ಪುಟ:ಕಾದಂಬರಿ ಸಂಗ್ರಹ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಪಾಠಕವರ್ಗ 1 ಇದು ( ರಾಜಾಸ್ಥಾನದ ಇತಿಹಾಸ ಮಂಜರಿ' ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು. ಗ್ರಂಥವು ಚಿಕ್ಕುದಾದರೂ ಹಲವು ನೀತಿಗಳು ಅಡಕವಾಗಿ ರುವುವು. ವಿದ್ಯಾರ್ಥಿಯಾದ ನನ್ನ ಈ ಅಲ್ಪ ಲೇಖನವು ಪಾಠಕ ಪಾಠಕಿಯರೆಲ್ಲರಿಂದ ಸಮಾವೃತವಾದುದಾದರೆ ನಾನು ಕೃತಾರ್ಥನೇ ಸರಿ, ಇದರಲ್ಲಿನ ಸ್ಟಾಲಿತ್ಯಗಳನ್ನು ಆರಾದರೂ ತಿಳಿಯಪಡಿಸುವುದಾದರೆ ಅವುಗಳನ್ನು ಮುಂದಣ ಮುದ್ರಣದಲ್ಲಿ ಸರಿ ಪಡಿಸುವೆನು, 2. ಇದನ್ನು ಅನತಿಕಾಲದಲ್ಲೇ ಪ್ರಚುರಗೊಳಿಸಿದ ವೇ|| ಬ್ರ|| ಚಾಮರಾಜನಗರದ ವೆಂಕಟರಮಣ ಶಾಸ್ತ್ರಿಗಳವರ ಮಹೋಪಕಾರವು ನನ್ನ ಹೃದಯದಲ್ಲಿ ಚಿರಸ್ಥಾಯಿ ಯಾಗಿರುವುದು. ಇದರಂತೆಯೇ ಎಲ್ಲರೂ ನನ್ನ ಇತರ ಗ್ರಂಥಗಳಿಗೂ ಉತ್ತೇಜನ ಕೊಡುವರೆಂ ಬುದೇ ನನ್ನ ನಂಬುಗೆ, ಮತ್ತು ಕಂ|| ಸದೆಯೇ ಭಕುತರ ಸಿರಿಯೇ | ಸದಮಲ ಹೃದಯೇ ಸಮನ್ವಿತತುಲ ಸಹಾಯೇ || ಹದುಳಿ ನನಿಲಯೇ, ಎನಯೇ | ಮುದದಿಂ ಪೊರೆಯುವುದು ಸಂಗ್ರಹನ ವಿಧಿಜಾಯೇ || ಇತಿ ಬೆಂಗಳೂರು) ೧-೧೦-೧೯೧೬, ಜೆ ಕೃಷ್ಣಮೂರ್ತಿ,