಧವಾದ ಅನಿರ್ವಚನೀಯವಾದ ಆನಂದವು ಅಂಕುರಿಸಿ ಪುನಃ ಆ ಬಂಧನದಿಂದ ವಿಮುಕ್ತನಾಗಲು ಪ್ರಯತ್ನಿಸಿದನು | ಸಮೀಪ ದಲ್ಲಿಯ ಗತಾಣವಾಗಿ ಬಿದ್ದಿದ್ದ ಮನುವನ್ನು ಕಂಡನು. ಆಗ ಒಂದು ಉದಯವು ತಲೆದೋರಿತು ! ಸಹಸು ಆ ಶವದ ಕಡೆಗೆ ಉರುಳಿಕೊಂಡು ಸೂದನು !! ಶವದ ಮೇಲೆ ಮುಖವನ್ನಿಟ್ಟು ಹುಡುಕಿದನು ! ! ! ಅವನು ನಂದಕ್ಕೆ ಮಿತಿಯಿಲ್ಲದಂತಾಯಿತು ! ಅದೇಕೆ ? ವನ್ನು ವಿನ ಹೃದಯದಲ್ಲಿ ನಾಟಕೊಂಡಿದ್ದ ಚೂರಿಯು ಹಾಗೆಯೇ ಇದ್ದಿತು ! ! ಅವನಿಗೆ ಬೇಕಾಗಿ ದ್ದುದೂ, ಅದೆ ! ! ! ಅದನ್ನು ಹಲ್ಲುಗಳಿಂದ ಕಜಿ, ಸೆಳೆದುಕೊಂಡು ಕಾಲಿಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಲುಪಕ್ ಮಿಸಿದನು ! ಸ್ವಲ್ಪ ಕಾಲದಲ್ಲಿಯೇ ಕತ್ತರಿಸಿದನು. ಕಾಲುಗಳ ಬಂಧನವು ನಿವೃತ್ತಿಯಾಯಿತು ! ! ! ಕೈಯಲ್ಲಿ ಚ್ಚುವು ಕಬ್ಬಿಣದ ಕೊಳಗಳು ! ಅವುಗಳ ಮೇಲೆ ಚೂರಿಯ ಸಹಸವೆ ? ಚರಿಯನ್ನು ಹಿಗದನು. ಅದಕ್ಕೂ ಒಂದುಪಯವು ತಲೆದೋರಲು